ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 2998 ವಿದ್ಯಾರ್ಥಿಗಳ ನೋಂದಣಿ

KannadaprabhaNewsNetwork |  
Published : Mar 18, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ರಾಜ್ಯಾದಂತ್ಯ ಮಾರ್ಚ್ 18ರಿಂದ ಎಸ್‌.ಎಸ್.ಎಲ್.ಸಿ. ಪರೀಕ್ಷೆಗಳು ಅರಂಭವಾಗುತ್ತಿದ್ದು, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಿಂದ ನವೀನ ವಿದ್ಯಾರ್ಥಿಗಳು ಬಾಲಕರು 1370, ಬಾಲಕಿಯರು 1423 ಸೇರಿದಂತೆ ಒಟ್ಟು 2793 ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಬಾಲಕರು 93, ಬಾಲಕಿಯರು 69 ಸೇರಿ ಒಟ್ಟು 162 ಮಂದಿ ಹಾಗೂ ಖಾಸಗಿ ವಿದ್ಯಾರ್ಥಿಗಳು ಗಂಡು 26, ಹೆಣ್ಣು 12, ಒಟ್ಟು 38 ಮಂದಿ ಇದ್ದಾರೆ.

ಹೊನ್ನಾಳಿ: ರಾಜ್ಯಾದಂತ್ಯ ಮಾರ್ಚ್ 18ರಿಂದ ಎಸ್‌.ಎಸ್.ಎಲ್.ಸಿ. ಪರೀಕ್ಷೆಗಳು ಅರಂಭವಾಗುತ್ತಿದ್ದು, ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಿಂದ ನವೀನ ವಿದ್ಯಾರ್ಥಿಗಳು ಬಾಲಕರು 1370, ಬಾಲಕಿಯರು 1423 ಸೇರಿದಂತೆ ಒಟ್ಟು 2793 ವಿದ್ಯಾರ್ಥಿಗಳು, ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ ಬಾಲಕರು 93, ಬಾಲಕಿಯರು 69 ಸೇರಿ ಒಟ್ಟು 162 ಮಂದಿ ಹಾಗೂ ಖಾಸಗಿ ವಿದ್ಯಾರ್ಥಿಗಳು ಗಂಡು 26, ಹೆಣ್ಣು 12, ಒಟ್ಟು 38 ಮಂದಿ ಇದ್ದಾರೆ.

ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳು ಗಂಡು 03, ಹೆಣ್ಣು 02 ಸೇರಿ ಒಟ್ಟು 5 ಜನ. ಎಲ್ಲ ವಿದ್ಯಾರ್ಥಿಗಳು ಸೇರಿ ಗಂಡು 1492, ಹೆಣ್ಣು 1506 ವಿದ್ಯಾರ್ಥಿಗಳು ಇದ್ದಾರೆ. ಅವಳಿ ತಾಲೂಕುಗಳಿಂದ ಒಟ್ಟಾರೆ 2998 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆ ಬರೆಯಲಿದ್ದಾರೆ ಎಂದು ಬಿಇಒ ಕೆ.ಟಿ.ನಿಂಗಪ್ಪ ತಿಳಿಸಿದ್ದಾರೆ.

ಒಟ್ಟು 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ನಗರ ಪ್ರದೇಶದ ಪರೀಕ್ಷಾ ಕೇಂದ್ರಗಳು 3, ಗ್ರಾಮೀಣ ಭಾಗದಲ್ಲಿ 8 ಪರೀಕ್ಷಾ ಕೇಂದ್ರಗಳಿವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ 7, ಅನುದಾನಿತ ಪ್ರೌಢ ಶಾಲೆಗಳಲ್ಲಿ 4 ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ 2998 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 149 ವ್ಯವಸ್ಥಿತ ಕೊಠಡಿಗಳು ಮತ್ತು ಪೀಠೋಪಕರಣ ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಅಡಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷಾ ಕಾರ್ಯ ಸುಗಮವಾಗಿ ನಡೆಯಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಪೊಲೀಸ್, ಒಬ್ಬ ಹೋಮ್ ಗಾರ್ಡನಂತೆ 22 ಜನರನ್ನು ನಿಯುಕ್ತಿಗೊಳಿಸಿದೆ. 11 ಆಶಾ ಕಾರ್ಯಕರ್ತೆಯರು, 11 ಆರೋಗ್ಯ ಸಿಬ್ಬಂದಿ ಕೂಡ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

145 ಶಿಕ್ಷಕರನ್ನು ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕನ್ನಾಗಿ ನಿಯೋಜನೆ ಮಾಡಲಾಗಿದೆ. 11 ಜನ ಸ್ಥಾನಿಕ ಜಾಗೃತದಳದವರನ್ನು 5 ಜನ, ಮಾರ್ಗಾಧಿಕಾರಿಗಳು, ತಾಲೂಕುಮಟ್ಟದ ಅಧಿಕಾರಿಗಳನ್ನು ಸಂಚಾರಿ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಸಹಾಯವಾಣಿ ತೆರೆಯಲಾಗಿದ್ದು, ಮೊ.98442- 31116 ಸಂಪರ್ಕ ಸಂಖ್ಯೆಗಳಾಗಿವೆ. ಗೈರುಹಾಜರಿ ಮತ್ತು ಸ್ವೀಕೃತಿ ಕೇಂದ್ರಗಳ ನಿರ್ವಹಣೆಗಾಗಿ ಶಿಕ್ಷಣ ಸಂಯೋಜಕ ಹನುಮಂತಪ್ಪ ಅವರನ್ನು ನೇಮಿಸಲಾಗಿದೆ ಎಂದು ಬಿಇಒ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ ಮುಕ್ತ ಹೊಸಕೋಟೆ ನಿರ್ಮಾಣಕ್ಕೆ ಸಹಕರಿಸಿ
ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ: ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ