ಲಕ್ಕವಳ್ಳಿಯ ಅಭಿವೃದ್ಧಿ ಕಾಮಗಾರಿಗೆ ₹4. 48 ಕೋಟಿ ಅನುದಾನ: ಶಾಸಕ ಜಿ.ಎಚ್.ಶ್ರೀನಿವಾಸ್

KannadaprabhaNewsNetwork |  
Published : May 25, 2025, 01:08 AM IST
ಲಕ್ಕವಳ್ಳಿ ಗ್ರಾಮಕ್ಕೆ ಹಲವು ಅಭಿವೃಧ್ದಿ ಕಾಮಗಾರಿಗಳಿಗಾಗಿ ಇದುವರೆಗೆ     4 ಕೋಟಿ 48 ಲಕ್ಷ ರೂ. ಅನುದಾನ ಒದಗಿಸಲಾಗಿದೆಃ ಶಾಸಕ ಜಿ.ಹೆಚ್.ಶ್ರೀನಿವಾಸ್ | Kannada Prabha

ಸಾರಾಂಶ

ತರೀಕೆರೆ, ಲಕ್ಕವಳ್ಳಿ ಗ್ರಾಮಕ್ಕೆ ಹಲವು ಅಭಿವೃದ್ಧಿ ಕಾಮಗಾರಿಗಳಿಗಾಗಿ ಇದುವರೆಗೆ ₹4 ಕೋಟಿ 48 ಲಕ್ಷ ರು. ಅನುದಾನ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.

ಲಕ್ಕವಳ್ಳಿ ಗ್ರಾಮದಲ್ಲಿ ₹ 2 .80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮುಖ್ಯರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಲಕ್ಕವಳ್ಳಿ ಗ್ರಾಮಕ್ಕೆ ಹಲವು ಅಭಿವೃದ್ಧಿ ಕಾಮಗಾರಿಗಳಿಗಾಗಿ ಇದುವರೆಗೆ ₹4 ಕೋಟಿ 48 ಲಕ್ಷ ರು. ಅನುದಾನ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.ಶನಿವಾರ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ₹ 2 .80 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮುಖ್ಯ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ನಮ್ಮ ಶಾಸಕರ ಸ್ಥಾನದ ಹಿಂದಿನ ಅವಧಿಯಲ್ಲಿ ಇದೇ ರಸ್ತೆ ಅಭಿವೃದ್ಧಿ ಗೋಸ್ಕರ ಅನುದಾನ ನೀಡಲಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಕಾಮಗಾರಿ ನಡೆಯದೆ ಸದರಿ ಅನುದಾನವನ್ನು ಅಜ್ಜಂಪುರಕ್ಕೆ ವರ್ಗಾಯಿಸಲಾಗಿತ್ತು. ಈಗ ಗ್ರಾಮದ ಎಲ್ಲ ಮುಖಂಡರ ಸಲಹೆ ಪಡೆದು ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈಗ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿ ಬಂದಿರುವುದು ಲಕ್ಕವಳ್ಳಿ ಜನತೆ ಬಹು ದಿನದ ಕನಸು ನನಸಾಗಿದೆ ಎಂದು ಹೇಳಿದರು.

ಲಕ್ಕವಳ್ಳಿ ಗ್ರಾಮದಲ್ಲಿ ನಿವೇಶನ ರಹಿತರು ತುಂಬಾ ಜನರಿದ್ದಾರೆ. ಆದರೆ 70 ನಿವೇಶನಗಳನ್ನು ಮಾತ್ರ ನೀಡುವ ಅವಕಾಶ ವಿದೆ. ಯಾವುದೇ ಕಾರಣಕ್ಕೂ ಅರ್ಹರಿಗೆ ಅನ್ಯಾಯ ಮಾಡದೆ, ನ್ಯಾಯಯುತವಾಗಿ ಸಾರ್ವಜನಿಕರ ಎದುರು ನಿವೇಶನ ವಿತರಿಸಲಾಗುವುದು ಎಂದು ತಿಳಿಸಿದರು.ತರೀಕೆರೆ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಅಭಿವೃದ್ಧಿ ಮತ್ತು ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಸುಸಜ್ಜಿತ ಕ್ರೀಡಾಂಗಣ ನಿರ್ಮಿಸ ಲಾಗುವುದು ಎಂದು ತಿಳಿಸಿದರು.ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್‌ ರೆಹಮಾನ್, ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ಡಾ.ಟಿ.ಎನ್. ಜಗದೀಶ್ ಮಾತನಾಡಿದರು. ಈ ಸಂದರ್ಭದಲ್ಲಿ ಲಕ್ಕವಳ್ಳಿ ಗ್ರಾಪಂ ಉಪಾಧ್ಯಕ್ಷೆ ನಿರ್ಮಲಾ, ಮಾಜಿ ಅಧ್ಯಕ್ಷ ಶಿವಕಿರಣ್, ಜಿಲ್ಲಾ ಕೆಡಿಪಿ ಸದಸ್ಯ ಸಿರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಲ್.ಟಿ.ಹೇಮಣ್ಣ, ಗ್ಯಾರೆಂಟಿ ಯೋಜನೆ ಸಮಿತಿ ಸದಸ್ಯ ಮಣಿಕಂಠ, ಕೆಂಚಿಕೊಪ್ಪ ಗ್ರಾಪಂ ಅಧ್ಯಕ್ಷೆ ಗುಲಾಬಿ, ಲೋಕೋಪಯೋಗಿ ಇಲಾಖೆ ಎಇಇ ನಾಗೇಂದ್ರಪ್ಪ, ಮುಖಂಡರಾದ ಹರಿಕೃಷ್ಣ, ಶಿವಕುಮಾರ್, ಹರೀಶ್, ರಾಜಶೇಖರ್ ಹಾಗೂ ಇತರರು ಹಾಜರಿದ್ದರು.24ಕೆಟಿಆರ್.ಕೆ.10ಃ

ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್‌ ಗುದ್ದಲಿಪೂಜೆ ನೆರವೇರಿಸಿದರು. ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ ಅಬ್ದುಲ್‌ರೆಹಮಾನ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ