ಕನ್ನಡಪ್ರಭ ವಾರ್ತೆ ಮಂಡ್ಯ
ಈ ವರ್ಷ ಜನವರಿಯಿಂದ ಮೇ ತಿಂಗಳವರೆಗೆ ಐದು ತಿಂಗಳಲ್ಲಿ ೨೧ ಮಂದಿ ಸಾವನ್ನಪ್ಪಿದ್ದು, ೧೧ ಜನರನ್ನು ರಕ್ಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಒಟ್ಟು ೩೪ ರಕ್ಷಣಾ ಕರೆಗಳನ್ನು ಸ್ವೀಕರಿಸಲಾಗಿದೆ. ಅತಿ ಹೆಚ್ಚು ಮಂದಿ ಮಂಡ್ಯ ತಾಲೂಕಿನಲ್ಲಿ ೧೦ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ ೭ ಜನರು ಸಾವನ್ನಪ್ಪಿದ್ದಾರೆ. ನಾಗಮಂಗಲ ತಾಲೂಕಿನಲ್ಲಿ ಸಾವಿನ ಸಂಖ್ಯೆ ವರದಿಯಾಗಿಲ್ಲ.
ಇದರ ಜೊತೆಯಲ್ಲೇ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ೧೯ ಜಾನುವಾರುಗಳು ಸಾವನ್ನಪ್ಪಿದ್ದು, ೭೯ ಜಾನುವಾರುಗಳನ್ನು ರಕ್ಷಣೆ ಮಾಡಿರುವುದಾಗಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳಲ್ಲಿ ದಾಖಲಾಗಿದೆ.ಸಣ್ಣ ಪ್ರಮಾಣದಿಂದ ಹಿಡಿದು ದೊಡ್ಡ ಪ್ರಮಾಣದ ನಾಲಾ ದುರಂತ ಪ್ರಕರಣಗಳು ಘಟಿಸಿದರೂ ಅಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಜರಿರಲೇಬೇಕು. ಹಲವೆಡೆ ನಾಲಾ ತಡೆಗೋಡೆಗಳಿಲ್ಲವೆ ವಾಹನಗಳು ನೀರಿಗೆ ಬಿದ್ದು ಜನರು ಸಾವನ್ನಪ್ಪಿದ್ದಾರೆ. ಹಲವರು ನಾಲೆಗೆ ಹಾರಿ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಕೆಲವರು ಈಜಲು ನಾಲೆಗೆ ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹಾಗೂ ಸೆಲ್ಫೀ ಗೀಳಿಗೆ ಬಲಿಯಾಗಿ ಅನೇಕ ಯುವಕ-ಯುವತಿಯರು ನೀರು ಪಾಲಾಗಿರುವ ಘಟನೆಗಳೂ ಸಂಭವಿಸಿವೆ.
ಜಿಲ್ಲೆಯಲ್ಲಿ ಸುಮಾರು ೩೬೦ ಕಿ.ಮೀ. ದೂರದವರೆಗೆ ನಾಲೆ ಹಾದುಹೋಗಿದ್ದು, ಬಹುತೇಕ ಕಡೆ ತಡೆಗೋಡೆಗಳನ್ನು ನಿರ್ಮಿಸದಿರುವುದರಿಂದ ನಾಲೆಗಳೊಳಗೆ ವಾಹನಗಳು ಬಿದ್ದು ಸಾವು-ನೋವು ಸಂಭವಿಸುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ನಾಲೆಗೆ ವಾಹನಗಳ ಸಹಿತ ಉರುಳಿಬಿದ್ದವರ ರಕ್ಷಣೆ ಮಾಡಲಾಗದಿದ್ದರೂ, ಪ್ರವಾಹ ಹಾಗೂ ಬೆಂಕಿ ಅವಘಡಗಳು ಸಂಭವಿಸಿದ ಸಮಯದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿದ್ದಾರೆ.
ಇಲಾಖೆಯಲ್ಲಿ ಸಿಬ್ಬಂದಿಗಿಂತ ವಾಹನಗಳ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಬೇಡಿಕೆಯಿರುವಷ್ಟು ಸಿಬ್ಬಂದಿ ಇದ್ದಾರೆ. ಆದರೆ, ವಾಹನಗಳ ಕೊರತೆ ಬಹಳವಾಗಿ ಕಾಡುತ್ತಿದೆ. ಕಿರು ಹಾಗೂ ಕ್ಷಿಪ್ರ ರಕ್ಷಣಾ ವಾಹನಗಳು ಪ್ರತಿ ತಾಲೂಕುಗಳಲ್ಲಿ ಇರುವಂತಾದರೆ ಸಂಭವಿಸಬಹುದಾದ ಜನ-ಜಾನುವಾರುಗಳ ಸಾವು-ನೋವುಗಳನ್ನು ತಪ್ಪಿಸಬಹುದಾಗಿದೆ.
ವರ್ಷ ಕರೆಗಳು ರಕ್ಷಣೆ ಸಾವು ಜಾನುವಾರು ಸಾವು
೨೦೨೧೬೭೭೪೩೫೦೯೦೮
೨೦೨೩೧೦೬೩೪೭೭೧೦೦೧
೨೦೨೫೩೪೧೧೨೧೦೦೦೧
ಒಟ್ಟು೪೬೩೫೪೫೨೮೪೭೯೧೯ಬೇಸಿಗೆ ಸಮಯದಲ್ಲಿ ಬೆಂಕಿ ಅವಘಡಗಳು ಹೆಚ್ಚಾಗಿದ್ದರೆ, ಮಳೆಗಾಲದಲ್ಲಿ ಪ್ರವಾಹ, ನಾಲಾ ದುರಂತ ಪ್ರಕರಣಗಳಲ್ಲಿ ಜನ-ಜಾನುವಾರುಗಳ ಪ್ರಾಣ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಅಗತ್ಯ ಸಿಬ್ಬಂದಿಯೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.- ಬಿ.ಎಂ.ರಾಘವೇಂದ್ರ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ