ಮಂಡ್ಯ ಮಂಜುನಾಥ/ ಎಚ್.ಜಿ.ರವಿಕುಮಾರ್
ಕೆನೆರಹಿತ ಹಾಲಿನಪುಡಿ ದಾಸ್ತಾನಿನಲ್ಲಿ ಕಂಡುಬಂದಿರುವ ೫೪,೯೨೫ ಮೆಟ್ರಿಕ್ ಟನ್ ಕೊರತೆ, ೬೦ ಸಾವಿರ ಕೆಜಿ ಹಾಲಿನ ಪುಡಿಯನ್ನು ಗೋದಾಮಿನಿಂದ ಹರಿಯಾಣಕ್ಕೆ ಸಾಗಿಸಿದ್ದರೂ ದಾಸ್ತಾನು ದಾಖಲೆಗಳಲ್ಲಿ ನಮೂದಿಸದಿರುವುದು, ಹಾಲಿನ ಪುಡಿಯಲ್ಲಿ ಕಂಡುಬಂದಿರುವ ಕಲಬೆರಕೆ ಹಾಗೂ ಎಫ್‌ಎಸ್‌ಎಸ್‌ಎಐ ಪರೀಕ್ಷಾ ವರದಿಯಲ್ಲಿ ವ್ಯಕ್ತವಾಗಿರುವ ಗುಣಮಟ್ಟದ ಬಗೆಗಿನ ಗಂಭೀರ ಅಕ್ರಮಗಳು ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸುವಂತೆ ಮಾಡಿವೆ.
ಇದು ಕೇವಲ ಇಬ್ಬರು ಅಧಿಕಾರಿಗಳ ವಿರುದ್ಧದ ಪ್ರಕರಣಕ್ಕೆ ಸೀಮಿತವಾಗಿರದೆ ದಾಸ್ತಾನು ನಿರ್ವಹಣೆ, ಸಾಗಣೆ, ದಾಖಲೆ ನಿರ್ವಹಣೆ ಹಾಗೂ ಸಂಬಂಧಿತ ಅಧಿಕಾರಿಗಳು ಮತ್ತು ಇತರೆ ವ್ಯಕ್ತಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಬೇಕಿರುವ ಗಂಭೀರ ಪ್ರಕರಣವಾಗಿದೆ. ಈ ಪ್ರಕರಣವನ್ನು ಸ್ಥಳೀಯ ಪೊಲೀಸ್ ಠಾಣೆಯ ತನಿಖೆಗೆ ಮಾತ್ರ ಸೀಮಿತಗೊಳಿಸದೆ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.೯೦ ಮೆಟ್ರಿಕ್ ಟನ್ ಸಂಘ- ಸಂಸ್ಥೆಗಳಿಗೆ ರವಾನೆ:
ಹರಿಯಾಣಕ್ಕೆ ಹಾಲಿನಪುಡಿ ರವಾನೆ:
ಸ್ಟಾಕ್ ಪುಸ್ತಕದಲ್ಲಿ ದಾಖಲಿಸಿಲ್ಲ:
ಜವಾಬ್ದಾರಿಯತ ವ್ಯಕ್ತಿಗಳ ನಿರ್ಲಕ್ಷ್ಯ:
೩೧.೩.೩೦೨೬ರ ಅಂತ್ಯಕ್ಕೆ ಹಾಲಿನ ಪುಡಿಯು ಕಡಿಮೆ ಕಂಡುಬಂದಿರುವುದಕ್ಕೆ ತನಿಖೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಸೇರಿ ಎಲ್ಲಾ ಅಧಿಕಾರಿಗಳು ಹಾಗೂ ಜವಾಬ್ದಾರಿಯುತ ವ್ಯಕ್ತಿಗಳ ಕರ್ತವ್ಯ, ಮೇಲ್ವಿಚಾರಣೆ, ನಿರ್ಲಕ್ಷ್ಯ ಹಾಗೂ ಈ ಘಟನೆಗಳ ಕುರಿತು ಅವರಿಗೆ ಪೂರ್ವಮಾಹಿತಿ ಇತ್ತೆ ಎಂಬುದನ್ನು ಸಭಾ ನಡವಳಿ ಕಡತಗಳು, ವರದಿಗಳು ಹಾಗೂ ಇತರೆ ದಾಖಲೆಗಳ ಆಧಾರದ ಮೇಲೆ ಸ್ವತಂತ್ರವಾಗಿ ಪರಿಶೀಲಿಸಿ ಯಾರ ಪಾತ್ರ ಅಥವಾ ಕರ್ತವ್ಯಲೋಪ ಕಂಡುಬಂದರೂ ಎಸ್‌ಐಟಿ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ ಮುಖ್ಯ ಕಾರ್ಯದರ್ಶಿಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ.
೧೨೯ ಬ್ಯಾಗ್‌ಗಳಲ್ಲಿನ ಹಾಲಿನಪುಡಿ ಕಲಬೆರಕೆ
-----------
೫೫,೩೧೧ ಮೆಟ್ರಿಕ್ ಟನ್ ಹಾಲಿನಪುಡಿ ಕಲಬೆರಕೆಜೂ.೧೫ರಂದು ೫೦ ಬ್ಯಾಗ್‌ಗಳನ್ನು ಪರೀಕ್ಷಿಸಿದಾಗ ೩ ಬ್ಯಾಗ್‌ಗಳ ಹಾಲಿನಪುಡಿ ಬಳಸಲು ಯೋಗ್ಯವಿಲ್ಲವೆಂದು ವರದಿ ನೀಡಲಾಗಿದೆ. ೧೨ ಚೀಲಗಳನ್ನು ಡಬಲ್ ಸ್ಟಿಚ್ ಮಾಡಿದ್ದ ಅನುಮಾನಾಸ್ಪದವಾಗಿದ್ದವು. ಒಟ್ಟು ೧೪೪ ಬ್ಯಾಗ್‌ಗಳನ್ನು ಡಬಲ್‌ಸ್ಟಿಚ್ ಮಾಡಿದ್ದರಿಂದ ಅಷ್ಟೂ ಬ್ಯಾಗ್‌ಗಳಲ್ಲಿರುವ ಹಾಲಿನಪುಡಿ ಕಲಬೆರಕೆಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಎಲ್‌ಎಂಪಿ ವಿಭಾಗದಲ್ಲಿ ಪ್ರತ್ಯೇಕವಾಗಿಡಲಾಗಿತ್ತು. ಪ್ರತ್ಯೇಕವಾಗಿರಿಸಲಾಗಿದ್ದ ಹಾಲಿನಪುಡಿ ಬ್ಯಾಗ್‌ಗಳು ೧.೪.೨೦೨೫ ರಿಂದ ೨೮.೨.೨೦೨೬ರೊಳಗೆ ಉತ್ಪಾದನೆಗೊಂಡು ಮೆ.ಮಾಸ್ಟರ್ ಇನ್ಸುಲೇಷನ್ ಗೋದಾಮಿನಲ್ಲಿ ದಾಸ್ತಾನಿಡಲಾಗಿದೆ. ಗೋದಾಮಿನಲ್ಲಿರಿಸಿದ್ದ ೫೫,೪೭೫ ಮೆಟ್ರಿಕ್ ಟನ್ ಕೆನೆರಹಿತ ಹಾಲಿನ ಪುಡಿಯಲ್ಲಿ ೧೬೪ ಬ್ಯಾಗ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿನ ಪುಡಿಯು ಕಲಬೆರಕೆಯಾಗಿರುವುದಾಗಿ ೨೧.೭.೨೦೨೬ರಂದು ಎಫ್‌ಎಸ್‌ಎಸ್‌ಎಐನ ಅಂಕಿತಾಧಿಕಾರಿ ಒಕ್ಕೂಟಕ್ಕೆ ವರದಿ ಮಾಡಿದ್ದಾರೆ.
-------ಕಲಬೆರಕೆ ಹಾಲಿನ ಪುಡಿ: ಮನ್‌ಮುಲ್ ಮಾಜಿ ಅಧ್ಯಕ್ಷರ ವಿಚಾರಣೆ
ಸೋಮವಾರ ತಡರಾತ್ರಿ ಮದ್ದೂರು ಠಾಣೆಗೆ ಯು.ಸಿ.ಶಿವಕುಮಾರ್ ಹಾಜರು । ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಗೊಳಿಸಿದ್ದ ಪೊಲೀಸರುಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ನಡೆದಿರುವ ಕಲಬೆರಕೆ ಹಾಲಿನ ಪುಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಠಾಣೆ ಪೊಲೀಸರು ಮನ್‌ಮುಲ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಯು.ಸಿ.ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಹಾಲಿನಪುಡಿ ಕಲಬೆರಕೆಯಾದ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದ ಯು.ಸಿ.ಶಿವಕುಮಾರ್ ಅವರನ್ನು ವಿಚಾರಣಾ ವ್ಯಾಪ್ತಿಗೆ ಕರೆದಿರುವುದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.
ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲಿ ವಿಚಾರಣೆಗೆ ಶಿವಕುಮಾರ್ ಹಾಜರಾಗುವಂತೆ ಪೊಲೀಸರು ನೋಟೀಸ್ ಜಾರಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗಲು ವಿಳಂಬ ಧೋರಣೆ ಅನುಸರಿಸಿದಾಗ ಯು.ಸಿ.ಶಿವಕುಮಾರ್ ಸಹೋದರ ಯು.ಸಿ.ಶೇಖರ್ ಅವರನ್ನು ಮದ್ದೂರು ಪೊಲೀಸರು ಸೋಮವಾರ ಸಂಜೆ ವಿಚಾರಣೆಗೆ ಕರೆತಂದಿದ್ದರು. ಆನಂತರದಲ್ಲಿ ತಡರಾತ್ರಿ ವೇಳೆಗೆ ಯು.ಸಿ.ಶಿವಕುಮಾರ್ ಮದ್ದೂರು ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.ಕಲಬೆರಕೆ ಹಾಲಿನಪುಡಿ ಪ್ರಕರಣದಲ್ಲಿ ಯು.ಸಿ.ಶಿವಕುಮಾರ್ ಪಾತ್ರವಿರುವುದು ಕಂಡುಬಂದ ಅಂಶಗಳನ್ನು ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ವಿಚಾರಣಾ ಹಂತದಲ್ಲಿರುವುದರಿಂದ ಪೊಲೀಸರು ಕೂಡ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ.
-------ವಿಚಾರಣೆಗೆ ಹಾಜರು
ಕಲಬೆರಕೆ ಹಾಲಿನಪುಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯು.ಸಿ.ಶಿವಕುಮಾರ್‌ಗೆ ಪೊಲೀಸರು ನೋಟೀಸ್ ಜಾರಿಗೊಳಿಸಿದ್ದರು. ಅದರಂತೆ ಸೋಮವಾರ ತಡರಾತ್ರಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ನಡೆಯುತ್ತಿದೆ. ಈ ಹಂತದಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ.- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ