ಕನ್ನಡಪ್ರಭ ವಾರ್ತೆ ಶಿರಾ
ಸಭೆಯಲ್ಲಿ ರೈತರ ಅಹವಾಲುಗಳನ್ನು ಆಲಿಸಿ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುರೇಶ್ ಬಾಬು, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ವಿಶೇಷ ವೇತನಗಳಿಗೆ ಅರ್ಜಿ ಸಲ್ಲಿಸುವವರು ಕುಂದುಕೊರತೆಗಳ ಸಭೆಗೆ ಹಾಜರಾಗಿ ಅರ್ಜಿ ನೀಡಿದಲ್ಲಿ, ಒಂದು ವಾರದೊಳಗೆ ಮಂಜೂರು ಪತ್ರ ನೀಡಲಾಗುವುದು. ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅರಿತು ಕೆಲಸ ಮಾಡಬೇಕು. ಪ್ರತಿಬಾರಿ ಅವರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಧಿಕಾರಿಗಳ ಮುಂದೆ ಗೋಗರೆಯುವುದನ್ನು ತಪ್ಪಿಸಲು ಹಾಗೂ ಶಾಸಕರನ್ನು ಹುಡುಕಿಕೊಂಡು ದೂರದಿಂದ ಬರುವ ಕಷ್ಟ ತಪ್ಪಿಸುವ ಉದ್ದೇಶದಿಂದ ಕುಂದು ಕೊರತೆ ಸಭೆ ನಡೆಸುತ್ತಿದ್ದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬುಕ್ಕಾಪಟ್ಟಣ ಹೋಬಳಿಯ ಎಲ್ಲಾ ರೈತರು ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್ ಆನಂದ್ ಕುಮಾರ್ ಮತ್ತು ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮುಖಂಡರಾದ ಶಾಂತಕುಮಾರ್, ಮುದ್ದು ಗಣೇಶ್, ಬುಕ್ಕಾಪಟ್ಟಣ ವಿ ಎಸ್ ಎಸ್ ಎನ್ ಅಧ್ಯಕ್ಷ ಹೊಸ ಪಾಳ್ಯ ಸತ್ಯನಾರಾಯಣ, ಸೇರಿದಂತೆ ಪಕ್ಷದ ಮುಖಂಡರು ಸಾರ್ವಜನಿಕರು ಬುಕ್ಕಾಪಟ್ಟಣ ಹೋಬಳಿಯ ರೈತರು ಪಾಲ್ಗೊಂಡಿದ್ದರು.