ರಸ್ತೆ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 3 ಜಾನುವಾರು ಸಾವು

KannadaprabhaNewsNetwork |  
Published : Aug 01, 2026, 01:45 AM IST
ಕಳಸ ಕೆಳಬೈಲ್ ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 3 ಜಾನುವಾರು ಸಾವು.. | Kannada Prabha

ಸಾರಾಂಶ

ಕಳಸಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರಸ್ತೆ ಮೇಲೆ ಬಿದ್ದಿತ್ತು. ಆಹಾರ ಅರಸಿ ಬರುತ್ತಿದ್ದ 3 ಹಸುಗಳು ಈ ವಿದ್ಯುತ್ ತಂತಿಯನ್ನು ತುಳಿದು ಧಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಸಮೀಪದ ಕೆಳಬೈಲ್ ನಲ್ಲಿ ನಡೆದಿದೆ.

ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿದ್ದೇ ಅವಘಡಕ್ಕೆ ಕಾರಣ

ಕನ್ನಡಪ್ರಭ ವಾರ್ತೆ ಕಳಸ

ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ರಸ್ತೆ ಮೇಲೆ ಬಿದ್ದಿತ್ತು. ಆಹಾರ ಅರಸಿ ಬರುತ್ತಿದ್ದ 3 ಹಸುಗಳು ಈ ವಿದ್ಯುತ್ ತಂತಿಯನ್ನು ತುಳಿದು ಧಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಸಮೀಪದ ಕೆಳಬೈಲ್ ನಲ್ಲಿ ನಡೆದಿದೆ.ಘಟನೆಯಿಂದ ಹಸು ಮಾಲೀಕರಿಗೆ ನಷ್ಟವಾಗಿದೆ. ಮತ್ತು ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ..ಮಳೆ ಮತ್ತು ಗಾಳಿಗೆ ಮರ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಹಸುಗಳ ಮಾಲೀಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮಳೆಗಾಲದಲ್ಲಿ ಇಂತಹ ಅವಘಡಗಳು ಮತ್ತೆ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.

ರಸ್ತೆ ಒಂದು ಪಕ್ಕದ ತೋಟದ ಮಾಲೀಕರು ಪ್ರತಿ ಸಲ ತೋಟದಲ್ಲಿ ಜಂಗಲ್ ಕಟಿಂಗ್ ಮಾಡಿಸುವಾಗ ಬರಿ ತೋಟದ ಬೇಲಿ ಬಳಿಯ ಮರಗಳನ್ನು ಕಟ್ ಮಾಡಿಸುತ್ತಾರೆ. ರಸ್ತೆಯ ಮತ್ತೊಂದು ಬದಿ ಮರಗಳನ್ನು ಮೆಸ್ಕಾಂ ಅಧಿಕಾರಿಗಳು ಕಟಿಂಗ್ ಮಾಡದೆ ಇರುವುದರಿಂದ ಈ ಅನಾಹುತ ಸಂಭವಸಿದೆ. ಕೋಟೆಮಕ್ಕಿ, ಕೇಳಬೈಲ್ ಭಾಗದಿಂದ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಮತ್ತು ನೂರಾರು ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಇನ್ನೂ ಮುಂದಾದರು ವಿದ್ಯುತ್ ಲೈನ್ ಗೆ ತಾಗುವಂತಿರುವ ಮರದ ಎಲ್ಲಾ ಕೊನೆ ತೆಗೆಸಿ. ಯಾವುದೇ ಪ್ರಾಣಿ ಪಕ್ಷಿ ಜಾನುವಾರು, ಕಾಡುಪ್ರಾಣಿ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಮುಂದೆ ಸಮಸ್ಯೆ ಆಗದಂತೆ ಕೂಡಲೇ ಮರಗಸಿ ಮಾಡಿಸುವಂತೆ ಸಾರ್ವಜನಿಕರು ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸ್ತುನಿಷ್ಠ ವರದಿ ಪತ್ರಿಕೋದ್ಯಮದ ಮೂಲ ಧರ್ಮ: ರಶ್ಮಿ ಎಸ್‌.
33 ವರ್ಷಗಳ ಸರ್ಕಾರಿ ಸೇವೆ ತೃಪ್ತಿ ತಂದಿದೆ: ರವಿಕುಮಾರ್‌ ಅಭಿಮತ