ಕನ್ನಡಪ್ರಭ ವಾರ್ತೆ ಬೀದರ್
ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನವೀನ್ ಪಬ್ಲಿಕ್ ಸ್ಕೂಲ್ ಮತ್ತು ಸೂರ್ಯ ನಮಸ್ಕಾರ ಸಂಘವು ಆಯೋಜಿಸಿದ ‘ಯುಗಾದಿ ಆಚರಣೆ’ ಕಾರ್ಯಕ್ರಮದಲ್ಲಿ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು, ಈ ಯುಗಾದಿ ಪರ್ವದಲ್ಲಿಯೇ ಹೊಸ ಚಿಗುರಾದ ಮಾವು-ಬೇವು ಬೆಲ್ಲದ ಜೊತೆ ಸೇರಿಸಿ ಸವಿಯುವ ಮೂಲಕ ಹೊಸ ವರ್ಷಕ್ಕೆ ಸ್ವಾಗತಿಸುವ ಸಂಪ್ರದಾಯವಿದೆ ಎಂದರು.
ಹೊಸ ವರ್ಷ ನಮ್ಮ ಭಾರತೀಯ ಪಂಚಾಂಗವು ಯುಗಾದಿಯ ದಿನದಿಂದಲೇ ಬದಲಾಗುತ್ತದೆ. ಈ ನೂತನ ವರ್ಷದ ಮೊದಲ ದಿನವೇ ನಮ್ಮ ಗುರು-ಹಿರಿಯರು ಇಡಿ ವರ್ಷದ ಮಳೆ-ಬೆಳೆಯ ಸಂಪೂರ್ಣ ಭವಿಷ್ಯ ಹೇಳುತ್ತಾರೆ. ಗ್ರಾಮಗಳಲ್ಲಿನ ರೈತರು ಮುಖಂಡರು, ಗುರು-ಹಿರಿಯರ ಸಮ್ಮುಖದಲ್ಲಿ ಕುಳಿತು ಹೊಸ ವರ್ಷದ ಮಹತ್ವವನ್ನು ತಿಳಿದುಕೊಳ್ಳುತ್ತಾರೆ ಎಂದರು.ಇದರರ್ಥ ಇಷ್ಟೇ ನಮ್ಮ ಜೀವನದಲ್ಲಿ ಸಿಹಿ-ಕಹಿಗಳೆರಡು ಸಮಾನವಾಗಿ ಸ್ವೀಕರಿಸಬೇಕು. ಬದುಕಿನ ಏರಿಳಿತದಲ್ಲಿ ಸುಖ ಬಂದಾಗ ಅತಿಯಾಗಿ ಹಿಗ್ಗದೆ ದುಃಖ ಬಂದಾಗ ಅತಿಯಾಗಿ ಕುಗ್ಗದೆ ಕಷ್ಟ-ಸುಖಗಳೆರಡೂ ಸಮಾನವಾಗಿ ಸ್ವೀಕರಿಸಬೇಕೆಂಬ ಉತ್ತಮ ಸಂದೇಶ ಈ ಯುಗಾದಿ ಪರ್ವ ರವಾನಿಸುತ್ತದೆ ಎಂದು ಯುಗಾದಿ ಹಬ್ಬದ ಮಹತ್ವ ವಿವರಿಸಿದರು.
ಈ ಆಚರಣೆಯಲ್ಲಿ ಸೂರ್ಯ ನಮಸ್ಕಾರ ಸಂಘದ ಪದಾಧಿಕಾರಿಗಳಾದ ಪ್ರಭು ಚಾರಿ, ಬಳವಂತರೆಡ್ಡಿ, ರಾಜಕುಮಾರ ಬಿರಾದಾರ, ರಾಜಕುಮಾರ ಪಾಟೀಲ, ಬಸವರಾಜ ದಾನಿ, ವಿಜಯಕುಮಾರ ರಾಥೋಡ, ಬಸವರಾಜ ಕರಪೂರ, ಮನೋಹರ ರಾಥೋಡ, ಶಿವರಾಜ, ವಿನೋದ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದು, ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿದರು.