ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸುತ್ತಿದ್ದಾರೆ. ಕವಡಿಮಟ್ಟಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ, ₹೨೦೦ ಕೋಟಿಗೂ ಅಧಿಕ ಮೊತ್ತದ ರಸ್ತೆಗಳ ಅಭಿವೃದ್ಧಿ, ನೀರಾವರಿ ಇಲಾಖೆಯಿಂದ ವಿವಿಧ ಕೆಲಸಗಳು, ನೂತನ ಕೆಪಿಟಿಸಿಎಲ್ ಕಚೇರಿ ಕಟ್ಟಡ ಲೋಕಾರ್ಪಣೆ, ಸೋಷಿಯಲ್ ವೆಲ್ಪೇರ್ ಹಾಸ್ಟೆಲ್‌ಗಳ ಕಟ್ಟಡ, ಐಟಿಐ ಕಾಲೇಜು ಒಳಗೊಂಡು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ತಾಳಿಕೋಟೆ ತಾಲೂಕಿಗೆ ಸಂಬಂಧಿಸಿದ ಯಾವುದೇ ಅಭಿವೃದ್ದಿ ಕಾರ್ಯಕ್ರಮದ ಚಾಲನೆಯನ್ನು ಇದರಲ್ಲಿ ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ತಾಳಿಕೋಟೆ ತಾಲೂಕಿಗೆ ಮತ್ತೇ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳನ್ನು ಕರೆಸಿ ಬೂದಿಹಾಳ-ಪೀರಾಪೂರ ನೀರಾವರಿ ಯೋಜನೆ ವಿಸ್ತರಣೆ ಕಾಮಗಾರಿ, ನಾಗರಬೆಟ್ಟ ಏತ ನೀರಾವರಿ ಯೋಜನೆ, ತಾಳಿಕೋಟೆಗೆ ಕುಡಿಯುವ ನೀರು ಪೂರೈಸುವ ಮಾಳನೂರ ಕೆರೆ ಆಳ ಹೆಚ್ಚಿಸುವುದು, ಡೋಣಿ ನದಿ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಒಳಗೊಂಡಂತೆ ಸಬ್ ರಿಜಿಸ್ಟರ್ ಕಚೇರಿ ಒಳಗೊಂಡಂತೆ ವಿವಿಧ ಕಚೇರಿಗಳ ಸ್ಥಾಪನೆ ಜೊತೆಗೆ ₹೧ ಸಾವಿರ ಕೋಟಿಗೂ ಅಧಿಕ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.ಗ್ಯಾರಂಟಿಯಿಂದ ಕ್ಷೇತ್ರದ ಲಕ್ಷಾಂತರ ಜನರಿಗೆ ಲಾಭ:
ಈ ಸಮಯದಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಶರಣುಧನಿ ದೇಶಮುಖ, ಪ್ರಭುಗೌಡ ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಸಿದ್ದನಗೌಡ ಪಾಟೀಲ(ನಾವದಗಿ), ಬಸನಗೌಡ ಜೈನಾಪೂರ, ಮೈಹಿಬೂಬ ಕೇಂಭಾವಿ, ಶಿವನಗೌಡ ತಾಳಿಕೋಟಿ, ವಿರೇಶಗೌಡ ಅಸ್ಕಿ, ಸಂಗನಗೌಡ ಅಸ್ಕಿ, ಎ.ಡಿ.ಏಕೀನ್, ಮುಸ್ತಫಾ ಚೌದ್ರಿ, ಮೊದಲಾದವರು ಉಪಸ್ಥಿತರಿದ್ದರು.
ವರ್ತಕರಲ್ಲಿ ಶಾಸಕರ ಮನವಿ
--------
ಚುನಾವಣೆ ವೇಳೆ ಮಾತ್ರ ರಾಜಕಾರಣ ಚುನಾವಣೆ. ನಂತರ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವಂತಹ ಕೆಲಸ ನಾನು ಯಾವತ್ತಿಗೂ ಮಾಡುತ್ತಾ ಬಂದಿದ್ದೇನೆ. ಯಾವುದೇ ಪಕ್ಷದಲ್ಲಿ ಯಾರೇ ಓಡಾಡಿದರೂ ಅವರು ನನ್ನವರಲ್ಲ ಎಂದು ಹೇಳಲ್ಲ. ಎಲ್ಲರೂ ನಮ್ಮವರೇ ಆಗಿದ್ದಾರೆ. ನನಗೆ ಯಾರ ಮೇಲೂ ಅಸೂಯೆ ಭಾವನೆ ಇಲ್ಲ. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪಕ್ಷಬೇಧ ಮರೆತು ಎಲ್ಲರೂ ಆಗಮಿಸಬೇಕು.