ಕಲಬುರಗಿಯ ಪ್ರತಿಷ್ಟಿತ ಶರಣಬಸವೇಶ್ವರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದ ಹಿನ್ನಲೆಯಲ್ಲಿ ವಿವಿಧ ಕ್ಷೇತ್ರದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಹಾಗೂ ವಿವಿಯ 156 ವಿದ್ಯಾರ್ಥಿಗಳು ರ್‍ಯಾಂಕ್, 43 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪಿಎಚ್‌ಡಿ ಪದವಿ ಪಡೆದವರಿಗೆ ಸತ್ಕರಿಸಲಾಗುವುದು.ಕನ್ನಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಪ್ರತಿಷ್ಠಿತ ಶರಣಬಸವ ವಿವಿ ತನ್ನ 5 ನೇ ವಾರ್ಷಿಕ ಘಟಿಕೋತ್ಸವ ಇದೇ ಡಿ.18 ರಂದು ಆಯೋಜಿಸಿದೆ. ಘಟಿಕೋತ್ಸವದಲ್ಲಿ ರ್‍ಯಾಂಕ್ ಪಡೆದ 156, ಚಿನ್ನದ ಪದಕ ಭಾಜನರಾದ 43 ಪ್ರತಿಭಾವಂತರು, ನಗದು ಬಹುಮಾನಕ್ಕೆ ಬಾಜನರಾದ 9 ಮಕ್ಕಳು ಸೇರಿದಂತೆ ವಿವಿಲ್ಲಿದ್ದುಕೊಂಡು ಪಿಎಚ್‌ಡಿ ಪದವಿ ಪಡೆದ 126 ಸಾಧಕರಿಗೆ ಘಟಿಕೋತ್ಸವದಲ್ಲಿ ಸನ್ಮಾನಿಸಲಾಗುತ್ತಿದೆ.ಇಂದಿಲ್ಲಿ ದಾಸೋಹ ಮಹಾ ಮನೆಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪಾ, ಉಪಕುಲಪತಿ ಡಾ. ನಿರಂಜನ್ ವಿ. ನಿಷ್ಠಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಬಸವರಾಜ ದೇಶಮುಖ ಅವರು, ಘಟಿಕೋತ್ಸವದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಚಿತ್ರಕಲಾವಿದ ಡಾ. ಎ.ಎಸ್.ಪಾಟೀಲ ಹಾಗೂ ಶಿಕ್ಷಣತಜ್ಞೆ ಡಾ. ಚಿನಮ್ಮ ಗದ್ದಗಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದಾರೆ.
5ನೇಯ ಘಟಿಕೋತ್ಸವವು ಡಿ.18ರಂದು ಕಲಬುರಗಿಯ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಹಿರಿಯ ತಂತ್ರಜ್ಞ ಹಾಗೂ ಐಬಿಎಂನ ಶಿಕ್ಷಣ ಕೇಂದ್ರದ ನಿರ್ದೇಶಕ ವಿಠಲ ಮಾಡ್ಯಾಳ್ಕರ್ 5ನೇಯ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ, ಘಟಿಕೋತ್ಸವವನ್ನು ಆಫ್‍ಲೈನ್ ಮತ್ತು ಆನ್‍ಲೈನ್ ಮೋಡ್‍ನಲ್ಲಿ ನಡೆಸಲಾಗುತ್ತಿದ್ದು, ಯುಟ್ಯೂಬ್ (www.youtube.com/live/n2aKM2ucCnY?si=vAa6f8cJ5xWNdgHh) ನಲ್ಲಿ ನೇರ ಪ್ರಸಾರವು ಲಭ್ಯವಿರುತ್ತದೆ ಎಂದು ಹೇಳಿದರು.ಡಾ. ಅಪ್ಪಾಜಿ ಹಾಗೂ ಡಾ. ಅವ್ವಾಜಿ ಮಾತನಾಡಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 156 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. 43 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ. ಶೈಕ್ಷಣಿಕ ಸಾಧನೆಗೈದ ಗಣ್ಯರ ಹೆಸರಿನಲ್ಲಿ ಒಂಬತ್ತು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದರು.
ಘಟಿಕೋತ್ಸವದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಸಾನಿಧ್ಯ ವಹಿಸಲಿದ್ದಾರೆ.ವಿವಿ ಕುಲಾಧಿಪತಿ ಡಾ. ಶರಣಬಸವಪ್ಪ ಅಪ್ಪ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ, ಗೌರವ ಡಾಕ್ಟರೇಟ್, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಬಹುಮಾನ ಹಾಗೂ ಪದವಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಿದ್ದಾರೆ. ವಿವಿಯ ಬೋರ್ಡ ಆಫ್ ಗವರ್‍ನರ್ಸ, ಬೋರ್ಡ ಆಫ್ ಮ್ಯಾನೆಜ್‍ಮೆಂಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್‍ನ ಸದಸ್ಯರು, ಎಲ್ಲಾ ಡೀನರು ಹಾಗೂ ಮುಖ್ಯಸ್ಥರು ಘಟಿಕೋತ್ಸವದಲ್ಲಿ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಶರಣಬಸವ ವಿವಿ ಸಮಕುಲಪತಿ ಪ್ರೊ. ವಿ. ಡಿ. ಮೈತ್ರಿ, ಕುಲಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಇದ್ದರು.ಬಾಕ್ಸ್..
ಗೌರವ ಡಾಕ್ಟರೇಟ್‌ಗೆ ಭಾಜನರಾದವರ ಸುತ್ತಮುತ್ತಶರಣಬಸ ವಿವಿ ಗೌರ ಡಾಕ್ಟರೇಟ್‌ಗೆ ಆಯ್ಕೆಯಾಗಿರುವ ಅರವಿಂದ ಜತ್ತಿ ಸಮಾಜ ಸುಧಾರಕ ಮಹಾತ್ಮ ಬಸವೇಶ್ವರರ ತತ್ತ್ವಜ್ಞಾನವನ್ನು ಹರಡುವಲ್ಲಿ, ಶರಣರ ವಚನಗಳನ್ನು ವಿವಿಧ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವಲ್ಲಿ ಸಾಧನೆ ಮಾಡಿದ್ದಾರೆ.
ಡಾ ಎ ಎಸ್ ಪಾಟೀಲ್ ವಿಶಿಷ್ಟ ವರ್ಣಚಿತ್ರಕಾರರಾಗಿದ್ದು, ಅವರ ನೈಜ ಕಲಾಕೃತಿಗಳು ಪ್ರಪಂಚದಾದ್ಯಂತದ ಪ್ರತಿಷ್ಠಿತ ಸಂಗ್ರಹಕಾರರ ಗೋಡೆಗಳನ್ನು ಅಲಂಕರಿಸಿವೆ. ದೇಶ ಹಾಗೂ ವಿದೇಶಗಳಲ್ಲಿನ ಪ್ರತಿಷ್ಠಿತ ವಸ್ತುಸಂಗ್ರಹಾಲಯಗಳಲ್ಲಿವೆ. ಪಾಂಡಿಚೇರಿಯಲ್ಲಿರುವ ಅರಬಿಂದೋ ಆಶ್ರಮ ಮತ್ತು ಆರೋವಿಲ್‍ಗೆ ಸಂಬಂಧಿಸಿದ ವರ್ಣಚಿತ್ರಗಳು ಅವರ ಗಮನಾರ್ಹ ಕಲಾಕೃತಿಗಳಾಗಿವೆ. ಡಾ. ಪಾಟೀಲ ಅವರು ರಚಿಸಿದ ತಾಯಿ ಮತ್ತು ಅರಬಿಂದೋ ಕಲಾಕೃತಿ ಅವರ ಖ್ಯಾತಿಯನ್ನು ಬಿಂಬಿಸುತ್ತದೆ.ಶಿಕ್ಷಣತಜ್ಞೆ, ಡಾ. ಚಿನಮ್ಮ ಗದ್ದಗಿ, ವಂಚಿತ ಸಮುದಾಯದಿಂದ ಬಂದಿರುವ ಅವರು ತಮ್ಮ ಜೀವನದುದ್ದಕ್ಕೂ ಹೋರಾಟ ಮತ್ತು ಅಡೆತಡೆಗಳನ್ನು ಎದುರಿಸಿ ಮುಂದೆ ಬಂದ ಮಹಿಳೆ. ಬೀದರ್ ಮತ್ತು ಕಲಬುರಗಿ ನಗರಗಳಲ್ಲಿ ಎರಡು ನಸಿರ್ಂಗ್ ಕಾಲೇಜುಗಳನ್ನು ಸ್ಥಾಪಿಸಿದವರು.
ಫೋಟೋ- ಶರಣ 1ಶರಣಬಸವ ವಿವಿ ಚೇರ್ ಪರ್ಸನ್ ದಾಕ್ಷಾಯಿಣಿ ಅವ್ವಾಜಿ ಸುದ್ದಿಗೋಷ್ಠಿ ನೋಟ.ಫೋಟೋ-
ಅರವಿಂದ ಜತ್ತಿಫೋಟೋ-ಎಎಸ್ ಪಾಟೀಲ್‌ಫೋಟೋ-
ಚಿನ್ನಮ್ಮ ಗದ್ದಗಿ