ಎನುಮೆರೇಶನ್ ಫಾರಂ ಭರ್ತಿ ಮಾಡಿ 5,755 ಮಂದಿ ಸಲ್ಲಿಕೆ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ನಡುವೆ ಕಳೆದ ಎರಡು ದಿನ ಬರೋಬ್ಬರಿ 32,303 ಮತದಾರರಿಗೆ ಎನುಮರೇಷನ್ ಫಾರಂ ವಿತರಣೆ ಮೂಲಕ ಒಟ್ಟು 47,773 ಫಾರಂ ಮತದಾರರ ಕೈ ಸೇರಿಸಲಾಗಿದೆ.
ಕಳೆದ 2 ದಿನಗಳಿಂದ ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ನಡುವೆ ಎಸ್‌ಐಆರ್ ಎನುಮೆರೇಷನ್ ಫಾರಂ ವಿತರಣೆ ಕಾರ್ಯ ಸಹ ನಡೆಸಲಾಗುತ್ತಿದೆ. ಮಂಗಳವಾರ ಸುಮಾರು 15,470 ಸಾವಿರ ಫಾರಂ ವಿತರಣೆ ಮಾಡಿದ್ದು, ಎರಡನೇ ದಿನ 32,303 ಫಾರಂ ವಿತರಿಸಿದ್ದಾರೆ. ಈ ಮೂಲಕ ಒಟ್ಟು 47,773ಕ್ಕೆ ವಿತರಣೆ ಪೂರ್ಣಗೊಂಡಿದೆ.ಇದರೊಂದಿಗೆ ಈಗಾಗಲೇ ಬರೋಬ್ಬರಿ 5,755 ಎನುಮೆರೇಶನ್ ಫಾರಂ ಅನ್ನು ಭರ್ತಿ ಮಾಡಿ ವಾಪಾಸ್ ಬೂತ್‌ಮಟ್ಟದ ಅಧಿಕಾರಿಗಳಿಗೆ ನೀಡಿದ್ದಾರೆ. ಈ ಫಾರಂಗಳನ್ನು ಬಿಎಲ್‌ಒ ಪರಿಶೀಲಿಸಿ ಚುನಾವಣಾ ಆಯೋಗದ ಆ್ಯಪ್‌ನಲ್ಲಿ ಡಿಜಿಟಲೀಕರಿ ಸಿದ್ದಾರೆ. ಮೊದಲ ದಿನ 1,394 ಫಾರಂ ಡಿಜಿಟಲೀಕರಣ ಆಗಿತ್ತು, 2ನೇ ದಿನ 4,316 ಫಾರಂ ಡಿಜಿಟಲೀಕರಣ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಫಾರಂ ವಿತರಿಸಿದ ತಕ್ಷಣ ಅಪ್‌ಡೇಟ್ ಮಾಡಿ: ಜಿಲ್ಲಾಧಿಕಾರಿ
ಚಿಕ್ಕಮಗಳೂರು ನಗರದ ದಂಡರಮಕ್ಕಿ, ಜಯನಗರ, ಕೆ,ಆರ್.ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಅವರು ಬೂತ್‌ಮಟ್ಟದ ಅಧಿಕಾರಿಗಳು ಮತದಾರರಿಗೆ ಎನುಮೆರೇಷನ್ ಫಾರಂ ವಿತರಣೆ ಮಾಡುವಂತೆ ತಕ್ಷಣ ಚುನಾವಣಾ ಆಯೋಗದ ಆ್ಯಪ್‌ಗೆ ಅಪ್ ಲೋಡ್ ಮಾಡಬೇಕು. ತಡವಾದರೆ, ಜಿಲ್ಲೆಯ ಪ್ರಗತಿಯಲ್ಲಿ ಹಿನ್ನಡೆ ತೋರಲಿದೆ. ಹೀಗಾಗಿ ಪ್ರತಿ ಮತದಾರರಿಗೆ ಫಾರಂ ನೀಡುತ್ತಿದಂತೆ ಅಪ್‌ಡೇಟ್ ಮಾಡುವಂತೆ ನಿರ್ದೇಶಿಸಿದ್ದಾರೆ.
ಫೋಟೋ
- ಬಾಕ್ಸ್---
ಶೃಂಗೇರಿ1,67,1715251822ಮೂಡಿಗೆರೆ 1,67,2997774560 ಚಿಕ್ಕಮಗಳೂರು2,26,93410,002907ತರೀಕೆರೆ1,92,087 14,4082517ಕಡೂರು2,06,74010,338949