ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಡೂರಿನಲ್ಲಿ ದೇವದಾರಿಯಿಂದ ಕುದುರೆಮುಖ ಉಕ್ಕು ಕಾರ್ಖಾನೆಗೆ ಸರಬರಾಜು ಮಾಡುವುದಕ್ಕೆ ಸಹಿ ಮಾಡಿದ್ದಾರೆ. ನಿಮಗೆ ಪರಿಸರದ ಬಗ್ಗೆ ಕಾಳಜಿ ಇದೆಯಾ ಕುಮಾರಸ್ವಾಮಿಯವರೇ ಎಂದು ಪ್ರಶ್ನಿಸಿದರು.
ಬಳ್ಳಾರಿಯನ್ನು ಗಣಿಧಣಿಗಳು ಈಗಾಗಲೇ ಹಾಳು ಮಾಡಿದ್ದಾರೆ. ಸುಪ್ರೀಂಕೋರ್ಟ್ ಇಲ್ಲಿ ಯಾವುದೇ ಗಣಿ ನಡೆದಂತೆ ಹೇಳಿದೆ. ಆದರೆ ದೇವದಾರಿಯಲ್ಲಿ ಗಣಿ ನಡೆಸಲು ಸಹಿ ಮಾಡಿದ್ದೇಕೆ. ಈಗಾಗಲೇ ಛತ್ತೀಸಘಡದಿಂದ ಕುದುರೆಮುಖಕ್ಕೆ ಸರಬರಾಜು ಆಗುತ್ತಿದೆ. ಇದರಿಂದ ನಿಮಗೆ ಸಮಸ್ಯೆ ಏನು ಎಂದು ಹೇಳಿದರು.ರಾಜ್ಯದಲ್ಲಿ ಹಾಲಿನ ದರ 2 ರು. ಏರಿಕೆಯನ್ನು ಲಕ್ಷ್ಮಣ್ ಸಮರ್ಥಿಸಿಕೊಂಡರು. ಬೆಲೆ ಏರಿಕೆಯನ್ನು ಬಿಜೆಪಿಯವರು ಹೇಳ್ತಾರೋ, ಸೃಷ್ಟಿ ಮಾಡ್ತಾರೋ ಗೊತ್ತಿಲ್ಲ. ಹಾಲಿನ ದರ ಜಾಸ್ತಿ ಮಾಡಿ ಯಾರಿಗೆ ಕೊಡ್ತೀವಿ? ರೈತರಿಗೆ ಅಲ್ವಾ? ಬೆಲೆ ಏರಿಕೆಯಿಂದ ನಮಗೆ ಹೊರೆ ಆಗ್ತಿದೆ ಅಂತ ಜನ ಸಾಮಾನ್ಯರು ಹೇಳ್ತಿದ್ದಾರಾ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಮೀಸಲು:
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ 57 ಸಾವಿರ ಕೋಟಿ ರು. ಮೀಸಲಿಡಲಾಗಿದೆ.3 ರು. ಏರಿಕೆ ಮಾಡಿರೋದ್ರಿಂದ ವಾರ್ಷಿಕವಾಗಿ 500 ಕೋಟಿ ಅಷ್ಟೇ ಬರೋದು. 500 ಕೋಟಿಯನ್ನು 57 ಸಾವಿರ ಕೋಟಿಗೆ ಸರಿದೂಗಿಸಲು ಆಗುತ್ತಾ? ಬಿಜೆಪಿಯವರು ತಲೆ ಬುಡ ಏನು ಇಲ್ಲದೆ ಮಾತನಾಡುತ್ತಾರೆ. ಬಾಯಿತೆಗೆದರೆ ಸುಳ್ಳುಹೇಳುವ ಜಾಯಮಾನವೇ ಬಿಜೆಪಿಯವರದ್ದು, ಬಿಜೆಪಿಯವರ ಮನೆ ದೇವರೆ ಸುಳ್ಳು ಎಂದು ವಾಗ್ದಾಳಿ ನಡೆಸಿದರು.