ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ 83ನೇ ಜನ್ಮದಿನಾಚರಣೆ

KannadaprabhaNewsNetwork | Updated : May 25 2025, 01:21 AM IST
26 ರಂದು ಶ್ರೀಗಳ 83ನೇ ಜನ್ಮದಿನಾಚರಣೆ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ರುದ್ರ ಹೋಮ, ಆಯುಷ್ಯ ಹೋಮ, ರುದ್ರ ಅಭಿಷೇಕ ಹಾಗೂ ನಾದ ಮಂಟಪ
Follow Us

ಕನ್ನಡಪ್ರಭ ವಾರ್ತೆ ಮೈಸೂರುನಗರದ ಅವಧೂತ ದತ್ತ ಪೀಠದಲ್ಲಿ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವ, ನಾದಮಂಟಪದ 27ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ 83ನೇ ಜನ್ಮದಿನಾಚರಣೆ ಪ್ರಯುಕ್ತ ಮೇ 25 ರಿಂದ ಜೂ. 1ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.ಮೇ 25 ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ ಶೇಷ‌ವಾಹನ ಉತ್ಸವ ಶ್ರೀ ದತ್ತ‌ದವೆಂಕಟೇಶ್ವರ ದೇವಾಲಯದಲ್ಲಿ ನೆರವೇರಲಿದೆ. 26ನೇ ಬ್ರಹ್ಮೋತ್ಸವ ಮತ್ತು ಶ್ರೀಗಳ 83ನೇನೆ ಜನುಮದಿನ ಉತ್ಸವಕ್ಕೆ ಚಾಲನೆ ದೊರೆಯಲಿದೆ.26 ರಂದು ಶ್ರೀಗಳ 83ನೇ ಜನ್ಮದಿನಾಚರಣೆ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ರುದ್ರ ಹೋಮ, ಆಯುಷ್ಯ ಹೋಮ, ರುದ್ರ ಅಭಿಷೇಕ ಹಾಗೂ ನಾದ ಮಂಟಪದಲ್ಲಿ ಶ್ರೀ ಚಕ್ರ ಪೂಜೆ, 9ಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಪ್ರತ್ಯಕ್ಷ ಪಾದ ಪೂಜೆಯನ್ನು ಅವಧೂತ ದತ್ತಪೀಠದ ಕಿರಿಯಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವೇರಿಸುವರು.ಅಂದು ಬೆಳಗ್ಗೆ 10 ಗಂಟೆಗೆ ಚೈತನ್ಯ ಅರ್ಚನ- ದತ್ತ ಪೀಠದ ಬಿರುದಾದ ವೇದ ನಿಧಿ-ಶ್ರೀಯನ್ನು ವಿಷ್ಣುಭಟ್ಲ ಲಕ್ಷ್ಮೀ ನಾರಾಯಣ ಘನಪಾಠಿ, ಶಾಸ್ತ್ರ ನಿಧಿಶ್ರೀ ಜಿ.ಎಸ್.ವಿ ದತ್ತಾತ್ರೇಯ ಮೂರ್ತಿ, ನಾದ ನಿಧಿ ಪಂ. ವಿನಾಯಕ ತೊರವಿ,ನಾದ ನಿಧಿ ವಿದ್ವಾನ್ ಶಶಾಂಕ್ ಸುಬ್ರಮಣ್ಯಂ, ನಾಟ್ಯ ನಿಧಿ ವಿದುಷಿ ಟಿ.ಎಸ್. ಶ್ರೀಲಕ್ಷ್ಮಿ, ಆಸ್ಥಾನ ಶಿಲ್ಪಿ ಕೃಷ್ಣಮೂರ್ತಿ, ಜಯಲಕ್ಷ್ಮಿ ಪುರಸ್ಕಾರ ಗಂಗಾವರಂ ವೇದಾವತಿ ಮತ್ತು ಗೀತಾ ಪುಂಜಾಲ, ದತ್ತ ಪೀಠ ಬಂಧು ಕಮಲ್ ಕಪೂರ್ ಶ್ರೀ ಕಂಟೇಟಿ ಶ್ರೀನಿವಾಸ್ ಹಾಗೂ ಎಸ್ ನಾಗರಾಜ, ಸಸ್ಯ ಬಂಧು ಸುಚಿತಾ ರೆಡ್ಡಿ ಅವರಿಗೆ ಪ್ರದಾನ ಮಾಡಲಾಗುವುದು.ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಸಂಗೀತ ಕಾರ್ಯಕ್ರಮ‌ವಿದುಷಿ ಗೋಪಿಕಾ ಪೂರ್ಣಿಮಾ ಮತ್ತು ವಿದ್ವಾನ್ ಮಲ್ಲಿಕಾರ್ಜುನ್ ಅವರಿಂದ, ಸಂಜೆ 5ಕ್ಕೆ ಶ್ರೀದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಸಿಂಹ ವಾಹನ ಉತ್ಸವ, 6 ಗಂಟೆಗೆ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರು ನಾದಮಂಟಪದ 27ನೇ‌ವಾರ್ಷಿಕೋತ್ಸವ ಉದ್ಘಾಟಿಸುವರು. ಸಂಜೆ‌7‌ಗಂಟೆಗೆ ದತ್ತ ಪೀಠ ಆಸ್ಥಾನ ವಿದುಷಿಗಳು- ಸರ್ವೆಪಲ್ಲಿ ಸಹೋದರಿಯರಾದ ವಿದುಷಿ ಡಾ. ಶ್ರೀಯ, ಡಾ ರಾಜಲಕ್ಷ್ಮಿ ಅವರಿಂದ ಕರ್ನಾಟಕ ಗಾಯನ ಯುಗಳ ಗೋಷ್ಠಿ ನಡೆಯಲಿದೆ.ಮೇ 27ರಂದು ಬೆಳಗ್ಗೆ 8ಕ್ಕೆ ಶ್ರೀಚಕ್ರ ಪೂಜೆ, ನಂತರ ಪದ್ಮಾವತಿ ಅಭಿಷೇಕ, ಲಕ್ಷ್ಮೀ ಹೋಮ, ಮಧ್ಯಾಹ್ನ 3ಕ್ಕೆ ಹಿಂದೂಸ್ತಾನಿ ‌ಸಂಗೀತ ಕಾರ್ಯಕ್ರಮವನ್ನು ಕಲ್ಪನಾ‌ಸುಮಂತ್ ರಾಘವೇಂದ್ರ ನಡೆಸಿಕೊಡುವರು. ಸಂಜೆ 5 ಕ್ಕೆ ಹನುಮದ್ ವಾಹನ‌ಉತ್ಸವ, ಸಂಜೆ 7ಕ್ಕೆ ಕರ್ನಾಟಕ ‌ಸಂಗೀತವನ್ನು ವಿದ್ವಾನ್ ಕುನ್ನಕುಡಿ ಬಾಲಮರಳಿ ಕೃಷ್ಣ. 28 ರಂದು‌ಬೆಳಗ್ಗೆ 8ಕ್ಕೆ ಶ್ರೀಚಕ್ರ ಪೂಜೆ, 9ಕ್ಕೆ ಸಾಲಿಗ್ರಾಮ ಪೂಜಾ. ಮಧ್ಯಾಹ್ನ 3ಕ್ಕೆ ಜುಗಲ್ ಬಂದಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವೈಯಲಿನ್- ವಿದ್ವಾನ್ ಪೆರಿ ತ್ಯಾಗರಾಜು, ಕೊಳಲು ವಾದನ ಪ್ರಮೋದ್ ಉಮಾಪತಿ ನೀಡುವರು.ಸಂಜೆ‌ 5ಕ್ಕೆ ಗರುಡ‌ವಾಹನ ಉತ್ಸವ, 7 ಕ್ಕೆ ಕರ್ನಾಟಕ ಗಾಯನ ಗೋಷ್ಠಿಯನ್ನು ವಿದ್ವಾನ್ ಶ್ರೀರಾಮ ಜೊನ್ನಲಗಡ್ಡ ಮತ್ತು ಬಳಗದವರು ನಡೆಸಿಕೊಡುವರು. 29 ರಂದು ಬೆಳಗ್ಗೆ 8ಕ್ಕೆ ಶ್ರೀಚಕ್ರ ಪೂಜೆ, 9 ಗಂಟೆಗೆ ಶ್ರೀದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಧನ್ವಂತರಿ ಪೂಜೆ, ಮಧ್ಯಾಹ್ನ 3ಕ್ಕೆ ವಿಕಾಸ್ ಮೈತ್ರೇಯ ಅವರಿಂದ ಕರ್ನಾಟಕ ಸಂಗೀತ, ಸಂಜೆ 5ಕ್ಕೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಡೋಲೋತ್ಸವ, 7 ಗಂಟೆಗೆ ರಾಮ ಕಥಾ ವಿಷಯಾಧಾರಿತ ಭರತನಾಟ್ಯ ಇರುತ್ತದೆ.30ರಂದು ಬೆಳಗ್ಗೆ 9ಕ್ಕೆ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಬ್ರಹ್ಮೋತ್ಸವ ಮಹಾ ಅಭಿಷೇಕ, ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ಸಂಗೀತವನ್ನು ವಿದುಷಿ ಡಾ. ರಮಾಪ್ರಭಾ ಯರ್ರಮಿಲ್ಲಿ ನಡೆಸಿಕೊಡುವರು. 7 ಗಂಟೆಗೆ ಸಪ್ತರ್ಷಿ ಸರೋವರದಲ್ಲಿ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ತೆಪ್ಪೋತ್ಸವ, 31 ರಂದು ಬೆಳಗ್ಗೆ 7 ಗಂಟೆಗೆ ಶ್ರೀ ದತ್ತ ಹ್ಯೂಮನ್ ಸರ್ವಿಸಸ್ ಸ್ವಯಂಸೇವಕರಿಂದ ಮೆರವಣಿಗೆ, 8ಕ್ಕೆ ಶ್ರೀ ಚಕ್ರಪೂಜೆ, 9 ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಂತಿ ಕಲ್ಯಾಣ ಮಹೋತ್ಸವ, ಬೆಳಗ್ಗೆ 10 ಗಂಟೆಗೆ ಚಾರ್ಟಿಗಳ ವಿತರಣೆ ಇರುತ್ತದೆ.ಸಂಜೆ 5ಕ್ಕೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ‌ರುದ್ರಾಕ್ಷ ರಥ ಉತ್ಸವ. ಸಂಜೆ 7ಕ್ಕೆ ವಿಶೇಷ ಹಾರ್ಮೋನಿಯಂ ವಾದನವನ್ನು ವಿದ್ವಾನ್ ರವೀಂದ್ರ ಗುರುರಾಜ್ ಕಟೋಟಿ ನಡೆಸಿಕೊಡಲಿದ್ದು, ಜೂ. 1 ರಂದು ಬೆಳಗ್ಗೆ 7ಕ್ಕೆ ದತ್ತಾತ್ರೇಯ, ಮೃತ್ಯುಂಜಯ ಮತ್ತು ಆಯುಷ್ಯ ಹೋಮ, ಶ್ರೀಚಕ್ರ ಪೂಜೆ, 8 ಗಂಟೆಗೆ ಶ್ರೀಚಕ್ರ ಪೂಜೆ, 9ಕ್ಕೆ ಔದುಂಬರ ಸಿಂಹಾಸನ ಆದಿರೋಹನಂ ಸಮರ್ಪಣೆ, ಸಂಜೆ 7ಕ್ಕೆ ಅಶ್ರಮ ಭಜನಾ ಮಂಡಳಿಯಿಂದ ದತ್ತಪ್ರಭು ಸ್ಮರಣೆ ಇರುತ್ತದೆ.