ಮೂಡಲಗಿ ಬ್ಯಾಂಕ್‌ನ 3 ಶಾಖೆಗಳು ಪ್ರಗತಿ ಪಥದತ್ತ

KannadaprabhaNewsNetwork |  
Published : Aug 15, 2025, 01:02 AM IST
ಮೂಡಲಗಿ:ಪಟ್ಟಣದ ದಿ.ಮೂಡಲಗಿ ಸಹಕಾರಿ ಬ್ಯಾಂಕನ 75ನೇ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಬ್ಯಾಂಕನ ಅಧ್ಯಕ್ಷ ಸುಭಾಸ ಢವಳೇಶ್ವರ ಮತ್ತು ಲೆಕ್ಕಪರೀಶೋಧ ಸೈದಪ್ಪ ಗದಾಡಿ ಉದ್ಘಾಟಿಸಿದರು.   | Kannada Prabha

ಸಾರಾಂಶ

ಸಹಕಾರಿ ಸಂಸ್ಥೆಗಳು ಠೇವಣಿದಾರ ವಿಶ್ವಾಸಗಳಿಸಿದರೆ ಮಾತ್ರಾ ಅಭಿವೃದ್ಧಿ ಹೊಂದಲು ಸಾಧ್ಯ

ಕನ್ನಡಪ್ರಭ ವಾರ್ತೆ ಮೂಡಲಗಿ

ರಾಜ್ಯ ಸಹಕಾರ ಇಲಾಖೆ ಕಾಯ್ದೆ ಮತ್ತು ಆರ್‌ಬಿಐ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಾ ಮೂಡಲಗಿ ಸಹಕಾರಿ ಬ್ಯಾಂಕ್‌ ಮೂರು ಶಾಖೆಗಳನ್ನು ಹೊಂದಿ ಪ್ರಗತಿ ಪಥದತ್ತ ಸಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಸುಭಾಸ ಜಿ.ಢವಳೇಶ್ವರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಮೂಡಲಗಿ ಸಹಕಾರಿ ಬ್ಯಾಂಕ್‌ ಸಭಾಭವನದಲ್ಲಿ ಬ್ಯಾಂಕಿನ 75ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್‌ ಪ್ರತಿ ವರ್ಷ ಪ್ರಗತಿಯತ್ತ ಸಾಗುತ್ತಿದು, ಕಳೆದ ಮಾರ್ಚ್‌ ಅಂತ್ಯಕ್ಕೆ ಶೇರು ಬಂಡವಾಳ ₹2.48 ಕೋಟಿ, ನಿಧಿಗಳು ₹8.82 ಕೋಟಿ, ಠೇವಣಿಗಳು ₹136.60 ಕೋಟಿ ಹೊಂದಿದೆ. ₹85.73 ಕೋಟಿ ವಿವಿಧ ತೇರನಾದ ಸಾಲ ವಿತರಿಸಿದ್ದು, ದುರ್ಬಲ, ಹರಿಜನ-ಗಿರಿಜನ ವರ್ಗದವರಿಗೆ ಶೇ.17.62ರಷ್ಟು, ಸಣ್ಣ ಹಾಗೂ ಮಧ್ಯಮ ವರ್ಗದವರಿಗೆ ಸ್ವಂತ ಉದ್ಯೋಗಕ್ಕಾಗಿ ₹14.11 ಕೋಟಿ ಸಾಲ ವಿತರಿಸಿದೆ ಎಂದು ತಿಳಿಸಿದರು.

ಹಳ್ಳೂರ, ರಾಮದುರ್ಗ, ಮುಗಳಖೋಡ ಶಾಖೆಗಳು ಸಹ ಪ್ರಗತಿಯತ್ತ ಸಾಗಿವೆ. ಶೇ.0.42, ಎನ್‍ಪಿಎ ಪ್ರಮಾಣ ಮತ್ತು ಶೇ.12.52, ಸಿಆರ್‌ಆರ್ ಪ್ರಮಾಣ, ಶೇ.1.84ರಷ್ಟು ಕಟ್‌ ಬಾಕಿ ಪ್ರಮಾಣ ಹೊಂದುವ ಮೂಲಕ ಗ್ರಾಹಕರ ಆರ್ಥಿಕ ಸುಭದ್ರತೆಗೆ ಸಾಕ್ಷಿಯಾಗಿದೆ. ಶೀಘ್ರದಲ್ಲೇ ಇನ್ನೂ ಹೊಸ ಶಾಖೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದರು.

ಮುಖ್ಯ ಅತಿಥಿ ಬೆಳಗಾವಿ ಲೆಕ್ಕ ಪರೀಶೋಧಕ ಉಮೇಶ ಬೋಳಮಲ ಮಾತನಾಡಿ, ಮೂಡಲಗಿ ಬ್ಯಾಂಕ್‌ ಜಿಲ್ಲೆಯಲ್ಲಿಯೇ 75 ವರ್ಷ ಪೂರೈಸಿದ ಏಕೈಕ ಬ್ಯಾಂಕ್ ಇದ್ಹಾಗೇ, ಸಹಕಾರಿ ಸಂಸ್ಥೆಗಳು ಠೇವಣಿದಾರ ವಿಶ್ವಾಸಗಳಿಸಿದರೆ ಮಾತ್ರಾ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಲೆಕ್ಕಪರೀಶೋಧ ಸೈದಪ್ಪ ಗದಾಡಿ ಮಾತನಾಡಿ, ಸಹಕಾರ ಕ್ಷೇತ್ರ ಅಭಿವೃದ್ಧಿ ಹೊಂದಲು ಠೇವುದಾರ ಹಿತಕ್ಷಣೆ ಮುಖ್ಯವಾಗಿದೆ. ಪ್ರತಿಯೊಬ್ಬರು ತಮ್ಮ ದುಡಿಮೆಯಲ್ಲಿನ ಹಣ ಉಳಿತಾಯ ಮಾಡಿದರೆ ಮಾತ್ರ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.

ವೇದಿಕೆಯಲ್ಲಿ ಬ್ಯಾಂಕ್‌ ಉಪಾಧ್ಯಕ್ಷ ನವೀನ ಬಡಗಣ್ಣವರ, ಹಿರಿಯ ನಿರ್ದೇಶಕ ಡಾ.ಕೆ.ವ್ಹಿ.ದಂತಿ ಇದ್ದರು. ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಗೌಡಪ್ಪ ಬುದ್ನಿ ವರಿದಿ ವಾಚಿಸಿದರು. ಸಹಾಯಕ ವ್ಯವಸ್ಥಾಪಕರಾದ ಮಹೇಶ ಮಡಿವಾಳರ ನಿರೂಪಿಸಿ, ವ್ಯವಸ್ಥಾಪಕ ಚಿದಾನಂದ ಢವಳೇಶ್ವರ ಸ್ವಾಗತಿಸಿ, ಕಿರಿಯ ಸಹಾಯಕ ಬಿ.ಐ.ಸಂಕನ್ನವರ ವಂದಿಸಿದರು. ಪ್ರಧಾನ ಕಚೇರಿ ನಿರ್ದೇಶಕ ಎಸ್.ಎಂ.ತೇಲಿ, ಆರ್.ಬಿ.ನಿವಾರ್ಣಿ, ಆರ್.ಎಲ್.ವಾಲಿ, ಎಚ್.ಚಿ.ಅಂಗಡಿ, ಎಂ.ಕೆ.ತಾಂಬೋಳಿ, ಆರ್.ಎಸ್.ಬೆಳಕೂಡ, ಪ್ರಭಾವತಿ ಮೂಧೋಳ, ದಾನೇಶ್ವರ ಸತರಡ್ಡಿ, ಮಾಲಕ್ಕಾ ಪೋಳ, ಆಯ್.ಬಿ.ಪಾಟೀಲ, ಹಳ್ಳೂರ, ಮುಗಳಖೋಡ, ರಾಮದುರ್ಗ ಶಾಖೆಗಳ ಸಲಹಾ ಸಮಿತಿ ಸದಸ್ಯರು ಇದ್ದರು.

PREV

Recommended Stories

ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶ್ರೀಕಾಂತ ಸ್ಪರ್ಧೆ
ನೋಡುಗರ ಮೈನವಿರೇಳಿಸಿದ ಕಸರತ್ತು ಸ್ಪರ್ಧೆಗಳು