ಕಲಾ ವಿಭಾಗದಲ್ಲಿ ಶ್ರೀಲತಾ ರಾಜ್ಯಕ್ಕೆ 5ನೇ ರ್‍ಯಾಂಕ್‌

KannadaprabhaNewsNetwork |  
Published : Apr 11, 2024, 12:47 AM IST
ಷಷಷ | Kannada Prabha

ಸಾರಾಂಶ

ವಸತಿ ನಿಲಯದಲ್ಲಿದ್ದು ಪರಿಶ್ರಮದಿಂದ ಅಭ್ಯಾಸ ಮಾಡಿದರ ಫಲವಾಗಿ ಇಂದು ಹೂವಿನಹಿಪ್ಪರಗಿಯ ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ, ಹೂವಿನಹಿಪ್ಪರಗಿಯ ವಿದ್ಯಾರ್ಥಿನಿ ಶ್ರೀಲತಾ ಲಿಂಗರೆಡ್ಡಿ ಪಿಯುಸಿ ಕಲಾ ವಿಭಾಗದಲ್ಲಿ ೫೯೨ ಅಂಕ(ಶೇ.೯೮.೬೬) ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ವಸತಿ ನಿಲಯದಲ್ಲಿದ್ದು ಪರಿಶ್ರಮದಿಂದ ಅಭ್ಯಾಸ ಮಾಡಿದರ ಫಲವಾಗಿ ಇಂದು ಹೂವಿನಹಿಪ್ಪರಗಿಯ ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ, ಹೂವಿನಹಿಪ್ಪರಗಿಯ ವಿದ್ಯಾರ್ಥಿನಿ ಶ್ರೀಲತಾ ಲಿಂಗರೆಡ್ಡಿ ಪಿಯುಸಿ ಕಲಾ ವಿಭಾಗದಲ್ಲಿ ೫೯೨ ಅಂಕ(ಶೇ.೯೮.೬೬) ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾಳೆ.

ತಾಲೂಕಿನ ಕರಭಂಟನಾಳ ಗ್ರಾಮದ ರೈತ ನೀಲಕಂಠರಾಯ ಲಿಂಗರೆಡ್ಡಿ ಅವರ ಎರಡನೇ ಪುತ್ರಿ ಶ್ರೀಲತಾ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಶ್ರೀಲತಾ ಇತಿಹಾಸ, ಸಮಾಜಶಾಸ್ತ್ರ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ, ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯದಲ್ಲಿ ೧೦೦ ಕ್ಕೆ ೯೯ ಅಂಕ, ಆಂಗ್ಲ ವಿಷಯಕ್ಕೆ ೧೦೦ಕ್ಕೆ ೯೫ ಅಂಕಗಳನ್ನು ಪಡೆದುಕೊಂಡಿದ್ದಾಳೆ. ಪ್ರಾಥಮಿಕ ಶಾಲೆಯಿಂದಲೂ ನಿರಂತರ ಅಧ್ಯಯನ ಶೀಲತೆ ಬೆಳೆಸಿಕೊಂಡಿದ್ದ ಶ್ರೀಲತಾ ಎಸ್‌ಎಸ್‌ಎಲ್‌ಸಿಯಲ್ಲಿಯೂ ಉತ್ತಮ ಸಾಧನೆಯನ್ನು ಮಾಡಿದ್ದಾಳೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ತಂದೆ ರೈತ-ತಾಯಿ ಗೃಹಣಿಯಾಗಿದ್ದಾರೆ.

---

ಕೋಟ್‌

ನಾನು ಯಾವುದೇ ವಿಶೇಷ ತರಬೇತಿಗೆ ಹೋಗಿಲ್ಲ. ನಿತ್ಯ ೪-೫ ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ನಾನು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಳ್ಳಬೇಕೆಂದು ಆಸೆ ಹೊಂದಿದ್ದೆ. ಇದೀಗ ನಾನು ರಾಜ್ಯದಲ್ಲಿ 5ನೇ ಸ್ಥಾನ ಪಡೆದುಕೊಂಡಿರುವದು ತುಂಬಾ ಸಂತಸ ತಂದಿದೆ. ಮುಂದೆ ನಾನು ಶಿಕ್ಷಕನಾಗುವ ಗುರಿ ಇಟ್ಟುಕೊಂಡಿದ್ದೇನೆ.

-ಶ್ರೀಲತಾ ಲಿಂಗರೆಡ್ಡಿ, ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾರ್ಥಿನಿ.

--

ನನ್ನ ಮಗಳು ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಚುರುಕುತನ ಹೊಂದಿದ್ದಾಳೆ. ಮೊದಲ ಮಗಳಾದ ಮಧುವತಿ ಸಹ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಈಗ ಎರಡನೇ ಮಗಳು ಸಾಧನೆ ಮಾಡಿದ್ದು ತುಂಬಾ ಖುಷಿ ತಂದಿದೆ.

-ನೀಲಕಂಠರಾಯ ಲಿಂಗರೆಡ್ಡಿ, ಶ್ರೀಲತಾ ತಂದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ