ಕನ್ನಡಪ್ರಭ ವಾರ್ತೆ ಕೊಲ್ಹಾರ
ಈ ವೇಳೆ ಮಾತನಾಡಿದ ಅವರು, ಬಾಲಕಿಯರು ಖೋಖೋ ಪಂದ್ಯದಲ್ಲಿ ಕರ್ನಾಟಕ 2ನೇ ಸ್ಥಾನ ಪಡೆಯಲು ಬಾಲಕಿಯರಾದ ಶ್ರಾವಣಿ ಸಾಲಳ್ಳಿ ಹಾಗೂ ವರ್ಷಾ ಬಂಡಿವಡ್ಡರ ಸಾಧನೆ ಅಮೋಘವಾಗಿದೆ. ಮತ್ತು ಈ ಬಾಲಕಿಯರಿಗೆ ಆರ್ಥಿಕವಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಬಸವನ ಬಾಗೇವಾಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿಜಾಪುರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾವು ಹೆಚ್ಚು ಕ್ರೀಡೆಗೆ ಒತ್ತು ನೀಡಬೇಕು. ಏಕೆಂದರೆ ನಮ್ಮ ಆರೋಗ್ಯದ ಗುಟ್ಟು ಕ್ರೀಡೆಯಲ್ಲಿ ಅಡಗಿದೆ. ಈ ಮಕ್ಕಳ ಸಾಧನೆಯಿಂದ ನಮ್ಮ ಜಿಲ್ಲೆಯ ಹೆಸರು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರು.ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಸದಸ್ಯ ಮುದಕಣ್ಣ ಹೊರ್ತಿ, ಅನೀಲ ಗೊಳಸ೦ಗಿ. ಶಿಕ್ಷಕರಾದ ಹೂನಸಿ೦ಗ ರಾಠೋಡ, ಮಲ್ಲನಗೌಡ ಪಾಟೀಲ, ಗೌಡಪ್ಪ ಗರಸ೦ಗಿ, ಲಕ್ಷ್ಮಣ ಡೆಂಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.