ಕನ್ನಡಪ್ರಭ ವಾರ್ತೆ ಮಧುಗಿರಿ
ಬೆಂಗಳೂರು ರೋ-ಟ್ರ್ಯಾಕ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ ಸಂಸ್ಥೆ 3192 ಜಿಲ್ಲೆ ವತಿಯಿಂದ ರೋಟ್ರ್ಯಾಕ್ 2026 ಎಂಬ ಧ್ಯೇಯದೊಂದಿಗೆ ಏರ್ಪಡಿಸಿದ್ದ ಬೃಹತ್ ಚಾರಣದಲ್ಲಿ ಬೆಂಗಳೂರು, ಕೋಲಾರ, ಹಾಗೂ ಬೆಂಗಳೂರು ರೋಟರಿ ಸಂಸ್ಥೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಮೂರು ಸಾವಿರಕ್ಕೂ ಅಧಿಕ ಚಾರಣಿಗರು ಏಕಶಿಲಾ ಗಿರಿಯನ್ನು ಏಕ ಕಾಲಕ್ಕೆ ಹತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸುವ ಮೂಲಕ ತೊಡಗಿ ಯಶಸ್ವಿಗೊಳಿಸಿದರು.
ಬೆಟ್ಟ ಹತ್ತುವ ಮೂಲಕ ಸ್ಥಳೀಯ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಸ್ಥಳೀಯರು ಹಾಗೂ ಯುವಕ -ಯುವತಿಯರು ಸಹ ಪರಸ್ಪರರು ಸಹಕಾರ ನೀಡಿ ಚಾರಣಿಗರಿಗೆ ಜೊತೆಯಾಗಿ ನಿಂತು ಬೆಟ್ಟ ಏರುವ ನಿಟ್ಟಿನಲ್ಲಿ ಉತ್ಸಾಹ ಅಪರಿಮಿತ ಪರಿಶ್ರಮ ತೋರಿ ಚಾರಣಿಗರಿಗೆ ಸಾಥ್ ನೀಡಿದರು.ಚಾರಣಕ್ಕೆ ಆಗಮಿಸಿದ್ದವರಿಗೆ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಕುಡಿಯುವ ನೀರು ಹಾಗೂ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಬೆಟ್ಟ ಹತ್ತಿದ ನಂತರ ಬೆಟ್ಟದ ತುದಿಯಲ್ಲಿ ರಾಷ್ಟ್ರ ಧ್ವಜ ಹಾರಿಸುವ ನಿಟ್ಟಿನಲ್ಲಿ ದೇಶಭಕ್ತಿ ತೋರಿದ ಚಾರಣಿಗರು ದೇಶ ಭಕ್ತಿಯ ಸಂದೇಶ ಸಾರಿದರು. ಇದರಿಂದ ಮಧುಗಿರಿಯ ಬೆಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೂಯಿದಿದ್ದು ಕಂಡು ಬಂದಿತು. ಇದಕ್ಕೆ ಸಾವಿರಾರು ಹೆಜ್ಜೆ ಗುರುತುಗಳು ಕೂಡ ಸಾಕ್ಷಿಯಾದವು.
ರೋಟರಿ ಸಂಸ್ಥೆ ಪ್ರತಿನಿಧಿಗಳಾದ ಆರ್.ಸಂಜಯ್,ರೇಣುಕಾ ಪ್ರಸಾದ್, ನವೀನ್ ಸೆನ್ನಾ,ದಿಶಾ ಹಾಗೂ ಮಧುಗಿರಿ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡರಾಜು, ಲಾಲಪೇಟೆ ಮಂಜುನಾಥ್,ಡಿ.ಎಸ್.ಮುನೀಂದ್ರ ಕುಮಾರ್,ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್,ಕೆ.ನಾರಾಯಣ್,ರೋಟರಿ ಮಾಜಿ ಅಧ್ಯಕ್ಷರಾದ ಎಂ.ವೆಂಕಟರಾಮು,ಎಂ.ಶಿವಲಿಂಗಪ್ಪ,ಪಿ.ಕೆ.ರಂಗಸ್ವಾಮಿ,ನಟರಾಜ್ ಹಾಗೂ ಮಧುಗಿರಿಯ ವಿವಿಧ ಹಂತದ ಜನಪ್ರತಿನಿಧಿಗಳು ಸಾರ್ವಜನಿಕರು ಭಾಗವಹಿಸಿದ್ದರು.