ಹಟ್ಟಿ ತಿಪ್ಪೇಶನ ಹುಂಡಿಯಲ್ಲಿ 45.19 ಲಕ್ಷ ರು ಸಂಗ್ರಹ

KannadaprabhaNewsNetwork |  
Published : Oct 31, 2024, 02:04 AM IST
ನಾಯಕನಹಟ್ಟಿ ಸುದ್ದಿ ಕಡ್ಡಾಯ | Kannada Prabha

ಸಾರಾಂಶ

ನಾಯಕನಹಟ್ಟಿ: ಮಧ್ಯ ಕನಾಟಕದ ಬಹು ಆರಾಧ್ಯ ದೈವ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ, ದಾಸೋಹ ಮಂಟಪಗಳಲ್ಲಿನ ಹುಂಡಿಗಳನ್ನು ಬುಧವಾರ ಎಣಿಕೆ ನಡೆಸಲಾಗಿದ್ದು, ಒಟ್ಟು 45.19 ಲಕ್ಷ ರು. ಹಣ ಸಂಗ್ರಹಗೊಂಡಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ ತಿಳಿಸಿದ್ದಾರೆ.

ನಾಯಕನಹಟ್ಟಿ: ಮಧ್ಯ ಕನಾಟಕದ ಬಹು ಆರಾಧ್ಯ ದೈವ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ, ದಾಸೋಹ ಮಂಟಪಗಳಲ್ಲಿನ ಹುಂಡಿಗಳನ್ನು ಬುಧವಾರ ಎಣಿಕೆ ನಡೆಸಲಾಗಿದ್ದು, ಒಟ್ಟು 45.19 ಲಕ್ಷ ರು. ಹಣ ಸಂಗ್ರಹಗೊಂಡಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಗಂಗಾಧರಪ್ಪ ತಿಳಿಸಿದ್ದಾರೆ. ಒಳಮಠದಲ್ಲಿ ಒಟ್ಟು 12, ಹೊರಮಠದಲ್ಲಿ 5, ಅಭಿ ಮಂಟಪದಲ್ಲಿ 1, ಈಶ್ವರ ಸನ್ನಿಧಿಯಲ್ಲಿ 1 ಸೇರಿದಂತೆ ಒಟ್ಟು 19 ಹುಂಡಿಗಳನ್ನು ತೆರೆದು ಎಣಿಕೆ ನಡೆಲಾಗಿದೆ. ಒಳಮಠದ 12 ಹುಂಡಿಗಳಲ್ಲಿ ರು.35,83445, ಹೊರಮಠದ 5 ಹುಂಡಿಗಳಲ್ಲಿ ರು 9,35,327 ಸಂಗ್ರಹಗೊಂಡಿದೆ ಎಂದು ವಿವರಿಸಿದರು. ಒಳಮಠದಲ್ಲಿ ರು. 4.89 ಕೋಟಿ ವೆಚ್ಚದಲ್ಲಿ ದಾಸೋಹ ಭವನ ನಿರ್ಮಾಣಗೊಳಿಸಲಾಗಿದ್ದು, ಬಾಕಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಏಕಕಾಲದಲ್ಲಿ ಸಾವಿರ ಮಂದಿಗೆ ಟೇಬಲ್ ಊಟದ ವ್ಯವಸ್ಥೆ, ಇಒ ಕಚೇರಿ, ಸಿಬ್ಬಂದಿ ಕಚೇರಿ, ಸಭಾಂಗಣ, ಸಮುದಾಯ ಭವನ, ಶೌಚಾಲಯಗಳನ್ನು ನೂತನ ದಾಸೋಹ ಭವನ ಒಳಗೊಂಡಿದೆ. ಒಳಮಠ ಹಾಗೂ ಹೊರಮಠಗಳ ಗುಡಿಗೋಪುರಗಳನ್ನು 18 ಲಕ್ಷ ರು. ವೆಚ್ಚದಲ್ಲಿ ಬಣ್ಣಲೇಪನಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. 8 ಲಕ್ಷ ರು. ವೆಚ್ಚದಲ್ಲಿ ಮಹಾರಥ ಎಡಭಾಗದ ಎರಡು ಗಾಲಿ ಮತ್ತು ಉಚ್ಛಾಯ ದುರಸ್ತಿ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.ತಹಸೀಲ್ದಾರ್ ರೆಹಾನ್ ಪಾಷ, ಉಪ ತಹಸೀಲ್ದಾರ್ ಶಾಕುಂತಲ.ಬಿ, ಕಂದಾಯ ನಿರೀಕ್ಷಕ ಚೇತನ್ ಕುಮಾರ್, ದೇಗುಲ ಸಿಬ್ಬಂದಿ ಸತೀಶ್, ಕೆನರಾ ಬ್ಯಾಂಕ್ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!