ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 52 ಸಾವಿರ ಕುಟುಂಬಗಳಿಗಿಲ್ಲ ಗೃಹಭಾಗ್ಯ!

KannadaprabhaNewsNetwork |  
Published : Aug 20, 2025, 01:30 AM IST

ಸಾರಾಂಶ

ಜಿಲ್ಲಾ ಪಂಚಾಯಿತಿ ನಡೆಸಿದ ಸರ್ವೆಯಲ್ಲಿ ಜಿಲ್ಲೆಯಲ್ಲಿ ಬರೊಬ್ಬರಿ 52,559 ಕುಟುಂಬಗಳಿಗೆ ಸ್ವತ ಸೂರು ಮಾತ್ರವಲ್ಲದೇ, ನಿವೇಶನವೂ ಇಲ್ಲದಿರುವುದು ಬಹಿರಂಗಗೊಂಡಿದೆ.

ಎಂ.ಅಫ್ರೋಜ್ ಖಾನ್ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 52, 559 ಕುಟುಂಬಗಳಿಗೆ ಸ್ವಂತ ಸೂರು ಇಲ್ಲ, ನಿವೇಶನವೂ ಇಲ್ಲ.2018ರಲ್ಲಿ ಜಿಲ್ಲಾ ಪಂಚಾಯಿತಿ ನಡೆಸಿರುವ ಸರ್ವೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಯಾವುದೇ ವಸತಿ ಯೋಜನೆಯಡಿ ಮನೆ ಪಡೆಯದ ಬಿಪಿಎಲ್ ಕುಟುಂಬಗಳು ಹಾಗೂ ಒಂದೇ ಸೂರಿನಲ್ಲಿ ಎರಡು- ಮೂರು ಕುಟುಂಬಗಳು ವಾಸಿಸುತ್ತಿರುವುದನ್ನೆ ಮಾನದಂಡವನ್ನಾಗಿಸಿಕೊಂಡು ಜಿಲ್ಲಾ ಪಂಚಾಯಿತಿ ನಡೆಸಿದ ಸರ್ವೆಯಲ್ಲಿ ಜಿಲ್ಲೆಯಲ್ಲಿ ಬರೊಬ್ಬರಿ 52,559 ಕುಟುಂಬಗಳಿಗೆ ಸ್ವತ ಸೂರು ಮಾತ್ರವಲ್ಲದೇ, ನಿವೇಶನವೂ ಇಲ್ಲದಿರುವುದು ಬಹಿರಂಗಗೊಂಡಿದೆ.ಇದರಲ್ಲಿ 33,112 ಕುಟುಂಬಗಳಿಗೆ ವಸತಿ ಇಲ್ಲ. 19,447 ಕುಟುಂಬಗಳಿಗೆ ಸ್ವಂತ ನಿವೇಶಗಳಿಲ್ಲ. ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ತಾಲೂಕಿನಲ್ಲಿ ಅತ್ಯಧಿಕ ವಸತಿ ರಹಿತರಿದ್ದರೆ, ಇದೇ ಕನಕಪುರದಲ್ಲಿಯೇ ಅತ್ಯಧಿಕ ನಿವೇಶನ ರಹಿತರೂ ಇದ್ದಾರೆ ಎಂಬುದು ವಿರ್ಪಯಾಸ. ಮತ್ತೊಂದೆಡೆ ರಾಮನಗರ ತಾಲೂಕಿನಲ್ಲಿಯೇ ಅತೀ ಕಡಿಮೆ ನಿವೇಶನ ಹಾಗೂ ವಸತಿ ರಹಿತರಿರುವುದು ಮತ್ತೊಂದು ವಿಶೇಷವಾಗಿದೆ.2018ರ ಸರ್ವೆಯಲ್ಲಿಯೇ 52 ಸಾವಿರ ಕುಟುಂಬಗಳು ಬೀದಿಯಲ್ಲಿದ್ದರು. 2025ರ ವೇಳೆಗೆ ಈ ಸಂಖ್ಯೆ ಇನ್ನಷ್ಟು ಏರಿಕೆ ಇಲ್ಲವೇ ಇಳಿಕೆ ಕಂಡಿರಬಹುದು ಎಂದು ಅಂದಾಜಿಸಲಾಗಿದೆ. ಇಂತಹ ವಸತಿ ರಹಿತರಿಗಾಗಿಯೇ ಬಸವ ವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನ ಮಂತ್ರಿ ಅವಾಜ್ ಯೋಜನೆಗಳಿವೆ. ನಿವೇಶನ ರಹಿತರಿಗೆ, ಮುಖ್ಯಮಂತ್ರಿ ಗ್ರಾಮೀಣ ನೀವೇಶನ ಯೋಜನೆಗಳಿವೆ. ಆದರೆ, ಈ ವರೆಗೂ ಈ ಯೋಜನೆಯಡಿ ವರ್ಷಕ್ಕೆ ಕನಿಷ್ಟ 100 ನಿವೇಶನ ಇಲ್ಲವೇ ವಸತಿ ನೀಡಿರುವ ಉದಾಹರಣೆಗಳೇ ಇಲ್ಲ.

ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿಯು ನಿವೇಶನ, ವಸತಿ ನೀಡುವ ನೆಪದಲ್ಲಿಯೇ ಚುನಾವಣೆಗಳು ನಡೆದಿದ್ದವು. ಆದರೆ, ನಿವೇಶನ ಹಂಚಿಕೆ ಬೆರಳೆಣಿಕಯಷ್ಟು ಮಾತ್ರ ನಡೆದಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕವು ನಿವೇಶನ ಹಂಚಿಕೆ ಕಾರ್ಯ ನೆನೆಗುದ್ದಿಗೆ ಬಿದ್ದು ಅನೇಕ ದಶಕಗಳೇ ಕಳೆದಿವೆ. ಹೀಗಾಗಿ ಸ್ವಂತ ಸೂರು ಕಟ್ಟಿಕೊಳ್ಳಬೇಕೆಂಬ ಕನಸು ಕನಸಾಗಿಯೇ ಉಳಿದಿದೆ. ಬಸವ ಕಲ್ಯಾಣ ಯೋಜನೆಯಡಿ ಮನೆ ಕಟ್ಟಲು ಮೂರು ಹಂತದಲ್ಲಿ ಬಿಡುಗಡೆಯಾಗುತ್ತಿದ್ದ ಅನುದಾನಕ್ಕೂ ನೂರೆಂಟು ತಗಾದೆಗಳಿವೆ. ಗ್ರಾಪಂಗಳಲ್ಲಿ ಹಣ ಬಿಡುಗಡೆಯಾಗಿ ವರ್ಷಗಳೆ ಕಳೆದಿವೆ. ಈ ಎಲ್ಲ ಕಾರಣಗಳಿಂದಾಗಿ ಮನೆ, ನಿವೇಶನ ಕನಸು ಕಂಡವರು ನನಸಾಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.ಗುಡಿಸಲು ಮುಕ್ತ ಕರ್ನಾಟಕದ ಘೋಷಣೆ ಮಾಡಿರುವ ರಾಜ್ಯ ಸರ್ಕಾರ, ನಿವೇಶನ ರಹಿತ ಕುಟುಂಬಗಳಿಗೆ ಸ್ವಂತ ನಿವೇಶನ ಅಥವಾ ಮನೆ ನೀಡಲಾಗದೆ ತನ್ನ ಘೋಷಣೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಈವರೆಗೆ ಓರ್ವ ಪ್ರಧಾನಮಂತ್ರಿ, ನಾಲ್ವರು ಸಿಎಂ ಹಾಗೂ ಡಿಸಿಎಂನಂತಹ ಘಟಾನುಘಟಿ ರಾಜಕಾರಣಿಗಳನ್ನು ಕೊಡುಗೆಯಾಗಿ ನೀಡಿದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 52 ಸಾವಿರ ಕುಟುಂಬಗಳು ಸ್ವಂತ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿ ಬದುಕು ನಡೆಸುತ್ತಿದ್ದಾರೆ. ಆ ಘಟಾನುಘಟಿ ನಾಯಕರಲ್ಲಿ ಜನರಿಗೆ ಸೂರು ಕಲ್ಪಿಸುವ ಕೆಲಸ ಯಾರೊಬ್ಬರಿಂದಲೂ ಸರಿಯಾಗಿ ಆಗಿಲ್ಲ.ಸರ್ಕಾರಿ ಸವಲತ್ತು ಪಡೆಯಲು ವರ್ಷನುಗಟ್ಟಲೇ ಕಾದು ಕಾದು ಸುಸ್ತಾಗಿರುವ ಸಾರ್ವಜನಿಕರು ಸಾಲಸೋಲ ಮಾಡಿ ಖಾಸಗಿ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಿದ್ದಾರೆ. ಆದರೆ, ಇದರಲ್ಲಿ ಬಹುತೇಕ ನಿವೇಶನಗಳು ಅಕ್ರಮಗಳಿಂದಲೇ ಕೂಡಿದೆ. ಹೂಡಿಕೆ ಮಾಡಿರುವ ಹಣ ಕಳೆದುಕೊಂಡು ಕೋರ್ಟ್ ಮೆಟ್ಟಿಲು ಅಲೆಯುತ್ತಿರುವ ಅನೇಕ ಪ್ರಕರಣಗಳಿವೆ. ರಾಮನಗರದಲ್ಲಿ ನೂತನವಾಗಿ ನಿರ್ಮಿಸಿರುವ ಲೇಔಟ್‌ನಲ್ಲಿ ನೂರಾರು ಮನೆಗಳಿವೆ. ಆದರೆ, ಒಳಚರಂಡಿ ವ್ಯವಸ್ಥೆಯನ್ನೇ ನೀಡಿಲ್ಲ . ಪ್ರಾಧಿಕಾರವು ಇದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದೆ. ಇಷ್ಟೇ ಅಲ್ಲದೆ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರಗಳೇ ನಿರ್ಮಿಸಿರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗದೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ.....ಕೋಟ್ ...ನಿವೇಶನ ರಹಿತರಿಗೆ ಮೊದಲ ಆದ್ಯತೆ ಮೇರೆಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲೂಕಿನಲ್ಲಿ 200 ಎಕರೆ ಜಾಗ ಗುರುತಿಸಲಾಗುತ್ತಿದೆ. ರಾಮನಗರದ ಸುತ್ತಮುತ್ತಲು ಬಡವರಿಗೆ ನಿವೇಶನ ಕೊಡಲು 258 ಎಕರೆ ಜಮೀನನ್ನು ಗುರುತಿಸಿದ್ದೇವೆ. ಈ ಪೈಕಿ 196 ಎಕರೆ ಭೂಮಿಯನ್ನು ತಹಸೀಲ್ದಾರ್ ರವರು ಆಯಾಯ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಿದ್ದಾರೆ. ಶೀಘ್ರದಲೇ ನಿವೇಶನ ಹಂಚಿಕೆ ಮಾಡಲಾಗುವುದು.-ಇಕ್ಬಾಲ್ ಹುಸೇನ್ , ಶಾಸಕ

....ಬಾಕ್ಸ್‌..ವಸತಿ/ನಿವೇಶನ ರಹಿತ ಕುಟುಂಬಗಳ ಸಮೀಕ್ಷಾ ವರದಿ (ಒಟ್ಟು ಕುಟುಂಬಗಳು)

ತಾಲೂಕು ವಸತಿ ರಹಿತನಿವೇಶನ ರಹಿತವಸತಿ/ನಿವೇಶನ ರಹಿತ

ಚನ್ನಪಟ್ಟಣ10,68 3,91214,601

ಕನಕಪುರ11,4679,73021,197

ಮಾಗಡಿ7,9423,50811,450

ರಾಮನಗರ3,0132,2975,310

ಒಟ್ಟು33,11219,44752,55919ಕೆಆರ್ ಎಂಎನ್ 1.ಜೆಪಿಜಿ

ಶಾಸಕ ಇಕ್ಬಾಲ್ ಹುಸೇನ್

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ