3 ಮಂದಿಗೆ ತುಮಕೂರು ವಿವಿ ಗೌರವ ಡಾಕ್ಟರೇಟ್

KannadaprabhaNewsNetwork |  
Published : Jun 02, 2026, 01:30 AM IST
0000 | Kannada Prabha

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಚಾರ್ಟರ್ಡ್ ಅಕೌಂಟೆಂಟ್ ಪ್ರದೀಪ್ ಕೆ.ಆರ್., ಮತ್ತು ಕವಿ, ಚಿಂತಕ ದ್ವಾರನಕುಂಟೆ ಪಾತಣ್ಣ ತುಮಕೂರು ವಿವಿ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ಚಾರ್ಟರ್ಡ್ ಅಕೌಂಟೆಂಟ್ ಪ್ರದೀಪ್ ಕೆ.ಆರ್., ಮತ್ತು ಕವಿ, ಚಿಂತಕ ದ್ವಾರನಕುಂಟೆ ಪಾತಣ್ಣ ತುಮಕೂರು ವಿವಿ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ. 3 ರಂದು ಬುಧವಾರ ನಡೆಯಲಿರುವ ತುಮಕೂರು ವಿವಿ 19ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಟಿ.ಆರ್.ರೇವಣ್ಣ (98 ವರ್ಷ) ಭಾರತದ ಸ್ವಾತಂತ್ರ್ಯಮ ಸಂಗ್ರಾಮಕ್ಕೆ ತಮ್ಮನ್ನು ತಾವು ತೇಯ್ದುಕೊಂಡ ತುಮಕೂರಿನ ಹೆಮ್ಮೆಯ ಪುತ್ರ.1928ರಲ್ಲಿ ಜಿ.ಎಂ.ರಾಜಪ್ಪ ಮತ್ತು ಹನುಮಕ್ಕನವರ ಮಗನಾಗಿ ಜನಿಸಿದ ಇವರು ವಿದ್ಯಾರ್ಥಿ ದೆಸೆಯಲ್ಲೇ ಭಾರತದ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದರು. 1947 ರ ಮೈಸೂರು ಚಲೋ ಚಳವಳಿ, ಸ್ವಾತಂತ್ರ್ಯಾ ನಂತರದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಸಹ ಸಕ್ರಿಯವಾಗಿ ಭಾಗವಹಿಸಿದವರು.

ಕೆ.ಆರ್.ಪ್ರದೀಪ್‌ ಅವರು ಕಾನೂನು ತಜ್ಞರಾಗಿ, ಹಣಕಾಸು ತಜ್ಞರಾಗಿ, ಹಸಿರು ಇಂಧನ ಉದ್ಯಮಿಯಾಗಿ ಹಾಗೂ ಸಮಾಜ ಸೇವಕರಾಗಿ ಭಾರತ ಮತ್ತು ವಿದೇಶಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ಬಹುಮುಖ ಪ್ರತಿಭೆಯಾಗಿದ್ದಾರೆ. ಇವರು ಫೈನಲ್ ಸಿ.ಎ. ಪರೀಕ್ಷೆಯ ''''''''ಅಡ್ವಾನ್ಸ್ಡ್ಅಕೌಂಟೆನ್ಸಿ'''''''' ವಿಷಯದಲ್ಲಿ ಶೇಕಡಾ 100 ಕ್ಕೆ 100 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಕ್ಕಾಗಿ ರಾಷ್ಟ್ರಪತಿಗಳ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಕಳೆದ ನಲವತ್ತು ವರ್ಷಗಳಿಂದ ಕನ್ನಡ ಪರಚಿಂತನೆ ಮತ್ತು ಹೋರಾಟದ ವಲಯದಲ್ಲಿ ದ್ವಾರನಕುಂಟೆ ಪಾತಣ್ಣನವರ ಹೆಸರು ಪ್ರಸಿದ್ಧವಾಗಿದೆ. ಶ್ರೀಯುತರ ಲೇಖನಿಯಿಂದ ಹೊಮ್ಮಿದ ಬರವಣಿಗೆ ಸತ್ವಯುತ ಮತ್ತು ವೈವಿಧ್ಯಮಯ. ಸಾಮಾಜಿಕ, ಐತಿಹಾಸಿಕ ಕಾದಂಬರಿಗಳು, ಸಣ್ಣಕಥೆ, ಕವನಗಳು, ನಾಟಕ, ಆತ್ಮಕಥೆ ಹೀಗೆ ಅವರ ಸಾಹಿತ್ಯಕೃಷಿ ವಿವಿಧ ಶಾಖೆಗಳಲ್ಲಿ ಸಮೃದ್ಧವಾಗಿ ಬೆಳೆದುಬಂದಿದೆ. ಇದುವರೆಗೆ ಪ್ರಕಟವಾದಅವರ ಕೃತಿಗಳ ಸಂಖ್ಯೆಇಪ್ಪತ್ತಕ್ಕೂ ಹೆಚ್ಚು. ಅಕೌಂಟೆಂಟ್ಸ್ಆಫ್‌ಇಂಡಿಯಾ ಸ್ಥಾಪನೆಯಾದಾಗಿನಿಂದ ಈವರೆಗೂ ಯಾರೂ ಮಾಡದ ಐತಿಹಾಸಿಕ ಸಾಧನೆ ಇದಾಗಿದೆ. ಇವರು ಕರ್ನಾಟಕದ ಅತ್ಯುನ್ನತ ವೃತ್ತಿಪರ ತೆರಿಗೆದಾರರಲ್ಲಿ ಒಬ್ಬರಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂಪಾಯಿಗಳಿಗೂ ಹೆಚ್ಚು ಕೊಡುಗೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಟ್ಟುಹಬ್ಬಗಳು ಸಾರ್ವಜನಿಕರಿಂದ ಆಚರಣೆಗೊಂಡಾಗ ಸಾರ್ಥಕತೆ
ಸರ್ಕಾರಿ ಶಾಲೆಯಲ್ಲೂ ಎಲ್‌ಕೆಜಿ ಆರಂಭ: ಮಂಜುಳಾ