ಕಲಾ ವಿಭಾಗದಲ್ಲಿ ಕೊಟ್ಟೂರು ಇಂದು ಕಾಲೇಜಿಗೆ 31 ರ್‍ಯಾಂಕ್‌

KannadaprabhaNewsNetwork |  
Published : Apr 11, 2024, 12:46 AM IST
ಈ ಸಾಲಿನ ಪಿಯುಸಿ ದ್ವಿತೀಯ ಕಲಾ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲನೇ ಟಾಪರ್ ಆಗಿ ಹೊರ ಹೊಮ್ಮಿರುವ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕವಿತ ಬಿ.ವಿ. ಗೆ ತಂದೆ ತಾಯಿ ಮತ್ತು ತಂಗಿಯಿAದ ಸಿಹಿ ತಿನ್ನಿಸಿ ಸಂಬ್ರಮಿಸಿದರು  | Kannada Prabha

ಸಾರಾಂಶ

೨೦೧೫ರಿಂದ ಸತತ 9 ವರ್ಷ ಕಾಲೇಜಿನ ವಿದ್ಯಾರ್ಥಿಗಳು ಟಾಪರ್‌ ಆಗುತ್ತಿದ್ದಾರೆ. ಕಾಲೇಜಿನ ಇನ್ನೂ 31 ವಿದ್ಯಾರ್ಥಿಗಳು ಟಾಪ್‌ 10 ಸ್ಥಾನದೊಳಗೆ ಅಂಕ ಪಡೆದಿದ್ದಾರೆ.

ಕೊಟ್ಟೂರು: ಇಲ್ಲಿಯ ಪ್ರತಿಷ್ಠಿತ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳು ಸತತ 9ನೇ ವರ್ಷವೂ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ ಆಗುವ ಮೂಲಕ ಅಪರೂಪದ ಸಾಧನೆಗೈದಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಬಿ.ವಿ. ಕವಿತಾ (600ಕ್ಕೆ596) ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.

೨೦೧೫ರಿಂದ ಸತತ 9 ವರ್ಷ ಕಾಲೇಜಿನ ವಿದ್ಯಾರ್ಥಿಗಳು ಟಾಪರ್‌ ಆಗುತ್ತಿದ್ದಾರೆ. ಕಾಲೇಜಿನ ಇನ್ನೂ 31 ವಿದ್ಯಾರ್ಥಿಗಳು ಟಾಪ್‌ 10 ಸ್ಥಾನದೊಳಗೆ ಅಂಕ ಪಡೆದಿದ್ದಾರೆ.

ಕಾಲೇಜಿನ ವಿದ್ಯಾರ್ಥಿನಿ ಬಿ.ವಿ. ಕವಿತಾ ಪ್ರಥಮ ಸ್ಥಾನ (600ಕ್ಕೆ 596 ಅಂಕ) ಪಡೆದುಕೊಂಡಿದ್ದಾರೆ. ಶಶಿಧರ್ ಡಿ. ದ್ವಿತೀಯ (೬೦೦ಕ್ಕೆ ೫೯೪ ಅಂಕ), ಎಂ.ಪಿ. ಬೀರೇಶ ಮೂರನೇ ಸ್ಥಾನ (೬೦೦ಕ್ಕೆ ೫೯೩), ಮಾನಸ್ ಮತ್ತು ಅನುಷಾ ನಾಲ್ಕನೇ ಸ್ಥಾನ (೬೦೦ಕ್ಕೆ ೫೯೨) ಪಡೆದು ಹೊರಹೊಮ್ಮಿದ್ದಾರೆ. ಈ ಮೂಲಕ ಪಿಯುಸಿ ಫಲಿತಾಂಶದಲ್ಲಿ ಟಾಪರ್ ರ್‍ಯಾಂಕ್ ಗಳಿಕೆಯ ಪಟ್ಟಿಯಲ್ಲಿ ಖಾಯಂ ಸ್ಥಾನ ಪಡೆದುಕೊಂಡಿರುವುದನ್ನು ಪುನಃ ಸಾಬೀತುಪಡಿಸಿದೆ.

ಕಲಾವಿಭಾಗದ ಟಾಪ್ ೧೦ ಸ್ಥಾನಗಳಲ್ಲಿ ಸಾದಿಕ್, ದರ್ಶನ್ (೫೯೧) ಅಂಕ ಪಡೆದು ೫ನೇ ಟಾಪರ್ ಎನಿಸಿಕೊಂಡರೆ, ಅಮರೇಶ್ ಪಿ., ಸಂತೋಷ, ಜಿ.ಕೆ. ಭಾಗ್ಯ (೫೯೦) ಅಂಕಗಳನ್ನು ಪಡೆದು ೬ನೇ ಟಾಪರ್ ಆಗಿದ್ದಾರೆ. ಕಾಲೇಜಿನ ಅಲೂರು ಕೌಶಲ್ಯ , ಸಿದ್ದೇಶ ಕೆ.ಎಸ್. ಮೇಟಿ ರಕ್ಷಿತ ಎಚ್.ಅಂಕಿತ ೭ನೇಟಾಪರ್ ಆಗಿದ್ದರೆ, ಭರತ್ ರೆಡ್ಡಿ, ಆರ್.ಎಸ್.ಶಾಂತಿ ೮ನೇ ಟಾಪರ್ ಆಗಿದ್ದಾರೆ. ೯ನೇ ಟಾಪರ್‌ಗಳಾಗಿ ಬಿ.ಅನುಷಾ, ಸೌಂದರ್ಯ ನಾಗರಾಣಿ, ಬಾಪೂಜಿ ಟಿ.ಎಸ್. ಸುಶ್ಮಿತಾ, ಬಿ.ಅನುಷಾ, ಎಂ.ಮಮತಾ, ರಾಂಪುರದ ಗೌರಮ್ಮ, ಪಿ.ಪ್ರಿಯಾ, ಎಂ.ಪೂಜಾ ಮತ್ತು ೧೦ನೇ ಟಾಪರ್‌ಗಳಾಗಿ ತಳವಾರ ಆನಂದ, ಸೂಗಳಿ ಭವಾನಿ, ಬಣ್ಣದ ಭಾವಿ ಭೂಮಿಲ್ಲ, ಜಿ.ಬಿ. ನೇತ್ರ, ಜಿ.ಐಶ್ವರ್ಯ, ಸಿ.ಎಸ್. ಭಾರತಿ ಮತ್ತು ಆಕಾಶ್ ಎಂ.ಎಚ್. ೫೮೬ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.

ಇಂದು ಪದವಿ ಪೂರ್ವ ಮಹಾವಿದ್ಯಾಲಯ ಕಳೆದ ೮ ವರ್ಷಗಳಿಂದ ರಾಜ್ಯಕ್ಕೆ ಟಾಪರ್ ಒಂದು ಸ್ಥಾನವನ್ನು ದ್ವಿತೀಯ ಪಿಯುಸಿಯಲ್ಲಿ ಪಡೆದಿತ್ತು. ಈ ವರ್ಷವೂ ಇದೇ ತೆರನಾದ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೂ ಪ್ರಥಮ ಟಾಪರ್ ಮತ್ತು ಇತರ ೩೧ ವಿದ್ಯಾರ್ಥಿಗಳು ಟಾಪ್ ೧೦ರಲ್ಲಿ ಸ್ಥಾನವನ್ನು ಪಡೆದೆವೆಂಬ ಹೆಮ್ಮೆ ಇದೆ ಎನ್ನುತ್ತಾರೆ ಇಂದು ಪಿಯು ಕಾಲೇಜಿನ ಆಡಳಿತಾಧಿಕಾರಿ ಎಚ್.ಎನ್. ವೀರಭದ್ರಪ್ಪ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ