ಕನ್ನಡಪ್ರಭ ವಾರ್ತೆ, ಭದ್ರಾವತಿ
ಅವರು ಬುಧವಾರ ನಡೆದ ಆಯ-ವ್ಯಯ (ಬಜೆಟ್) ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮೊದಲು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾಹಿತಿ ನೀಡಿದರು.
ನಿರೀಕ್ಷಿತ ಆದಾಯದ ವಿವರಗಳು:ಆಸ್ತಿ ತೆರಿಗೆ ₹725 ಲಕ್ಷ, ನೀರಿನ ಶುಲ್ಕ ₹350 ಲಕ್ಷ, ಬಾಡಿಗೆಗಳು ₹22.27 ಲಕ್ಷ, ಉದ್ದಿಮೆ ಪರವಾನಿಗೆ ₹38.10 ಲಕ್ಷ, ಅಭಿವೃದ್ಧಿ ಶುಲ್ಕ ₹75 ಲಕ್ಷ, ವಾಹನ ಬಾಡಿಗೆ ₹15 ಲಕ್ಷ ಮತ್ತು ಇತರೇ (ಬ್ಯಾಂಕ್ ಬಡ್ಡಿ, ಸುಂಕ, ಸ್ಟಾಂಪ್ ಡ್ಯೂಟಿ ವಸೂಲಾತಿ ಆದಾಯಗಳು) ₹120.10 ಲಕ್ಷ ಸೇರಿದಂತೆ ಒಟ್ಟು ಸ್ವಂತ ಆದಾಯ 1345.47 ಲಕ್ಷ ಮತ್ತು ರಾಜ್ಯ ಸರ್ಕಾರದ ಅನುದಾನಗಳಾದ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ, ಎಸ್.ಎಫ್.ಸಿ. ವೇತನ ಅನುದಾನ, ಎಸ್.ಎಫ್.ಸಿ. ವಿದ್ಯುತ್ ಅನುದಾನ, ಎಸ್.ಎಫ್.ಸಿ ಕುಡಿಯುವ ನೀರು ಅನುದಾನ, ಎಸ್.ಎಫ್.ಸಿ ವಿಶೇಷ ಅನುದಾನ ಹಾಗು ಕೇಂದ್ರ ಸರ್ಕಾರದ ಅನುದಾನಗಳಾದ 15ನೇ ಹಣಕಾಸು ಯೋಜನೆ ಅನುದಾನ, ಅಮೃತ್ ನಗರ ಯೋಜನೆ 2.0 ಅನುದಾನ, ನಲ್ಮ್ ಯೋಜನೆ ಅನುದಾನ, ಎಸ್.ಬಿ.ಎಂ. 2.0 ಯೋಜನೆ ಮತ್ತು 15ನೇ ಹಣಕಾಸು ಅನುದಾನ (MPC Grant) ಸೇರಿದಂತೆ ಒಟ್ಟು ಸರ್ಕಾರದ ಅನುದಾನಗಳು ₹4554 ಲಕ್ಷ. ಒಟ್ಟಾರೆ ಈ ಬಾರಿ ₹6199.47 ಲಕ್ಷ ಆದಾಯ ನಿರೀಕ್ಷಿಸಲಾಗಿದೆ ಎಂದರು.
ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ 416 ಲಕ್ಷ, ಚರಂಡಿಗಳ ಅಭಿವೃದ್ಧಿ ಮತ್ತು ನಿರ್ವಹಣೆ 334 ಲಕ್ಷ, ಒಳಚರಂಡಿ ಕಾಮಗಾರಿ ₹558.92 ಲಕ್ಷ, ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿ ವೇತನ ಪಾವತಿ ₹215 ಲಕ್ಷ, ನೈರ್ಮಲೀಕರಣ ಹೊರಗುತ್ತಿಗೆ/ ನೇರ ಪಾವತಿ ಸಿಬ್ಬಂದಿ ವೇತನ ಪಾವತಿ ₹562.18 ಲಕ್ಷ, ಬೀದಿದೀಪಗಳ ನಿರ್ವಹಣೆ ₹120 ಲಕ್ಷ, ನೀರು ಸರಬರಾಜು ನಿರ್ವಹಣೆ & ಅಭಿವೃದ್ಧಿ ₹374 ಲಕ್ಷ, ಪ.ಜಾತಿ/ ಪ.ಪಂಗಡ/ ಇತರೆ ಶೇ.24.10, 7.25 ಶೇ.5, ಸಮುದಾಯದ ಅಭಿವೃದ್ಧಿಗಾಗಿ ₹108 ಲಕ್ಷ, ನಲ್ಮ್ ಯೋಜನೆ ವೆಚ್ಚಗಳು ₹5 ಲಕ್ಷ, ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳು ₹50 ಲಕ್ಷ, ವಿದ್ಯುತ್ ಬಿಲ್ ಪಾವತಿ ₹1287 ಲಕ್ಷ, ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಅಭಿವೃದ್ಧಿ ಕಾಮಗಾರಿ ₹250 ಲಕ್ಷ, ಉದ್ಯಾನವನ ಮತ್ತು ಕೆರೆ ಅಭಿವೃದ್ಧಿ ಅಮೃತ್ ಯೋಜನೆ ಅಡಿಯಲ್ಲಿ ₹473.47 ಲಕ್ಷ, ಕಾಯಂ ನೌಕರರ ವೇತನ ₹1086 ಲಕ್ಷ, ವಾಹನಗಳ ದುರಸ್ತಿ ಮತ್ತು ನಿರ್ವಹಣೆ ಹಾಗೂ ಇಂಧನ ಬಿಲ್ಲು ₹177 ಲಕ್ಷ, ದಸರಾ ಆಚರಣೆ ಮತ್ತು ರಾಷ್ಟ್ರೀಯ ಹಬ್ಬಗಳು ₹40 ಲಕ್ಷ ಹಾಗೂ ಕಚೇರಿಯ ಇನ್ನಿತರೆ ವೆಚ್ಚಗಳು ₹142.90 ಲಕ್ಷ ಸೇರಿದಂತೆ ಸೇರಿದಂತೆ ಒಟ್ಟು 6199.47 ಲಕ್ಷ ವೆಚ್ಚ ನಿರೀಕ್ಷಿಸಲಾಗಿದೆ ಎಂದರು.
ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಉಪಸ್ಥಿತರಿದ್ದರು. ಹಳೇ ನಗರ ಮನೆ ಮಾಲೀಕರ ಸಂಘ ಅಧ್ಯಕ್ಷರು, ಪದಾಧಿಕಾರಿಗಳು, ಎಪಿಎಂಸಿ ಹಮಾಲಿಗರ ಸಂಘದ ಅಧ್ಯಕ್ಷ ಬಿ.ಎಸ್. ನಾರಾಯಣಪ್ಪ, ಅಂತೋಣಿ ವಿಲ್ಸನ್, ಇನ್ನಿತರರು ಸಲಹೆ- ಸೂಚನೆಗಳನ್ನು ನೀಡಿದರು.- - - -ಡಿ24ಬಿಡಿವಿಟಿ1:
ಭದ್ರಾವತಿ ನಗರಸಭೆಯಲ್ಲಿ ನೂತನ ಅಧ್ಯಕ್ಷೆ ಲತಾ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಬಜೆಟ್ ಪೂವಸಿದ್ಧತಾ ಸಭೆ ನಡೆಯಿತು. ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ್, ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಇತರರಿದ್ದರು.