ಶಿವಮೊಗ್ಗ : 3500 ವರ್ಷ ಹಳೆಯದಾದ ನವ ಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ ಪತ್ತೆ

KannadaprabhaNewsNetwork |  
Published : Dec 13, 2024, 12:50 AM ISTUpdated : Dec 13, 2024, 11:19 AM IST
ಡೋಲೆರೈಟ್ ಕಲ್ಲಿನ ಉಂಗುರ. | Kannada Prabha

ಸಾರಾಂಶ

ಕ್ರಿಸ್ತ ಪೂರ್ವ 1500ರಿಂದ ಕ್ರಿ.ಪೂ. 800 ಅಂದರೆ ಸುಮಾರು 3500 ವರ್ಷ ಹಳೆಯದಾದ ನವ ಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರವೊಂದು ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಗುರುವಾರ ಪತ್ತೆಯಾಗಿದೆ.

  ಶಿವಮೊಗ್ಗ : ಕ್ರಿಸ್ತ ಪೂರ್ವ 1500ರಿಂದ ಕ್ರಿ.ಪೂ. 800 ಅಂದರೆ ಸುಮಾರು 3500 ವರ್ಷ ಹಳೆಯದಾದ ನವ ಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರವೊಂದು ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಗುರುವಾರ ಪತ್ತೆಯಾಗಿದೆ.

ಹಿಂಡ್ಲೆಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕ ಹನುಮಂತಪ್ಪ ಎಂಬುವರಿಗೆ ಈ ಉಂಗುರ ಸಿಕ್ಕಿದೆ. ಈ ಪ್ರದೇಶದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಉಂಗುರ ಸಿಕ್ಕಿರುವ ಸಮೀಪವೇ ಶರ್ಮಿಣ್ಯಾವತಿ ಎಂಬ ನದಿಯು ಹರಿಯುತ್ತಿದ್ದು, ಇದು ಬಳಿಕ ಶರಾವತಿ ನದಿಯಲ್ಲಿ ಲೀನವಾಗುತ್ತದೆ. ಇದು ಶರಾವತಿ ನದಿ ದಡದಲ್ಲಿ ಆಗಿನ ಕಾಲದಲ್ಲಿ ಜನವಸತಿ ಇತ್ತು ಎಂಬುದನ್ನು ಸೂಚಿಸುತ್ತದೆ.

ಈ ಪ್ರದೇಶದಲ್ಲಿ ನವ ಶಿಲಾಯುಗ ಕಾಲದ ಅತ್ಯಂತ ಅಮೂಲ್ಯವಾದ ವಸ್ತುವೊಂದು ಇದೇ ಮೊದಲ ಬಾರಿಗೆ ದೊರಕಿದೆ. ಈ ಡೋಲೆರೈಟ್ ಕಲ್ಲಿನ ಉಂಗುರವು ಈ ಪ್ರದೇಶದಲ್ಲಿ ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವನ ಜೀವನಶೈಲಿಯ ಆರಂಭದ ದಿನಗಳನ್ನು ಇದರಿಂದ ತಿಳಿಯಬಹುದಾಗಿದೆ. ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಮಣಿಗಳಿಗೆ ಹೊಳಪು ಕೊಡುವುದು ಸೇರಿದಂತೆ ನಿತ್ಯ ಜೀವನದ ಅನೇಕ ಕೆಲಸಗಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ