ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ ಹುಂಡಿಯಲ್ಲಿ 4.80 ಲಕ್ಷ ರು. ಸಂಗ್ರಹ

KannadaprabhaNewsNetwork |  
Published : Jun 26, 2026, 01:45 AM IST
25ಕೆಎಂಎನ್ ಡಿ17 | Kannada Prabha

ಸಾರಾಂಶ

ಕಿಕ್ಕೇರಿ ಹೋಬಳಿಯ ಶರಣರ ಗ್ರಾಮ ಸಾಸಲು ಕ್ಷೇತ್ರದ ಮುಜರಾಯಿ ದೇಗುಲವಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯಕ್ರಮ ನಡೆಯಿತು. ಎರಡು ದೇಗುಲಗಳಿಂದ 4,80,025 ರು. ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿ ಹಾಕಲಾಗಿತ್ತು.

ಕಿಕ್ಕೇರಿ:

ಹೋಬಳಿಯ ಶರಣರ ಗ್ರಾಮ ಸಾಸಲು ಕ್ಷೇತ್ರದ ಮುಜರಾಯಿ ದೇಗುಲವಾದ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯಕ್ರಮ ನಡೆಯಿತು.

ಮುಜರಾಯಿ ಇಲಾಖೆ ಅಧಿಕಾರಿ ತಹಸೀಲ್ದಾರ್ ಎಸ್.ಯು.ಅಶೋಕ್ ಮಾರ್ಗದರ್ಶನದಂತೆ ಉಪ ತಹಸೀಲ್ದಾರ್ ವೀಣಾ ನೇತೃತ್ವದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ದೇಗುಲದ ಆವರಣದಲ್ಲಿ ಎಣಿಕೆ ಕಾರ್ಯ ಜರುಗಿತು.

ಎರಡು ದೇಗುಲಗಳಿಂದ 4,80,025 ರು. ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿ ಹಾಕಲಾಗಿತ್ತು. ಹಲವು ಭಕ್ತರು ಬೆಳ್ಳಿ ಲೇಪನದ ನಾಗರ ಸೆಡೆ, ತೊಟ್ಟಿಲುವಿನಂತಹ ವಸ್ತುಗಳನ್ನು ಹರಕೆ ರೂಪದಲ್ಲಿ ಭಕ್ತರು ದೇವರಿಗೆ ಅರ್ಪಿಸಿದ್ದರು.

ದೇಗುಲಗಳಲ್ಲಿದ್ದ 16 ಹುಂಡಿಗಳನ್ನು ಪೊಲೀಸರ ಬಿಗಿ ಭದ್ರತೆಯಲ್ಲಿ ಎಣಿಕೆ ಮಾಡಲಾಯಿತು. ಭಕ್ತರು ಸುಮಾರು 2 ವರ್ಷಗಳಾದರೂ ದೇಗುಲ ಜೀರ್ಣೋದ್ಧಾರವಾಗಿಲ್ಲ. ಬಾಲಾಲಯದಲ್ಲಿ ದೇವರ ಮೂರ್ತಿ ಇದೆ. ಭಕ್ತರಿಗೆ ದರ್ಶನಕ್ಕೆ, ಬಟ್ಟೆ ಬದಲಾಯಿಸಿಕೊಳ್ಳಲು ತೊಂದರೆಯಾಗುತ್ತಿದೆ. ತ್ವರಿತವಾಗಿ ಮೂಲ ಸೌಲಭ್ಯ ಕಲ್ಪಿಸಿಕೊಡಿ ಎಂದು ಗ್ರಾಮಸ್ಥರು, ಭಕ್ತರು ಅಧಿಕಾರಿಗಳಲ್ಲಿ ಅಲವತ್ತುಕೊಂಡರು.

ಕಾಣಿಕೆ ಹಣವನ್ನು ಕೆ.ಆರ್.ಪೇಟೆ ಬ್ಯಾಂಕ್‌ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾ ಕರಿಸಲಾಯಿತು.

ರಾಜಸ್ವ ನಿರೀಕ್ಷಕ ಡಿ.ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ, ತಿಪ್ಪೇಶ್, ಸುನೀಲ್‌ ಗಾಣಿಗೇರ್, ಗ್ರಾಮ ಸಹಾಯಕರು, ಬ್ಯಾಂಕ್‌ ಆಫ್‌ ಬರೋಡಾ ಸಿಬ್ಬಂದಿ, ಗ್ರಾಮ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಯನ್ಸ್ ಸಂಸ್ಥೆಗೆ ಪ್ರಚಾರ ವಾಹನ ಹಸ್ತಾಂತರ
ಸರ್ಕಾರಿ ಶಾಲಾ ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕೆ ಆಗ್ರಹ