ಜಿಲ್ಲೆಯಲ್ಲಿ 56,171 ಮಂದಿ ನಮೂನೆ ಸಲ್ಲಿಸಲಾಗದವರು

KannadaprabhaNewsNetwork |  
Published : Jul 28, 2026, 01:15 AM IST
27ಕೆಆರ್ ಎಂಎನ್ 1.ಜೆಪಿಜಿರಾಮನಗರ ತಹಸೀಲ್ದಾರ್ ತೇಜಸ್ವಿನಿರವರು ಎಸ್ ಐಆರ್ ಪ್ರಕ್ರಿಯೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು. | Kannada Prabha

ಸಾರಾಂಶ

ರಾಮನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರವಾಗಿ ಹಲವು ಗೊಂದಲಗಳಿಗೆ ಕಾರಣವಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ತವರು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎಸ್ಐಆರ್ ಗಣತಿ ನಮೂನೆಗಳ ವಿತರಣೆ ಕಾರ್ಯ ಶೇಕಡ 100ರಷ್ಟು ಪೂರ್ಣಗೊಂಡಿದೆ

ರಾಮನಗರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿಚಾರವಾಗಿ ಹಲವು ಗೊಂದಲಗಳಿಗೆ ಕಾರಣವಾಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ತವರು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎಸ್ಐಆರ್ ಗಣತಿ ನಮೂನೆಗಳ ವಿತರಣೆ ಕಾರ್ಯ ಶೇಕಡ 100ರಷ್ಟು ಪೂರ್ಣಗೊಂಡಿದೆ.

ಜಿಲ್ಲೆಯ ಎಲ್ಲ 1154 ಮತಗಟ್ಟೆಗಳಿಂದ ಒಟ್ಟು 9,38,586 ಮಂದಿ ಮತದಾರರಿಗೆ ಎಸ್ ಐಆರ್ ಭಾಗವಾಗಿ ಗಣತಿ ನಮೂನೆಗಳನ್ನು ತಲುಪಿಸಲಾಗಿದೆ. ನಿಧನ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಒಟ್ಟು, 56,171 ಮಂದಿಯನ್ನು ''''''''ನಮೂನೆ ಸಲ್ಲಿಸಲಾಗದವರು'''''''' ಎಂದು ಗುರುತಿಸಲಾಗಿದೆ.

ಮತಗಟ್ಟೆಗಳ ಮಟ್ಟದಲ್ಲಿ ಮತದಾರರ ಸಹಾಯ ಅಥವಾ ನೆರವು ಕೇಂದ್ರಗಳನ್ನು ತೆರೆದು, ನಮೂನೆ ಭರ್ತಿಯ ವಿಷಯದಲ್ಲಿ ಮತದಾರರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಸ್ವೀಕರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ವಿವರವನ್ನು ಭರ್ತಿ ಮಾಡಿಕೊಟ್ಟ ಮತದಾರರ ಗಣತಿ ನಮೂನೆಗಳನ್ನು, ಚುನಾವಣಾ ಆಯೋಗದ ಸೂಚನೆಯಂತೆ ಡಿಜಿಟೈಜೇಷನ್ (ಡಿಜಿಟಲೀಕರಣ) ಮಾಡುವ ಪ್ರಕ್ರಿಯೆ (ನಿಗದಿತ ತಂತ್ರಾಂಶದಲ್ಲಿ ಅಳವಡಿಸುವುದು ಅಥವಾ ಅಪ್‌ಲೋಡ್ ಮಾಡುವುದು) ಜಾರಿಯಲ್ಲಿದೆ.

104 ಬೂತ್ ಗಳಲ್ಲಿ ಶೇ.100ರಷ್ಟು ಪ್ರಗತಿ :

ಜಿಲ್ಲೆಯಲ್ಲಿ ಸೋಮವಾರ ಸಂಜೆಯವರೆಗೆ ಶೇ 84.27ರಷ್ಟು (7,90,974 ನಮೂನೆಗಳನ್ನು) ಡಿಜಿಟೈಜೇಷನ್ ಪ್ರಕ್ರಿಯೆ ನಡೆದಿದೆ.

ಒಟ್ಟು 1154 ಮತಗಟ್ಟೆಗಳ ಪೈಕಿ 104 ಮತಗಟ್ಟೆಯಲ್ಲಿ ಶೇಕಡ 100ರಷ್ಟು ಡಿಜಿಟೈಜೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇದರಲ್ಲಿ ಮಾಗಡಿ ಕ್ಷೇತ್ರ - 32, ರಾಮನಗರ ಕ್ಷೇತ್ರ - 24, ಕನಕಪುರ - 30 ಹಾಗೂ ಚನ್ನಪಟ್ಟಣ ಕ್ಷೇತ್ರ - 18 ಮತಗಟ್ಟೆಗಳಲ್ಲಿ ಡಿಜಿಟೈಜೇಷನ್ ಮುಗಿದಿದ್ದು, 651 ಮತಗಟ್ಟೆಗಳಲ್ಲಿ ಶೇ.90ರಷ್ಟು ನಡೆದಿದೆ.

ಈವರೆಗೆ ಒಟ್ಟು 56,171 ಮಂದಿಯನ್ನು ಎಎಸ್‌ಡಿಡಿಒ (ಗೈರುಹಾಜರಿ, ಸ್ಥಳಾಂತರ, ಮರಣ, ಡೂಪ್ಲಿಕೇಟ್ ಮತ್ತು ಇತರೆ) ಎಂದು ಗುರುತಿಸಲಾಗಿದೆ. ಇವರನ್ನು ಯುಎಎಫ್ (ಸಂಗ್ರಹಿಸಲಾಗದ ಗಣತಿ ನಮೂನೆಗಳು) ಎಂದು ವರ್ಗೀಕರಿಸಲಾಗಿದೆ. ಇವರಲ್ಲಿ, 1,637 ಮಂದಿ ಪತ್ತೆಯಾಗಿಲ್ಲ.

18,138 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬುದು ದೃಢಪಟ್ಟಿದೆ, 26,054 ಮಂದಿ ಮೃತಪಟ್ಟಿದ್ದಾರೆ. 10,047 ಮಂದಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

4570 ಮಂದಿಯಿಂದ ಆನ್‌ಲೈನ್‌ನಲ್ಲಿ ಸಲ್ಲಿಕೆ :

ಜಿಲ್ಲಾಡಳಿತದ ಮಾಹಿತಿಯಂತೆ ಆಯೋಗದ ವೆಬ್‌ ಸೈಟ್ ಮೂಲಕ ಈವರೆಗೆ ಒಟ್ಟು 4,570 ಮಂದಿ ಆನ್‌ಲೈನ್‌ನಲ್ಲಿ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ.

ಗಣತಿ ನಮೂನೆ ವಿತರಣೆ ಕಾರ್ಯವು ಜೂನ್ 30ರಿಂದ ಆರಂಭವಾಗಿತ್ತು. ಇದರ ಜೊತೆಯಲ್ಲೇ ಗಣತಿ ನಮೂನೆಗಳ ಭರ್ತಿ, ಸಂಗ್ರಹ ಮತ್ತು ಡಿಜಿಟಲೀಕರಣ ಕಾರ್ಯವನ್ನೂ ಆಯೋಗದಿಂದ ಆರಂಭಿಸಲಾಗಿದೆ. ಮೂಲ ವೇಳಾಪಟ್ಟಿಯಂತೆ ಈ ಎಲ್ಲ ಕಾರ್ಯವೂ ಜುಲೈ 29ಕ್ಕೆ ಕೊನೆ ಆಗಬೇಕಿತ್ತು. ಆದರೆ, ಸಮಯಾವಕಾಶ ಬೇಕಾಗಿರುವುದರಿಂದ ಆಯೋಗವು ಗಣತಿ ನಮೂನೆ ವಿತರಣೆ, ಸಂಗ್ರಹ ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದೆ. ಕರಡು ಮತದಾರರ ಪಟ್ಟಿಯು ಅ.17ಕ್ಕೆ ಪ್ರಕಟವಾಗಲಿದೆ. ಇದಕ್ಕಾಗಿ ಪೂರ್ವಭಾವಿ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗಿದೆ.

''''''''ಗಣತಿ ನಮೂನೆಗಳನ್ನು ವಿತರಿಸುವ ಕೆಲಸ ಪೂರ್ಣಗೊಳಿಸಿದ್ದೇವೆ. ಅವುಗಳನ್ನು ಪಡೆದವರು ಭರ್ತಿ ಮಾಡಿ ವಾಪಸ್ ನೀಡುತ್ತಿದ್ದಾರೆ. ಗೊಂದಲ ಇರುವವರಿಗೆ ಪರಿಹರಿಸಲು ಹಾಗೂ ಸಮಸ್ಯೆ ಎದುರಾದರೆ ಬಗೆಹರಿಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದು ನಗರದ ರಾಮನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಕೋಟ್ ..............

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ಅಯಾಯ ವಿಧಾನಸಭಾ ಕ್ಷೇತ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿ ನೀಡಲಾಗಿದೆ. ಆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪ್ರಗತಿಯನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

- ಯಶವಂತ್ ವಿ.ಗುರುಕರ್ , ಜಿಲ್ಲಾ ಚುನಾವಣಾಧಿಕಾರಿ, ಬೆಂ.ದಕ್ಷಿಣ.

ಬಾಕ್ಸ್ ...............

ಜಿಲ್ಲೆಯಲ್ಲಿ ಎಸ್ ಐಆರ್ ಪ್ರಗತಿ ವಿವರ

ವಿಧಾನಸಭಾ ಮತಗಟ್ಟೆ ಒಟ್ಟು ಮತದಾರರು ನಮೂನೆ ವಿತರಣೆ ಡಿಜಿಟಲೀಕರಣ ನಿಧನ ಶಾಶ್ವತ ಸ್ಥಳಾಂತರ ನೋಂದಣಿ ಗೈರು ಇತರೆ ಒಟ್ಟು ಯುಇಎಫ್

ಕ್ಷೇತ್ರ

ಮಾಗಡಿ301 2,42,32 2,42,3282,05,030 7,1076,100 2,17032411315,814

ರಾಮನಗರ2802,25,4642,25,4641,87,5845,9423,4132,4343414412,174

ಕನಕಪುರ2972,36,1942,36,1941,97,5737,4595,5463,368 8167217,261

ಚನ್ನಪಟ್ಟಣ2762,34,6002,34,6002,00,7875,5463,0792,0751566610,922

-----------------------------------------------------------------------------------------------------------

ಒಟ್ಟು1,1549,38,5869,38,5867,90,97426,05418,13810,0471,63729556,171

----------------------------------------------------------------------------------------------------------

27ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಹಸೀಲ್ದಾರ್ ತೇಜಸ್ವಿನಿರವರು ಎಸ್ ಐಆರ್ ಪ್ರಕ್ರಿಯೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದರು.

----------------------------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ