ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಮತದಾನ ಪೂರ್ವ ಸಿದ್ದತೆ ಕುರಿತು ವಿಡಿಯೋ ಸಂವಾದ ಸಭೆ ನಡೆಸಲಾಯಿತು. ಸಭೆಯ ಬಳಿಕ ಮಾತನಾಡಿದ ಅವರು, ಆಯಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಚುನಾವಣಾ ಕಾರ್ಯಗಳ ಬಗ್ಗೆ ತರಬೇತಿ ಮತ್ತೊಮ್ಮೆ ನೀಡಿ ಚುರುಕಾಗಿ ಕೆಲಸ ನಿರ್ವಹಿಸಲು ನಿರ್ದೇಶನ ನೀಡಲು ತಿಳಿಸಿದರು.
ಚುನಾವಣಾ ಅಕ್ರಮಗಳ ಬಗ್ಗೆ ಕೇವಲ ಚೆಕ್‌ಪೋಸ್ಟ್‌ಗಳಲ್ಲಿ ನಿಗಾವಹಿಸಬೇಕು. ಅದರ ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ನಡೆಯುವ ದೇವಸ್ಥಾನ, ಮಂಗಲ ಕಾರ್ಯಾಲಯ, ಜಾತ್ರೆ ಪಲ್ಲಕ್ಕಿ ಉತ್ಸವದಂತ ಕಾರ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಅಲ್ಲದೆ ಕೃಷಿ ಮಾರುಕಟ್ಟೆ, ಫುಡ್ ಕಾರ್ಪೊರೇಷನ್‌ಗೆ ಸಂಬಂಧಿಸಿದ ದಾಸ್ತಾನು ಸಂಗ್ರಹ ಸ್ಥಳಗಳಿಗೆ ಭೇಟಿ ನೀಡಿ ನೀತಿ ಸಂಹಿತೆಗೆ ಉಲ್ಲಂಘನೆಯಾಗದಂತೆ ಚಟುವಟಿಕೆಗಳ ನಡೆಯದಂತೆ ಎಚ್ಚರಿಕೆ ನೀಡಲು ತಿಳಿಸಿದರು. ಇನ್ನು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.ಅಬಕಾರಿ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯವರು ಸಮನ್ವತೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣೆಗೆ ನಿಯೋಜಿತ ಸಂಬಂಧಿಸಿದ ಅಧಿಕಾರಿಗಳು ಇನ್ನು ಮುಂದೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸಗಳು ಆಗಬೇಕು. ಚೆಕ್‌ಪೋಸ್ಟ್‌ಕ್ಕಿಂತ ಉಳಿದ ಕಡೆಗಳಲ್ಲಿ ಹೆಚ್ಚಿನ ನಿಗಾವಹಿಸಿ ವಹಿಸಬೇಕು. ಚುನಾವಣಾ ಅಕ್ರಮಗಳನ್ನು ನಡೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ಪ್ರಥಮ ಹಂತದ ತರಬೇತಿ ಕಾರ್ಯ ಯಶಸ್ವಿಯಾಗಿ ನಡೆಸಿದಕ್ಕೆ ಜಿಲ್ಲಾಧಿಕಾರಿಗಳು ಸಂತೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ಆಯಾ ಮತಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರರು, ವಿವಿಧ ನೋಡಲ್ ಅಧಿಕಾರಿಗಳು ಇದ್ದರು. ಕೋಟ್..
ಜಾನಕಿ ಕೆ.ಎಂ, ಜಿಲ್ಲಾ ಚುನಾವಣಾಧಿಕಾರಿ