ಕಮಲನಗರ: ಕಾಂಗ್ರೆಸ್ ಸರ್ಕಾರ ಯಾವುದೆ ಕಾರಣಕ್ಕೂ ನೀಡಿರುವ 5 ಗ್ಯಾರಂಟಿಗಳು ನಿಲ್ಲಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ಬೀದರ್ ಜಿಲ್ಲೆಯ ಜನತೆ ನಮ್ಮ ತಂದೆಯಿಂದ ಹಿಡಿದು ನಾನು ಮತ್ತು ನನ್ನ ಪುತ್ರ ಸಾಗರ ಖಂಡ್ರೆಯವರಿಗೆ ಆಶಿರ್ವಾದ ಮಾಡಿದ್ದೀರಿ. ಹೀಗಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ನಾವಾಗಲಿ ನಿಮ್ಮ ಕಿರಿಯ ವಯಸ್ಸಿನ ಸಂಸದರಾದ ಸಾಗರ ಖಂಡ್ರೆ ಅವರು 24 ಗಂಟೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.2019ರಲ್ಲಿ ನಾನು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ 300 ಕೋಟಿ ರು. ಅನುದಾನ ತಂದು ಬಸವೇಶ್ವರರ ಅನುಭವ ಮಂಟಪವು ಪ್ರಾರಂಭಿಸಿದ್ದೇವೆ. ಮುಂದೆ ಒಂದು ವರ್ಷದಲ್ಲಿ ಇನ್ನು 600 ಕೋಟಿ ರು ತಂದು ಮುಂದಿನ ವರ್ಷದಲ್ಲಿ ಉದ್ಘಾಟಿಸಲಿದ್ದೇವೆ ಎಂದರು.