ಕಾಫಿ ತೋಟದಲ್ಲಿ 5 ಕೆ.ಜಿ. ಗಾತ್ರದ ಗಜ ನಿಂಬೆ!

KannadaprabhaNewsNetwork |  
Published : Dec 22, 2023, 01:30 AM IST
ಚಿತ್ರ : 21ಎಂಡಿಕೆ7 : ವಿಜು ಸುಬ್ರಮಣಿ ಅವರು ಬೆಳೆದಿರುವ 5 ಕೆ.ಜಿ. ಗಾತ್ರದ ನಿಂಬೆ.  | Kannada Prabha

ಸಾರಾಂಶ

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ಅವರ ಕಾಫಿ ತೋಟದಲ್ಲಿ ಈ ಗಜ ನಿಂಬೆಹಣ್ಣು ಬೆಳೆದಿದ್ದು ಅಚ್ಚರಿ ಎಂಬಂತೆ ಅಂದಾಜು 6 ಅಡಿ ಎತ್ತರದ ಗಿಡದಲ್ಲಿ ಒಂದೇ ನಿಂಬೆ ಹಣ್ಣು ಬರೋಬ್ಬರಿ ಐದು ಕೆ.ಜಿ. ತೂಕದಲ್ಲಿ ಬೆಳೆದಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗಿನಲ್ಲಿ ಒಂದೇ ಗಜನಿಂಬೆಹಣ್ಣು ಬರೋಬ್ಬರಿ ಐದು ಕೆ. ಜಿ. ತೂಕ ಬೆಳೆದಿದ್ದು ಗಮನ ಸೆಳೆದಿದೆ. ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಕಾಫಿ ತೋಟ ಒಂದರಲ್ಲಿ ಬೆಳೆದ ಗಿಡದಲ್ಲಿ 5 ಕೆ,ಜಿ, ಗಾತ್ರದ ಗಜ ನಿಂಬೆಹಣ್ಣು ಕಂಡು ಕಾರ್ಮಿಕರು, ಸ್ಥಳೀಯ ರೈತರು ಆಶ್ಚರ್ಯಗೊಂಡಿದ್ದಾರೆ. ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ಅವರ ಕಾಫಿ ತೋಟದಲ್ಲಿ ಈ ಗಜ ನಿಂಬೆಹಣ್ಣು ಬೆಳೆದಿದ್ದು ಅಚ್ಚರಿ ಎಂಬಂತೆ ಅಂದಾಜು 6 ಅಡಿ ಎತ್ತರದ ಗಿಡದಲ್ಲಿಒಂದೇ ನಿಂಬೆ ಹಣ್ಣು ಬರೋಬ್ಬರಿ ಐದು ಕೆ.ಜಿ. ತೂಕದಲ್ಲಿ ಬೆಳೆದಿದೆ. ನಾಲ್ಕು ವರ್ಷಗಳ ಹಿಂದೆ ವಿಜು ಸುಬ್ರಮಣಿ ಅವರು ಮೈಸೂರು ಮಾರುಕಟ್ಟೆಯಲ್ಲಿ ಸಿಟ್ರಸ್ ಹಣ್ಣು ಖರೀದಿ ಮಾಡಿ ತಂದಿದ್ದರು. ಉಪಯೋಗಕ್ಕೆ ಬಾರದ ಒಂದು ಹಣ್ಣನ್ನು ಮನೆಯ ಹಿಂಬದಿಯ ತೋಟದಲ್ಲಿ ಎಸೆದಿದ್ದರೂ ಕೆಲ ದಿನಗಳ ನಂತರ ಸಣ್ಣ ಎರಡು ಗಿಡಗಳು ಬೆಳೆದಿದ್ದವು. ನಂತರ ಅವರು ಗಿಡವನ್ನು ಕಿತ್ತು ತೋಟದ ಬದಿಯಲ್ಲಿ ಸಾವಯವ ಗೊಬ್ಬರ ಬಳಸಿ ಗುಂಡಿ ತೋಡಿ ನೆಟ್ಟಿದ್ದರು. ಸುಮಾರು ಮೂರು ವರ್ಷಗಳ ಕಾಲ ಗಿಡ ಮಾತ್ರ ಬೆಳೆದಿತ್ತು. ಆದರೆ ಗಿಡದಲ್ಲಿ ಹೂವು, ಕಾಯಿ ಯಾವುದೂ ಕಂಡು ಬಂದಿರಲಿಲ್ಲ. ಇದು ಯಾವ ಗಿಡ ಎಂದು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

ನಾಲ್ಕು ವರ್ಷಗಳ ನಂತರ ಇತ್ತೀಚೆಗೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳೊಂದಿಗೆ ಸಣ್ಣ ಕಾಯಿಗಳು ಕಾಣಿಸಿಕೊಂಡಿದ್ದವು. ಕೆಲ ತಿಂಗಳ ನಂತರ ಕಾಯಿಗಳು ದೊಡ್ಡದಾಗುತ್ತಾ ಭಾರಿ ಗಾತ್ರದಲ್ಲಿ ಹಣ್ಣುಗಳಾಗಿ ಬೆಳೆದಿದ್ದವು. ''''''''ಇವು ಗಜ ನಿಂಬೆಹಣ್ಣು ಎಂದು ಹೇಳಲಾಗುತ್ತಿದ್ದು, ಇಟಲಿ, ಯೂರೋಪ್ ದೇಶಗಳಲ್ಲಿ ಅಪರೂಪದಲ್ಲಿ ಕಂಡು ಬರುವ ಅಪರೂಪದ ಗಜ ನಿಂಬೆಹಣ್ಣು ತಳಿಗೆ ಸೇರಿದ್ದಾಗಿದೆ'''''''' ಎಂದು ವಿಜು ಸುಬ್ರಮಣಿ ಅವರು ಮಾಹಿತಿ ನೀಡಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ