ಶಿವಕುಮಾರ ಕುಷ್ಟಗಿ
ಗದಗ: ಹಾವು ಕಡಿತವು ಉಷ್ಣವಲಯದಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಉಷ್ಣವಲಯದಲ್ಲಿರುವ ಜಿಲ್ಲೆಯಲ್ಲಿಯೂ ಎರಡು ವರ್ಷಗಳಲ್ಲಿ 400ಕ್ಕೂ ಅಧಿಕ ಜನರು ಹಾವುಗಳ ಕಡಿತಕ್ಕೆ ತುತ್ತಾಗಿ ತತ್ತರಿಸಿದ್ದಾರೆ.ಕೃಷಿ ಪ್ರಧಾನವಾಗಿರುವ ಜಿಲ್ಲೆಯ ರೈತರು, ಕೃಷಿ ಕೂಲಿ ಕಾರ್ಮಿಕರು, ಮಹಿಳಾ ಕಾರ್ಮಿಕರು ಸೇರಿದಂತೆ ನಿತ್ಯವೂ ಜಮೀನುಗಳಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗುವ ಬಡಜನರೇ ಹಾವು ಕಡಿತದ ಸಮಸ್ಯೆಯನ್ನು ಎದುರಿಸಿದ್ದಾರೆ.
481 ಜನರಿಗೆ ಹಾವು ಕಡಿತ: 2024ರಲ್ಲಿ 206 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಕೇವಲ 1 ಪ್ರಕರಣದಲ್ಲಿ ಮಾತ್ರ ಸಾವು ಸಂಭವಿಸಿದ್ದು, ಇನ್ನುಳಿದ 205 ಜನರ ಜೀವ ಉಳಿಸಲಾಗಿದೆ. 2025ರ ಅಕ್ಟೋಬರ್ ಅಂತ್ಯದವರೆಗೆ 275 ಜನರು ಹಾವು ಕಡಿತಕ್ಕೆ ತುತ್ತಾಗಿದ್ದು, ಅವರಲ್ಲಿ 3 ಜನರ ಸಾವು ಸಂಭವಿಸಿದ್ದು ಇನ್ನುಳಿದ 272 ಜನರ ಜೀವ ಉಳಿಸುವಲ್ಲಿ ಆರೋಗ್ಯ ಇಲಾಖೆ ಸಫಲವಾಗಿದೆ.
ಮಾನಸಿಕವಾಗಿ ಆಘಾತಕಾರಿ ಒತ್ತಡದ ಅಸ್ವಸ್ಥತೆ, ಖಿನ್ನತೆ ಮತ್ತು ನಿರಂತರ ಆತಂಕವನ್ನು ಹಾವು ಕಡಿತದಿಂದ ಬದುಕುಳಿದ ವ್ಯಕ್ತಿಯಲ್ಲಿ ಕಾಣಬಹುದಾಗಿದೆ.
ಯಾವೆಲ್ಲಾ ವಿಷಕಾರಿ?: ನಾಗರಹಾವು, ಕಟ್ಟುಹಾವು, ಮಂಡಲದ ಹಾವು, ಗರಗಸ ಮಂಡಲದ ಹಾವು, ಮಲಬಾರ ಪಿಟ್ ವೈಪರ್(ಹಪ್ಪಟೆ ಹಾವು) ಹಂಪ ನೋಸ್ಟ್ ಪಿಟ್ ವೈಪರ್, ಹವಳದ ಹಾವು ಮತ್ತು ಕಾಳಿಂಗ ಸರ್ಪ ಇವೆಲ್ಲ ವಿಷಕಾರಿಯಾಗಿದ್ದು, ಇನ್ನೇನು ಹಿಂಗಾರು ಪ್ರಾರಂಭವಾಗಿದ್ದು, ಮಳೆ ಕಡಿಮೆಯಾದ ಹಿನ್ನೆಲೆ ರೈತಾಪಿ ಜನರು ನಿತ್ಯವೂ ಹೆಚ್ಚಿನ ಸಮಯವನ್ನು ಜಮೀನುಗಳಲ್ಲಿಯೇ ಕಳೆಯುವುದರಿಂದಾಗಿ ಹಾವುಗಳ ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಉಚಿತವಾಗಿ ಚಿಕಿತ್ಸೆ: ವಿಷಕಾರಿ ಹಾವು ಕಡಿತಕ್ಕೆ ಎಎಸ್ವಿ(Anti snake venom) ಒಂದೇ ಫಲಕಾರಿ ಚಿಕಿತ್ಸೆಯಾಗಿದೆ. ಸಧ್ಯ 1120 ಎಎಸ್‌ಗಳ ದಾಸ್ತಾನು ಲಭ್ಯವಿದೆ. ಹಾವು ಕಡಿತದ ಬಗ್ಗೆ ಭಯಪಡದೇ ಎಚ್ಚರ ವಹಿಸಬೇಕು. ಹಾವು ಕಚ್ಚಿದ ತಕ್ಷಣ ಯಾವುದೇ ಸಾಂಪ್ರದಾಯಿಕ, ನಾಟಿ ಔಷಧ ಪಡೆಯದೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ನೋಡಲ್ ಅಧಿಕಾರಿ ಡಾ. ವೆಂಕಟೇಶ ರಾಠೋಡ ತಿಳಿಸಿದರು.
- ಕಚ್ಚಿದ ಭಾಗದಲ್ಲಿ ಏನನ್ನೂ ಹಚ್ಚಬೇಡಿ. ಕಚ್ಚಿದ ಭಾಗವನ್ನು ಅಲುಗಾಡಿಸದಂತೆ ನೋಡಿಕೊಳ್ಳಿ- ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗರ, ಬೆಲ್ಟ್, ಆಭರಣಗಳು, ವಾಚ್, ಬಿಗಿಯಾದ ಬಟ್ಟೆಗಳನ್ನು ಕಳಚಿ