ಗದಗ: ವೀರೇಶ್ವರ ಪುಣ್ಯಾಶ್ರಮದ ಗಾನಯೋಗಿ ಶಿವಯೋಗಿ ಲಿಂ.ಪಂ.ಪಂಚಾಕ್ಷರಿ ಗವಾಯಿಗಳವರ 81ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯ ಸ್ಮರಣೋತ್ಸವ ಹಾಗೂ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ವೀರನಾರಾಯಣ ಬಡಾವಣೆಯ ಡಾ. ಪಂ.ಪುಟ್ಟರಾಜ ಸಮಾಜ ಸೇವಾ ಟ್ರಸ್ಟ್ ವತಿಯಿಂದ 50 ಸಾವಿರ ಮಿರ್ಚಿ, ಬಜಿ ಪ್ರಸಾದ ಸೇವೆ ನಡೆಯಿತು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಹಾಪಸಾದ ವಿತರಣೆಗೆ ಚಾಲನೆ ನೀಡಿ, ಅನ್ನ ದಾನ ಎಲ್ಲಾ ದಾನಕಿಂತಲೂ ಶ್ರೇಷ್ಠವಾದದ್ದು. ಆದ ಕಾರಣ ಈ ಪ್ರಸಾದ ಸೇವೆ ಮಾಡುತ್ತಿರುವ ನಿಮಗೆಲ್ಲ ಪುಟ್ಟರಾಜ, ಪಂಚಾಕ್ಷರಿ ಗವಾಯಿಗಳ ಆಶೀರ್ವಾದ ಸದಾ ಇರಲಿ ಎಂದರು.
ಟ್ರಸ್ಟ್ ಉಪಾಧ್ಯಕ್ಷ ಬಸನಗೌಡ ಪಾಟೀಲ, ಕಾರ್ಯದರ್ಶಿ ಗಂಗಾಧರ ಬೆನಕಲ್, ಸದಸ್ಯರಾದ ಈಶಪ್ಪ ಅಂಗಡಿ, ಮಾಂತೇಶ ಲಗಳಿ, ಬಸವರಾಜ ದಾವಣಗೆರೆ, ಭೀಮಪ್ಪ ಮೊಕಾಶಿ, ಶರಣಪ್ಪ ಮೇಟಿ, ಶಿವಯ್ಯ ಬೆಳ್ಳಿರಿಮಠ, ಸುನಿಲ ಚಿನ್ನಾಪುರ, ಶಿವಪ್ಪ ಲಗಳಿ, ಮಲ್ಲಿಕಾರ್ಜುನ ಕಿರೇಸೂರ, ರಾಜಶೇಖರ ಶೆಟ್ಟಣ್ಣವರ, ಪುಟ್ಟು ಕೊರ್ಲಳ್ಳಿ, ಮಂಜು ಕ್ಯಾಡದ, ಕೊಟ್ಟೂರು ಬಸಪ್ಪ, ಈರಣ್ಣ ಕಾತರಕಿ, ಗ್ಯಾನಪ್ಪ ಹಾಳಕೇರಿ, ದರ್ಶನ ಹಾಗೂ ಗುರು ಹಿರಿಯರು ಇದ್ದರು. ಸಾವಿರಾರು ಭಕ್ತರು, ಕಲಾವಿದರು, ಗುರು ಬಂಧುಗಳು ಪ್ರಸಾದ ಸೇವಿಸಿ ಪುನೀತರಾದರು.