- ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
ಹರಿಹರ: ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.೧೦ರಿಂದ ಆ.೧೨ ರವರೆಗೆ ಆಯೋಜಿಸಿರುವ ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
ಆ.೧೦ರಂದು ಬೆಳಗ್ಗೆ ೭ರಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಬೆಳಗ್ಗೆ ೯ ಗಂಟೆಗೆ ಪ್ರವಚನ, ೧೦ಕ್ಕೆ ಭಜನೆ, ೧೧ಕ್ಕೆ ಪ್ರಹ್ಲಾದ ರಾಜರಿಗೆ ಕನಕಾಭಿಷೇಕ ಅಲಂಕಾರ, ನೈವೇದ್ಯ, ಹಸ್ತೋದಕ, ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ, ಸಂಜೆ ೬ ಗಂಟೆಗೆ ಗುರು ಸಾರ್ವಭೌಮ ದಾಸಾ ಸಾಹಿತ್ಯ ಪ್ರಾಜೆಕ್ಟ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಆ.೧೧ರಂದು ಬೆಳಗ್ಗೆ ೮ ಗಂಟೆಗೆ ಮಠದ ಪ್ರಾಂಗಣದಲ್ಲಿ ಫಲ, ಪುಷ್ಪಗಳ ಮೆರವಣಿಗೆ ಹಾಗೂ ಗುರುಗಳಿಗೆ ಫಲ-ಪಂಚಾಮೃತ ಅಭಿಷೇಕ, ೧೦ಕ್ಕೆ ರಾಯರ ತುಲಾಭಾರ, ೧೧.೩೦ಕ್ಕೆ ಪಲ್ಲಕ್ಕಿ ಉತ್ಸವ, ಬೆಳ್ಳಿ ರಥೋತ್ಸವ, ಸಂಜೆ ೬ಕ್ಕೆ ಸಂಗೀತ ಕಾರ್ಯಕ್ರಮ, ಸಭಾಭವನದಲ್ಲಿ ವಿಶೇಷ ದೀಪ ಅಲಂಕಾರ ಸೇವೆ ನಡೆಯಲಿದೆ.
- - -
-04HRR01.ಜೆಪಿಜಿ: ಹರಿಹರದ ರಾಘವೇಂದ್ರ ಸ್ವಾಮಿ ಮಠ.