ಕನ್ನಡಪ್ರಭ ವಾರ್ತೆ ಮೈಸೂರು
ಲಲಿತರಾವ್- ನೃತ್ಯ, ಡಾ. ಮೈಸೂರು ಸತ್ಯನಾರಾಯಣ- ವೈದ್ಯಕೀಯ, ಡಿ. ರಾಮು, ಎಚ್. ಜನಾರ್ಧನ್- ರಂಗಭೂಮಿ, ಅರುಣ್ ಯೋಗಿರಾಜ್- ಶಿಲ್ಪಕಲೆ ಅವರಿಗೆ ಮೈಸೂರು ಜಿಲ್ಲೆಯ ಕೋಟಾದಲ್ಲೂ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ [ಶಿಕ್ಷಣ] ಅವರಿಗೆ ಕೊಡಗು ಜಿಲ್ಲೆಯ ಕೋಟಾದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಕೆಂಚಯ್ಯ- ಜಾನಪದ, ಫಜ್ಲು ರೆಹಮಾನ್ ಖಾನ್- ಚಿತ್ರಕಲೆ, ಮಾಲತಿಶ್ರೀ- ರಂಗಭೂಮಿ, ಡಾ.ರತಿರಾವ್- ವಿಜ್ಞಾನ, ತಂತ್ರಜ್ಞಾನ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರಿಗೆ ಸಮಾಜಸೇವೆ ಕ್ಷೇತ್ಪದಿಂದ ಚಿಕ್ಕಮಗಳೂರು ಕೋಟಾದಲ್ಲಿ ಪ್ರಶಸ್ತಿ ನೀಡಲಾಗಿದೆ. ಪ್ರೊ. ಪದ್ಮಾ ಶೇಖರ್ಪ್ರೊ.ಪದ್ಮಾ ಶೇಖರ್ ಅವರು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ. ಜೈನ ಸಾಹಿತ್ಯದ ಜ್ಞಾನ ಪ್ರಸಾರದಲ್ಲಿ ತೊಡಗಿಸಿಕೊಂಡವರು. ಕೊಡಗು ಜಿಲ್ಲೆಯಲ್ಲಿ ಜನನ. ಪ್ರೊ.ಸೋಮಶೇಖರ ಗೌಡ ಅವರನ್ನು ವಿವಾಹವಾಗಿದ್ದಾರೆ. ಮಾತ್ರೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಶ್ರೀ ಚೌಡಯ್ಯಸಾಹಿತ್ಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರ ಸಂದಿವೆ. ಎಚ್. ಜನಾರ್ಧನ್
ಮೈಸೂರು ಶೈಲಿಯ ಭರತನಾಟ್ಯ ಶಿಕ್ಷಣವನ್ನು 52 ವರ್ಷಗಳಿಂದ ನಿರಂತರವಾಗಿ ಮುಂದುವರೆಸುತ್ತಿರುವ ಹಿರಿಯಚೇತನ ಲಲಿತಾ ಕೋರೆ ಎಂ. ರಾವ್ ಅವರು. ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ ಅವರ ಶಿಷ್ಯೆ. ಶಾಂತಲಾ ನೃತ್ಯಕಲಾ ನಿಕೇತನ ಪ್ರಾರಂಭಿಸಿ, ಸಾವಿರಾರು ಮಂದಿಗೆ ನೃತ್ಯ ಕಲಿಸಿದ್ದಾರೆ. ನೂಪುರಶ್ರೀ, ಅತ್ಯುತ್ತಮ ಭರತನಾಟ್ಯ ಶಿಕ್ಷಕಿ ಪ್ರಶಸ್ತಿ, ಕಲಾದೀಪ್ತಿ, ನಾಟ್ಯ ಮಯೂರಿ, ನೃತ್ಯವಿದ್ಯಾನಿಧಿ, ನಾಟ್ಯಕಲಾ ಮಯೂರಿ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು. ಡಿ. ರಾಮು
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಿಸಿರುವ ಶ್ರೀರಾಮಮಂದಿರದಲ್ಲಿ ಬಾಲರಾಮನ ಸುಂದರ ಹಾಗೂ ಆಕರ್ಷಕವಾದ ವಿಗ್ರಹವನ್ನು ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್. ಐದು ತಲೆಮಾರುಗಳಿಂದ ಶಿಲ್ಪಕಲೆಯನ್ನು ಅಪ್ಪಿಕೊಂಡಿರುವ ಕುಟುಂಬದ ಕುಡಿ ಅವರು.
ಅರುಣ್ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಪ್ರತಿಷ್ಠಿತ ನಾಲ್ವಡಿ ಕೃಷ್ಣರಾಜ ಒಡೆಯರ್ರ್ ಪ್ರಶಸ್ತಿ, ಕರ್ನಾಟಕ ಕರಕುಶಲ ಪರಿಷತ್ನ ಗೌರವ ಸದಸ್ಯತ್ವ, ದಕ್ಷಿಣ ವಲಯ ಯುವ ಕಲಾಕಾರ, ಶಿಲ್ಪಕೌಸ್ತುಭ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ, ಮುಖ್ಯಮಂತ್ರಿಗಳಿಂದ ಗೌರವ ಪುರಸ್ಕಾರ, ಕ್ರೀಡಾ ಅಕಾಡೆಮಿಯಿಂದ ಗೌರವ, ಅಮರಶಿಲ್ಪಿ ಜಕಣಾಚಾರ್ಯ ಟ್ರಸ್ಟ್ನಿಂದ ಗೌರವ ದೊರೆತಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಶಿಲ್ಪಕಲಾಕೃತಿಗಳ ಸ್ಪರ್ಧೆ ಮತ್ತು ಶಿಬಿರಗಳಲ್ಲಿ ಪಾಲ್ಗೊಂಡ ಹೆಮ್ಮೆ ಇವರಿಗಿದೆ.
ಕೋಟ್ಗಳು....
ನಾನು ಉಪನ್ಯಾಸಕಿ, ಪ್ರವಾಚಕಿ, ಪ್ರಾಧ್ಯಾಪಕಿ, ಕೊನೆಗೆ ಕುಲಪತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ನಿಧಾನವಾಗಿಯಾದರೂ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಮೈಸೂರು ವಿವಿ ಮಾನಸ ಗಂಗೋತ್ರಿಯಲ್ಲಿ ಜೈನಾಲಜಿ ವಿಭಾಗದ ಕಟ್ಟಡ, ಬೆಂಗಳೂರಿನಲ್ಲಿ ಸಂಸ್ಕೃತ ವಿವಿ ಕಟ್ಟಡ ಬರಲು ನಾನು ಕಾರಣ.
----
ನಾನು ರಂಗಭೂಮಿಯ ಜೊತೆಗೆ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿಕೊಂಡು ಬಂದವನು. ನಮ್ಮ ಆಲೋಚನೆಗಳಿಗೆ ತಕ್ಕಂತೆ ಇರುವ ಸರ್ಕಾರ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷ. ಇದು ನನ್ನೊಬ್ಬನಿಗೆ ಸಂದ ಪ್ರಶಸ್ತಿ ಅಲ್ಲ. ಇಡೀ ಸಮುದಾಯಕ್ಕೆ ಸಂದ ಗೌರವ.ಎಚ್. ಜನಾರ್ಧನ್, ಮಾಜಿ ನಿರ್ದೇಶಕರು, ರಂಗಾಯಣ
----ಗುಬ್ಬಿ ವೀರಣ್ಣನವರ ಕಾಲದಿಂದಲೂ ವೃತ್ತಿ ರಂಗಭೂಮಿಯಲ್ಲಿ ಕ್ಲಾರಿಯೋನೆಟ್ ವಾದಕನಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. 85ರ ಈ ಇಳಿ ವಯಸ್ಸಿನಲ್ಲಿ ಗುರುತಿಸಿ, ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದರಿಂದ ಖುಷಿಯಾಗಿದೆ.
- ಡಿ.ರಾಮು, ಹಿರಿಯ ಕ್ಲಾರಿಯೋನೆಟ್ ವಾದಕ----
ನಾನು ಕೆ. ವೆಂಕಟಲಕ್ಷ್ಮಮ್ಮ ಅವರ ಶಿಷ್ಯೆ. ಈಗ 79 ವರ್ಷ. ಈಗ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ.- ಲಲಿತರಾವ್, ಶಾಂತಲಾ ನೃತ್ಯಕಲಾನಿಕೇತನ