ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಾಲಿಂಗಪು ಪಿಕೆಪಿಎಸ್ ಸಂಘ ₹೨೨.೫೫ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ೨೦೨೪-೨೫ ನೇ ಸಾಲಿನಲ್ಲಿ ₹೪೦ಲಕ್ಷ ಲಾಭ ಗಳಿಸಿದೆ. ಸುತ್ತಮುತ್ತಲಿನ ಗ್ರಾಮಸ್ತರು, ರೈತರು ಮತ್ತು ಸ್ಥಳೀಯರು ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.ಸ್ಥಳೀಯ ಪಿಕೆಪಿಎಸ್ ನ ಆವರಣದಲ್ಲಿ ಮಂಗಳವಾರ ನಡೆದ ೬೬ ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಮಾತನಾಡಿ, ೨೫೨೧ ಷೇರುದಾರರಲ್ಲಿ, ೧೮೮೬ ಸದಸ್ಯರಿಗೆ ಬೆಳೆಸಾಲ, ಟ್ರ್ಯಾಕ್ಟರ್, ಟಿಲ್ಲರ್, ನೇಕಾರಿಕೆ ಸಾಲ, ಭಿನ್ ಶೇತ್ಕಿ, ವಾಹನ (ದ್ವಿಚಕ್ರ) ಸಾಲ, ಮುದ್ದತ ಠೇವು, ಪೈಪ್ ಲೈನ್, ವೇತನ, ಜಾಮೀನು, ತೋಟಗಾರಿಕೆ (ದ್ರಾಕ್ಷಿ) ಮತ್ತು ಹೈನುಗಾರಿಕೆ ರೂಪದಲ್ಲಿ ಸುಮಾರು ₹೧೫ ಕೋಟಿ ಸಾಲ ನೀಡಲಾಗಿದೆ. ₹೧.೮೯ ಲಕ್ಷ ಷೇರು ಬಂಡವಾಳ, ₹೨.೭೪ ಲಕ್ಷ ಕಾಯ್ದಿಟ್ಟ ಮತ್ತು ಇತರೆ ನಿಧಿ, ₹೯.೮೧ ಲಕ್ಷ ಸರ್ಕಾರಿ ಸಾಲ ಮತ್ತು ಸಹಾಯಧನ, ₹೮.೯೦ ಲಕ್ಷ ಬಿಡಿಸಿಸಿ ಸಾಲ, ₹೮ ಕೋಟಿ ಸದಸ್ಯರ ಠೇವು, ₹೫.೧೩ ಲಕ್ಷ ಬಿಡಿಸಿಸಿ ಬ್ಯಾಂಕಿನಲ್ಲಿ ಗುಂತಾವಣಿ, ₹೧.೮೮ ಲಕ್ಷ ಸ್ಥಿರ ಮತ್ತು ಚರಾಸ್ಥಿಗಳು ಹೊಂದಿದೆ ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಾಹಕ ಈರಣ್ಣ ಬೆಟಗೇರಿ ಪ್ರಾಸ್ತಾವಿಕ ಮಾತನಾಡಿ, ವಾರ್ಷಿಕ ವರದಿ ವಾಚಿಸಿದರು.ನಂತರ ಎಸ್ಎಸ್ಎಲ್ ಸಿ, ಪಿಯುಸಿ ಮತ್ತು ಡಿಗ್ರಿ ವಿಭಾಗದ ಮತ್ತು ಸಂಘದ ಸದಸ್ಯರ ಮಕ್ಕಳು ಸೇರಿದಂತೆ ಉತ್ತಮ ಅಂಕ ಪಡೆದ ೩೭ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಬ್ಯಾಂಕ್ ಲೇವಾದೇವಿಯಲ್ಲಿ ಉತ್ತಮ ಗ್ರಾಹಕರೆಂದು ಗಿರಮಲ್ಲಪ್ಪ ಬರಗಿ, ಬಸವರಾಜ ಬಂಡಿವಡ್ಡರನ್ನು ಗುರುತಿಸಿ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಡ್ರೋನ್ ಮೂಲಕ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವ ಬಗೆಯನ್ನು ಪ್ರಾಯೋಗಿಕವಾಗಿ ರೈತರಿಗೆ ತೋರಿಸಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಪಾಟೀಲ, ಉಪಾಧ್ಯಕ್ಷ ಮಹಾಲಿಂಗಪ್ಪ ಪೂಜಾರಿ, ನಿರ್ದೇಶಕರಾದ ಮಲ್ಲಿಕಾರ್ಜುನ ಕುಳ್ಳೋಳ್ಳಿ, ವಿಷ್ಣುಗೌಡ ಪಾಟೀಲ, ಶಿವಪ್ಪ ನಾಗನೂರ, ಬಸವರಾಜ ಅರಳಿಕಟ್ಟಿ, ಈರಪ್ಪ ದಿನ್ನಿಮನಿ, ಶೈಲಾ ಪವಾರ, ಸುರೇಖಾ ಸೈದಾಪುರ, ಶಿವಲಿಂಗಪ್ಪ ಘಂಟಿ, ಹಣಮಂತ ಬುರುಡ, ಸಂಗಪ್ಪ ಡೋಣಿ, ವೃತ್ತಿಪರ ನಿರ್ದೇಶಕ ಅಶೋಕ ಪಾಟೀಲ, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಸೇರಿದಂತೆ ಮುಖಂಡರು, ಗ್ರಾಮಸ್ಥರು ಇದ್ದರು. ನಾರಣಗೌಡ ಉತ್ತಂಗಿ ನಿರೂಪಿಸಿ,ವಂದಿಸಿದರು.