ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ 65 ಲಕ್ಷ ಬಳಕೆ

KannadaprabhaNewsNetwork |  
Published : Aug 07, 2024, 01:13 AM IST
74 | Kannada Prabha

ಸಾರಾಂಶ

ಸಾಮಾಜಿಕ ಅರಣ್ಯ 25 ಕಾಮಗಾರಿಗಳನ್ನು ಕೆರೆಯ ಹೂಳು ತೆಗೆಸಲು ಆಯ್ಕೆ ಮಾಡಿಕೊಂಡಿದ್ದರೆ, ಇನ್ನುಳಿದವು ವೈಯಕ್ತಿಕ ಕಾಮಗಾರಿಗಳು

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಬಿ. ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 2023-24ನೇ ಆರ್ಥಿಕ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ 65 ಲಕ್ಷ ಹಾಗೂ 15 ನೇ ಹಣಕಾಸಿನಲ್ಲಿ 32 ಲಕ್ಷ ರು. ಗಳನ್ನು ಅಭಿವದ್ಧಿಗೆ ಬಳಕೆ ಮಾಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಪಿ. ಕೆಂಪೇಗೌಡ ಹೇಳಿದರು.

ತಾಲೂಕಿನ ಬಿ. ಶೆಟ್ಟಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಗ್ರಾಪಂ 2023-24 ನೇ ಸಾಲಿನ 1ನೇ ಅವಧಿಯ ಸಾಮಾಜಿಕ ಪರಿಶೋಧನೆ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ನರೇಗಾದಡಿ 107 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗೆ ತಲಾ 4 , ಸಾಮಾಜಿಕ ಅರಣ್ಯ 25 ಕಾಮಗಾರಿಗಳನ್ನು ಕೆರೆಯ ಹೂಳು ತೆಗೆಸಲು ಆಯ್ಕೆ ಮಾಡಿಕೊಂಡಿದ್ದರೆ, ಇನ್ನುಳಿದವು ವೈಯಕ್ತಿಕ ಕಾಮಗಾರಿಗಳು ಆಗಿವೆ ಎಂದು ಮಾಹಿತಿ ನೀಡಿದರು.

ತಾಪಂ ಮಾಜಿ ಉಪಾಧ್ಯಕ್ಷ ಪ್ರಸನ್ನ ಮಾತನಾಡಿ, ತಲಕಾಡು ಹೋಬಳಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗೆ ಕಾವೇರಿ ನೀರಾವರಿ ನಿಗಮ ಮತ್ತು ಏತ ನೀರಾವರಿ ಯೋಜನೆಗಳ ಎಂಜಿನಿಯರ್ ಗಳು ಕಡ್ಡಾಯವಾಗಿ ಭಾಗವಹಿಸಿ, ಈ ಭಾಗದ ನೀರಾವರಿ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕ್ರಮಗಳನ್ನು ತಿಳಿಸಬೇಕು. ಈ ಬಗ್ಗೆ ಪಂಚಾಯಿತಿಯಲ್ಲಿ ನಿರ್ಣಯ ತೆಗೆದುಕೊಂಡು ಜಿಪಂ ಸಿಇಓ ಅವರಿಗೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಮಹಾತ್ಮ ಗಾಂಧಿ ನರೇಗಾ ಲೆಕ್ಕ ಪರಿಶೋಧಕ ರಂಗರಾಜು ಅವರು ಯೋಜನೆ ಕಾಮಗಾರಿಗಳ ವಿವರವನ್ನು ಸಭೆಗೆ ಮಂಡಿಸಿದರು. ಅಧ್ಯಕ್ಷ ಎಂ. ಪುಟ್ಟಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದಕ್ಷಿಣ ಮೂರ್ತಿ, ಸದಸ್ಯರಾದ ಶ್ರೀನಿವಾಸಮೂರ್ತಿ, ಕೆ.ಎಂ. ಕುಮಾರ, ಉಮಾಪತಿ, ಶಿವಶಂಕರ್, ನೀಲಯ್ಯ, ನಂಜಮ್ಮಣಿ, ಚಿಕ್ಕನಾಗಮ್ಮ, ಉದ್ಯೋಗ ಖಾತರಿ ಸಹಾಯಕ ಎಂಜಿನಿಯರ್ ಲೋಕೇಶ್, ಎಫ್.ಡಿಎ ವಿಶ್ವನಾಥ್, ಡಾಟಾ ಎಂಟ್ರಿ ಆಪರೇಟರ್ ಪ್ರಕಾಶ್, ಮುಖಂಡ ಶಂಭುಲಿಂಗ ಇದ್ದರು.

---------------

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ