ಗ್ಯಾರಂಟಿ ಯೋಜನೆಗೆ ₹60 ಸಾವಿರ ಕೋಟಿ ವಿನಿಯೋಗ: ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ

KannadaprabhaNewsNetwork |  
Published : Sep 01, 2025, 01:04 AM IST
ಪೊಟೋ ಪೈಲ್ ನೇಮ್ ೩೧ಎಸ್‌ಜಿವಿ೩ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದ ಕನಕದಾಸರ ಕಲಾಭವನದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠ್ಠಾನ ಸಮಿತಿ ವತಿಯಿಂದ ಹಮ್ಮಿಕೊಂಡ ಗ್ಯಾರಂಟಿ ಫಲಾನುಭವಿಗಳ ಸ್ಪಂದನಾ ಸಭೆಯನ್ನು ಶಾಸಕ ಯಾಸೀರ್ ಅಹ್ಮದಖಾನ್  ಪಠಾಣ ಉದ್ಘಾಟಿಸಿದರು.೩೧ಎಸ್‌ಜಿವಿ೩-೧ ತಾಲೂಕಿನ ಬಾಡ ಗ್ರಾಮದ ಕನಕದಾಸರ ಕಲಾಭವನದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠ್ಠಾನ ಸಮಿತಿ ವತಿಯಿಂದ ಹಮ್ಮಿಕೊಂಡ ಗ್ಯಾರಂಟಿ ಫಲಾನುಭವಿಗಳ ಸ್ಪಂದನಾ ಸಭೆಯಲ್ಲಿ ಪಾಲ್ಗೋಂಡ ಫಲಾನುಭವಿಗಳು.೩೧ಎಸ್‌ಜಿವಿ೩-೨ ತಾಲೂಕಿನ ಬಾಡ ಗ್ರಾಮದ ಕನಕದಾಸರ ಕಲಾಭವನದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠ್ಠಾನ ಸಮಿತಿ ವತಿಯಿಂದ ಹಮ್ಮಿಕೊಂಡ ಗ್ಯಾರಂಟಿ ಫಲಾನುಭವಿಗಳ ಸ್ಪಂದನಾ ಸಭೆಯಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ೩೧ಎಸ್‌ಜಿವಿ೩-೩ | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಆದರೂ ಬಿಜೆಪಿಯವರು ಗ್ಯಾರಂಟಿ ಯೋಜನೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ ಟೀಕಿಸಿದರು.

ಶಿಗ್ಗಾಂವಿ: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಯ ಮೂಲಕ ₹60 ಸಾವಿರ ಕೋಟಿ ಹಣವನ್ನು ಜನರಿಗೆ ತಲುಪಿಸಿದೆ ಎಂದು ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ ತಿಳಿಸಿದರು.ತಾಲೂಕಿನ ಬಾಡ ಗ್ರಾಮದ ಕನಕದಾಸರ ಕಲಾಭವನದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಶನಿವಾರ ಗ್ಯಾರಂಟಿ ಫಲಾನುಭವಿಗಳ ಸ್ಪಂದನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಆದರೂ ಬಿಜೆಪಿಯವರು ಗ್ಯಾರಂಟಿ ಯೋಜನೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದರು.ಆಶಾ ಕಾರ್ಯಕರ್ತೆಯರ ಕಾರ್ಯ ಗ್ರಾಮೀಣ ಮಟ್ಟದಲ್ಲಿ ಶ್ಲಾಘನೀಯವಾಗಿದೆ. ಹೀಗಾಗಿ ಅವರ ಸಂಬಳ ಹೆಚ್ಚಿಸಲಾಗಿದೆ. ಶಿಗ್ಗಾಂವಿ-ಸವಣೂರು ತಾಲೂಕಿನ ೪೦೦ ದೇವಸ್ಥಾನ ಅಭಿವೃದ್ಧಿ ಮಾಡಲಾಗುತ್ತಿದ್ದು, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ₹೨ ಸಾವಿರ ಹಣ ಹಾಕುತ್ತಿರುವ ಏಕೈಕ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರಾಗಿದ್ದಾರೆ ಎಂದರು.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿದರು. ತಾಪಂ ಇಒ ಮಂಜುನಾಥ ಸಾಳೊಂಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಪ್ರೇಮಾ ಪಾಟೀಲ, ವಸಂತಾ ಬಾಗೂರ, ಮಾಲತೇಶ ಸಾಲಿ, ಉಮೇಶ ತಳವಾರ, ಶಕಿನಾಬಿ ಮುಲ್ಲಾ, ಸುರೇಶ ಶೆಟ್ಟೆಣ್ಣವರ, ಶಂಕರಗೌಡ ಪಾಟೀಲ, ಪರಶುರಾಮ ಕಾಳೆ, ಡಿ.ಆರ್. ಬೊಮ್ಮನಹಳ್ಳಿ , ಚಂದ್ರಶೇಖರ ಮಾನೋಜಿ, ಅಶೋಕ ಶಿಗ್ಗಾವಿ, ಬಾಬರ್ ಭೂವಾಜಿ, ಸುರೇಶ ತಿಮ್ಮಾಪೂರ, ಅಣ್ಣಪ್ಪ ಲಮಾಣಿ, ಅಧಿಕಾರಿಗಳಾದ ಶಿವಾನಂದ ಸಣ್ಣಕ್ಕಿ, ಪ್ರಕಾಶ ಔಂದಕರ ಸೇರಿದಂತೆ ಗ್ಯಾರಂಟಿ ಸಮಿತಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸದಸ್ಯರು ಹಾಗೂ ಫಲಾನುಭವಿಗಳು ಇದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ