ಬಿ.ಸಿ. ಪಾಟೀಲ್ ಜನ್ಮದಿನದ ನಿಮಿತ್ತ ರೋಗಿಗಳಿಗೆ ಹಣ್ಣುಹಂಪಲು ವಿತರಣೆ

KannadaprabhaNewsNetwork |  
Published : Nov 15, 2025, 02:00 AM IST
ಪೋಟೊ ಶಿರ್ಷಕೆ14ಎಚ್ ಕೆ ಅರ್ 02 | Kannada Prabha

ಸಾರಾಂಶ

ಮಾಜಿ ಸಚಿವರಾದ ಬಿ.ಸಿ. ಪಾಟೀಲರವರ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ತಾಲೂಕಿನ ಆಲದಗೇರಿ ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಮಕ್ಕಳಿಗೆ ಹಣ್ಣು,ಬ್ರೆಡ್ ವಿತರಿಸಿದರು.

ಹಿರೇಕೆರೂರು:ಮಾಜಿ ಸಚಿವರಾದ ಬಿ.ಸಿ. ಪಾಟೀಲರವರ ಜನ್ಮದಿನಾಚರಣೆ ನಿಮಿತ್ತ ಶುಕ್ರವಾರ ತಾಲೂಕಿನ ಆಲದಗೇರಿ ಗ್ರಾಮದ ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಮಕ್ಕಳಿಗೆ ಹಣ್ಣು,ಬ್ರೆಡ್ ವಿತರಿಸಿದರು. ಗ್ರಾಮದ ಬಿ.ಸಿ. ಪಾಟೀಲ ಅಭಿಮಾನಿ ಡಾ, ಮಂಜುನಾಥ ಚಲವಾದಿ ಮಾತನಾಡಿ, ಬಿ.ಸಿ. ಪಾಟೀಲ್ ಅವರು ಶಾಸಕರಾಗಿ, ಮಂತ್ರಿಗಳಾಗಿ ಹಲವು ಸಾರ್ವಜನಿಕ ಉತ್ತಮ ಕಾರ್ಯಗಳನ್ನು ಮಾಡಿದ್ದು ರಸ್ತೆ ನಿರ್ಮಾಣ, ನೀರಾವರಿ ಯೋಜನೆ, ಶಾಲೆ-ವಸತಿ ನಿಲಯಗಳು, ಆಸ್ಪತ್ರೆ, ಸಮುದಾಯ ಭವನ, ಮಿನಿ ವಿಧಾನಸೌಧ, ಅಗ್ನಿಶಾಮಕ, ಪೊಲೀಸ್ ಠಾಣೆ ಕಟ್ಟಡಗಳ ನಿರ್ಮಾಣ, ವಿದ್ಯುತ್ ಘಟಕಗಳ ಸ್ಥಾಪನೆ ಹಾಗೂ ಸಾವಿರಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಹಿರೇಕೆರೂರು ತಾಲೂಕಿನ ಧೀಮಂತ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು. ಗ್ರಾಪಂ ಸದಸ್ಯರು ಹಾಗೂ ಬಿಜೆಪಿಯ ಮುಖಂಡರಾದ ಕುಬೇರಪ್ಪ ಗೌಡರ ಮಾತನಾಡಿ, ಹಿರೇಕೆರೂರಿನ ಭಗೀರಥರಾದ ಬಿ.ಸಿ. ಪಾಟೀಲರವರು ಸದಾ ಪ್ರಜೆಗಳ ಚಿಂತಕರಾಗಿ ಅಧಿಕಾರ ಇರಲಿ, ಇಲ್ಲದಿರಲಿ. ಜನಸೇವೆಯಲ್ಲಿ ತೊಡಗಿರುತ್ತಾರೆ, ಅವರು ಮಾತು ನೀಡಿದಂತೆ ಹಿರೇಕೆರೂರು ತಾಲೂಕನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು. ಈ ವೇಳೆ ಮುಖಂಡರಾದ ಯಮನಪ್ಪ ತಳವಾರ, ಬಸಪ್ಪ ಮ ಮಾಸಣಗಿ, ವಿರುಪಾಕ್ಷಿ ಬೇಲೂರು, ನಾಗರಾಜ ಮಾಸಣಗಿ, ಲಕ್ಷ್ಮಣ ಹುಲ್ಲತ್ತಿ, ತನ್ವೀರ್ ಸಾಬ್ ರಟ್ಟಿಹಳ್ಳಿ, ಕಾಂತೇಶ್ ಗೋಣೆರ, ಹೇಗ್ಗಪ್ಪ ಜೋಗೇರ ಮುಂತಾದವರು ಉಪಸ್ಥಿತರಿದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ