ಜಿಲ್ಲಾ ಹಾಲು ಒಕ್ಕೂಟದಿಂದ 6.80 ಲಕ್ಷದ ಪರಿಹಾರದ ಚೆಕ್ ವಿತರಣೆ

KannadaprabhaNewsNetwork |  
Published : Jul 24, 2026, 12:30 AM IST
23 ಟಿವಿಕೆ 4 – ತುರುವೇಕೆರೆಯಲ್ಲಿ ರಾಜ್ಯ ಹಾಲು ಉತ್ಪಾದಕರ ಮಹಾಮಂಡಲಿಯ ನಿರ್ದೇಶಕ ಹಾಗೂ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯನವರು ಹೈನುಗಾರ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. | Kannada Prabha

ಸಾರಾಂಶ

ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸುಮಾರು 6.80 ಲಕ್ಷ ದ ಚೆಕ್ ಗಳನ್ನು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸುಮಾರು 6.80 ಲಕ್ಷ ದ ಚೆಕ್ ಗಳನ್ನು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಫಲಾನುಭವಿಗಳಿಗೆ ವಿತರಣೆ ಮಾಡಿದರು.

ತಾಲೂಕಿನಲ್ಲಿ ಮೃತ ಹೊಂದಿದ 4 ಹೈನುಗಾರರ ಕುಟುಂಬದ ಸದಸ್ಯರಿಗೆ ತಲಾ 50 ಸಾವಿರದಂತೆ 2 ಲಕ್ಷ ರು.ಗಳ ಚೆಕ್ ನ್ನು ಸಿ.ವಿ.ಮಹಲಿಂಗಯ್ಯನವರ ಕಚೇರಿಯಲ್ಲಿ ವಿತರಣೆ ಮಾಡಲಾಯಿತು. ಬೆಂಕಿ ಆಕಸ್ಮಿಕದಿಂದ ಸುಟ್ಟು ಹೋದ ಎರಡು ಬಣವೆಯ ಮಾಲೀಕರಿಗೆ ತಲಾ 15 ಸಾವಿರ ರು.ಗಳಂತೆ 30 ಸಾವಿರ ರು.ಗಳ ಚೆಕ್ ನ್ನು ವಿತರಿಸಲಾಯಿತು. ಓರ್ವ ಹೈನುಗಾರರ ವೈದ್ಯಕೀಯ ವೆಚ್ಚವಾಗಿ 25 ಸಾವಿರ ರು.ಗಳ ಚೆಕ್ ನೀಡಲಾಯಿತು. ಹಬುಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣಕ್ಕೆ 2.25 ಲಕ್ಷ ರು.ಗಳು ಮತ್ತು ಚಿಕ್ಕೋನಹಳ್ಳಿಯ ಸಹಕಾರ ಸಂಘದ ಮೊದಲ ಮಹಡಿಯ ಕಟ್ಟಡ ನಿರ್ಮಾಣದ 2 ಲಕ್ಷ ರು.ಗಳ ಚೆಕ್ ನ್ನು ಸಹ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ನೀಡಲಾಯಿತು. ಈ ವೇಳೆ ಹಾಲು ಒಕ್ಕೂಟದ ತಾಲೂಕು ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್ ಕುಮಾರ್, ದಿವಾಕರ್ ಮತ್ತು ಸುನಿಲ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಹಡವನಹಳ್ಳಿ ಪುಟ್ಟಣ್ಣ, ತಾಲೂಕು ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಮುಖಂಡರಾದ ಹಬುಕನಹಳ್ಳಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಕಾಂಗ್ರೆಸ್ ಯತ್ನ: ರೇಣು
ಸಿರಿಗೆರೆ ರಸ್ತೆಗೆ ₹೧೦ ಕೋಟಿ ಅನುದಾನ: ಶಾಸಕ ಡಾ.ಚಂದ್ರಪ್ಪ