ಪುತ್ತೂರು ನಗರಸಭೆಯಿಂದ 3.5 ಕೋಟಿ ಮಿಗತೆ ಬಜೆಟ್ ಮಂಡನೆ

KannadaprabhaNewsNetwork | Published : Feb 8, 2025 12:33 AM

ಸಾರಾಂಶ

ಪುತ್ತೂರು ನಗರಸಭೆಯ ೨೦೦೨೫-೨೬ನೇ ಸಾಲಿನ ವಾರ್ಷಿಕ ಬಜೆಟನ್ನು ಶುಕ್ರವಾರ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಂಡಿಸಿದ್ದು, ೭೬.೩೪ ಕೋಟಿ ರು. ಆಯ ಹಾಗೂ ೭೨.೭೯ ಕೋಟಿ ರು. ವ್ಯಯನ್ನು ಒಳಗೊಂಡಂತೆ ೩.೫೫ ಕೋಟಿ ರು. ಮಿಗತೆ ಬಜೆಟ್ ಮಂಡಿಸಿದ್ದಾರೆ. ೨೦೨೫-೨೬ ನೇ ಸಾಲಿನಲ್ಲಿ ನಗರಸಭೆಯ ಒಟ್ಟು ಜಮೆ ೭೬,೩೪,೪೮,೨೭೮.೦೦ ರು. ಹಾಗೂ ಖರ್ಚು ೭೨,೭೯,೨೭,೯೬೪.೦೦ ರು. ಆಗಿದ್ದು ೩,೫೫,೨೦,೩೧೪.೦೦ ಉಳಿಕೆಯ ಬಜೆಟ್ ಮಂಡಿಸಲಾಯಿತು.

೭೬.೩೪ ಕೋಟಿ ರು. ಆಯ, ೭೨.೭೯ ಕೋಟಿ ರು. ವ್ಯಯ

ಕನ್ನಡಪ್ರಭ ವಾರ್ತೆ ಪುತ್ತೂರು

ನಗರಸಭೆಯ ೨೦೦೨೫-೨೬ನೇ ಸಾಲಿನ ವಾರ್ಷಿಕ ಬಜೆಟನ್ನು ಶುಕ್ರವಾರ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಂಡಿಸಿದ್ದು, ೭೬.೩೪ ಕೋಟಿ ರು. ಆಯ ಹಾಗೂ ೭೨.೭೯ ಕೋಟಿ ರು. ವ್ಯಯನ್ನು ಒಳಗೊಂಡಂತೆ ೩.೫೫ ಕೋಟಿ ರು. ಮಿಗತೆ ಬಜೆಟ್ ಮಂಡಿಸಿದ್ದಾರೆ. ೨೦೨೫-೨೬ ನೇ ಸಾಲಿನಲ್ಲಿ ನಗರಸಭೆಯ ಒಟ್ಟು ಜಮೆ ೭೬,೩೪,೪೮,೨೭೮.೦೦ ರು. ಹಾಗೂ ಖರ್ಚು ೭೨,೭೯,೨೭,೯೬೪.೦೦ ರು. ಆಗಿದ್ದು ೩,೫೫,೨೦,೩೧೪.೦೦ ಉಳಿಕೆಯ ಬಜೆಟ್ ಮಂಡಿಸಲಾಯಿತು.೨೦೨೫-೨೬ ನೇ ಸಾಲಿಗೆ ನಗರಸಭೆಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ಕಟ್ಟಡ ಪರವಾನಗಿ ಶುಲ್ಕ, ಅಂಗಡಿ ಬಾಡಿಗೆ, ಮಾರುಕಟ್ಟೆ ಶುಲ್ಕ ಮತ್ತು ಉದ್ದಿಮೆ ಪರವಾನಗಿ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ ಇತ್ಯಾದಿಗಳಿಂದ ಒಟ್ಟು ಸ್ವಂತ ರಾಜಸ್ವ ಆದಾಯ ೧೩,೪೦,೯೫,೦೦೦ ರು. ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಆಗುವ ರಾಜಸ್ವ ಅನುದಾನಗಳಾದ ವೇತನ ಅನುದಾನ, ವಿದ್ಯುತ್ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಮತ್ತು ಇತರ ರಾಜಸ್ವ ಅನುದಾನ ೧೨,೩೫,೦೦,೦೦೦ ರು. ಆದಾಯಗಳು ಸೇರಿ ಒಟ್ಟು ೨೫,೭೫,೯೫,೦೦೦ ರು.ವನ್ನು ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ರಾಜಸ್ವ ಕಂದಾಯ ನಿರೀಕ್ಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ೧೫ನೇ ಹಣಕಾಸು ಅನುದಾನ, ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನ, ಸ್ವಚ್ಛ ಭಾರತ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಕುಡಿಯುವ ನೀರಿನ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನರ್ಮ್), ಅಂಗನವಾಡಿ ಮತ್ತು ಶಾಲಾ ಕಟ್ಟಡ ರಿಪೇರಿ ಹಾಗೂ ಮಲ ತ್ಯಾಜ್ಯ ಸೆಪ್ಟೇಜ್ ನಿರ್ವಹಣಾ ಅನುದಾನ, ಎಸ್‌ಎಫ್‌ಸಿ ವಿಶೇಷ ಅನುದಾನ, ಡಲ್ಟ್ ಅನುದಾನ, ಇಂದಿರಾ ಕ್ಯಾಂಟೀನ್ ದುರಸ್ತಿ ಅನುದಾನ, ಕೆ.ಎಸ್. ಎಂ.ಎಸ್.ಸಿ.ಎಲ್. ಆರೋಗ್ಯ ಅನುದಾನ, ಪಾರಂಪರಿಕ ಕಸ ವಿಲೇವಾರಿ ಅನುದಾನ, ಇತರೆ ಅನುದಾನ ಸೇರಿ ಒಟ್ಟು ೩೫,೯೫,೦೦,೦೦೦ ರು. ಅನುದಾನಗಳನ್ನು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ೫,೪೮,೯೮,೦೦೦ ರು. ವನ್ನು ಈ ಬಾರಿಯ ಆಯವ್ಯಯದಲ್ಲಿ ನಿರೀಕ್ಷಿಸಲಾಗಿದೆ. ಅದರಂತೆ ಅನುದಾನಗಳು ಹಾಗೂ ನಗರಸಭಾ ಸ್ವಂತ ಆದಾಯಗಳು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ.೬೭,೧೯,೯೩,೦೦೦ ಆದಾಯವನ್ನು ನಿರೀಕ್ಷಿಸಲಾಗಿದೆ.ಸ್ವಂತ ಆದಾಯಗಳಲ್ಲಿ ಪ್ರಮುಖವಾದ ಆಸ್ತಿ ತೆರಿಗೆ ೫,೫೦,೦೦,೦೦೦ ರು., ಕಟ್ಟಡ ಪರವಾನಗಿ ಶುಲ್ಕ ೫೦,೦೦,೦೦೦ ರು., ಉದ್ಯಮ ಪರವಾನಗಿ ಶುಲ್ಕ ೭೫,೦೦,೦೦೦ ರು., ಅಭಿವೃದ್ಧಿ ಶುಲ್ಕ ೧,೨೫,೦೦,೦೦೦ ರು., ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ ೧,೪೦,೦೦,೦೦೦ ರು., ವಾಣಿಜ್ಯ ಸಂಕೀರ್ಣದ ಬಾಡಿಗೆಯಿಂದ ೩೦,೦೦,೦೦೦ ರು., ಮಾರುಕಟ್ಟೆ ಮತ್ತು ನೆಲಬಾಡಿಗೆಗಳಿಂದ ಒಟ್ಟು ೪೦,೦೦,೦೦೦ ರು., ಸೆಸ್ ಪೂಲ್ ವಾಹನ ಬಾಡಿಗೆಯಿಂದ ಒಟ್ಟು ೧೫,೦೦,೦೦೦ ರು., ಖಾತೆ ಬದಲಾವಣೆ, ಖಾತಾ ಪ್ರತಿ, ಪ್ರತಿ ನೀಡಿಕೆಯಿಂದ ೨೪,೦೦,೦೦೦ ರು., ಆಸ್ತಿ ತೆರಿಗೆ ದಂಡ ಮತ್ತು ಇತರೆ ದಂಡಗಳಿಂದ ೮೧,೫೫,೦೦೦ ರು., ಪುರಭವನ ಬಾಡಿಗೆಯಿಂದ ೨,೦೦,೦೦೦ ರು., ಜಾಹೀರಾತು ಶುಲ್ಕಗಳಿಂದ ೧೨,೦೦,೦೦೦ ರು., ಮುದ್ರಾಂಕ ಶುಲ್ಕದಿಂದ ೨೦,೦೦,೦೦೦ ರು. ಆದಾಯ ನಿರೀಕ್ಷಿಸಲಾಗಿದೆ. ಮುಂಗಡ ಪತ್ರದಲ್ಲಿ ನಿರೀಕ್ಷೆ ಇಟ್ಟುಕೊಂಡಿರುವ ಆದಾಯಗಳಿಂದ ಮೂಲಸೌಕರ್ಯಗಳಾದ ದಾರಿ ದೀಪ, ರಸ್ತೆ, ಚರಂಡಿ, ಕುಡಿಯುವ ನೀರು, ಘನತ್ಯಾಜ್ಯ ವಸ್ತು ನಿರ್ವಹಣೆ, ಕಚೇರಿ ಕಟ್ಟಡ ನಿರ್ಮಾಣ ಮತ್ತು ಕಚೇರಿಗೆ ಸಂಬಂಧಿಸಿದ ವೆಚ್ಚಗಳಿಗೆ ಹಾಗೂ ಇನ್ನಿತರ ವೆಚ್ಚಗಳಿಗೆ ಆರಂಭದ ಶಿಲ್ಕು ಒಳಗೊಂಡಂತೆ ಒಟ್ಟು ೭೨,೭೯,೨೭,೯೬೪ ರು. ಹಂಚಿಕೆ ಮಾಡಲಾಗಿದೆ.ಪುತ್ತೂರು ನಗರಸಭೆಯ ಘನತ್ಯಾಜ್ಯ ನಿರ್ವಹಣೆಯ ಘಟಕದಲ್ಲಿ ಪ್ರತಿ ದಿನ ಅಂದಾಜು ೧೦ ಟನ್ ಹಸಿ ತ್ಯಾಜ್ಯ ಬಳಸಿಕೊಂಡು ಕಂಪ್ರೆಸ್ಡ್ ಬಯೋ ಗ್ಯಾಸ್ ಉತ್ಪಾದನೆ ಮಾಡಲು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲಾಗಿದೆ. ಒಳಚರಂಡಿ ಹಾಗೂ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣಕ್ಕಾಗಿ ಕೇಂದ್ರ ಪುರಸ್ಕೃತ ಸ್ವಚ್ಛಭಾರತ ಮಿಷಿನ್ ೨.೦ ಅಡಿಯಲ್ಲಿ ೧೪.೫೭ ಕೋಟಿ ರು. ಕಾದಿರಿಸಿದ್ದು ಪ್ರಸ್ತುತ ವಿಸ್ತೃತ ಯೋಜನಾ ವರದಿ ತಯಾರಿಸಲು ಈಜಿಸ್ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ. ಇ-ಆಫೀಸ್ ತಂತ್ರಾಂಶದ ಮುಖಾಂತರ ಕೆಲಸವನ್ನು ಸುಲಭಗೊಳಿಸಲು ಹಾಗೂ ಕಡತಗಳನ್ನು ವಿಳಂಬಗೊಳ್ಳದಂತೆ ಕ್ರಮ ವಹಿಸಲು ಈಗಾಗಲೇ ಕ್ರಮವಹಿಸಲಾಗಿದ್ದು, ಇದನ್ನು ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ತರಬೇತಿಯನ್ನು ನೀಡಿ ಮುಂದಿನ ದಿನಗಳಲ್ಲಿ ಕಾಗದ ರಹಿತ ಕಛೇರಿಯನ್ನು ನಿರ್ಮಿಸಲು ವ್ಯವಸ್ಥೆಯ ಯೋಜನೆ ಕಾರ್ಯಗತಗೊಳಿಸುವ ಚಿಂತನೆ ನಡೆಸಲಾಗಿದೆ. ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಜನಹಿತ’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಫೇಸ್ಬುಕ್, ಟ್ಟಿಟರ್, ದೂರವಾಣಿ, ವಾಟ್ಸಾಪ್, ವೆಬ್ ಸೈಟ್ ಮತ್ತು ಜನಹಿತ ಮೊಬೈಲ್ ಆಪ್ ಮೂಲಕ ದೂರುಗಳನ್ನು ಸಲ್ಲಿಸಿ ದೂರಿನ ಸ್ಥಿತಿಗಳನ್ನು ಪರಿಶೀಲಿಸುವ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ನಗರಕ್ಕೆ ಪ್ರತ್ಯೇಕ ‘ಟ್ರಾಫಿಕ್ ಪ್ಲಾನ್’ ತಯಾರಿಗೆ ಕ್ರಮ ವಹಿಸಲಾಗುತ್ತಿದೆ ನಗರಸಭೆಯ ಎಲ್ಲ ಸದಸ್ಯರಿಗೆ ಪ್ರತಿ ವಾರ್ಡಿಗೆ ೨೦೨೫-೨೬ನೇ ಸಾಲಿಗೆ ನಗರಸಭೆಯ ಸಾಮಾನ್ಯ ನಿಧಿಯಲ್ಲಿ ೨ ಕಂತಿನಲ್ಲಿ ಒಟ್ಟು ೧೦ ಲಕ್ಷ ರು. ಗಳನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷ ಬಾಲಚಂದ್ರ ಕೆ., ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪೌರಾಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.

Share this article