ಕಡೂರುಜೆಜೆಇ. ಐಐಟಿ, ಐಎಎಸ್, ಕ್ಲಾಟ್ ಬಗ್ಗೆ ಮಾತನಾಡದೆ ಮಕ್ಕಳಿಗೆ ಒತ್ತಡ ಹಾಕಿ ನೀಟ್ ಬಗ್ಗೆ ಮಾತ್ರ ಮಾತನಾಡುವ ಕಾರಣ ಮಕ್ಕಳ ಆತ್ಮಹತ್ಯೆಯಂತಹ ದುರಂತಗಳಿಗೆ ನಾವು ಕಾರಣರಾಗುತ್ತಿದ್ದು ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಮೂಡಿಸುವ ಕೆಲಸ ಆಗಬೇಕು ಎಂದು ಶಿಕ್ಷಣ ತಜ್ಞ ಎನ್.ಪಿ.ಮಂಜುನಾಥ ಪ್ರಸನ್ನ ಹೇಳಿದರು.
ಶಿಕ್ಷಣ ತಜ್ಞ ಎನ್.ಪಿ.ಮಂಜುನಾಥ ಪ್ರಸನ್ನ
ಕನ್ನಡಪ್ರಭ ವಾರ್ತೆ ಕಡೂರುಜೆಜೆಇ. ಐಐಟಿ, ಐಎಎಸ್, ಕ್ಲಾಟ್ ಬಗ್ಗೆ ಮಾತನಾಡದೆ ಮಕ್ಕಳಿಗೆ ಒತ್ತಡ ಹಾಕಿ ನೀಟ್ ಬಗ್ಗೆ ಮಾತ್ರ ಮಾತನಾಡುವ ಕಾರಣ ಮಕ್ಕಳ ಆತ್ಮಹತ್ಯೆಯಂತಹ ದುರಂತಗಳಿಗೆ ನಾವು ಕಾರಣರಾಗುತ್ತಿದ್ದು ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಮೂಡಿಸುವ ಕೆಲಸ ಆಗಬೇಕು ಎಂದು ಶಿಕ್ಷಣ ತಜ್ಞ ಎನ್.ಪಿ.ಮಂಜುನಾಥ ಪ್ರಸನ್ನ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೀಟ್ ಪರೀಕ್ಷೆ ಕುರಿತಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುವಲ್ಲಿ ಸರ್ಕಾರ, ಪೋಷಕರು ಮತ್ತು ಮಕ್ಕಳ ಪಾಲು ಇದೆ. ಇಂದು ಪೋಷಕರು ತಮ್ಮ ಪ್ರತಿಷ್ಟೆಗಾಗಿ ಮಕ್ಕಳನ್ನು ಮೆಡಿಕಲ್ ಗೇ ಕಳಿಸಬೇಕೆಂಬ ಆಲೋಚನೆ ಇರುವುದು ಸಹಜ. ಆದರೆ ಅವರ ಆಸಕ್ತಿ ಕೇಳದೆ ಕಳುಹಿಸಿದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.ಕೆಲ ವರ್ಷಗಳ ಅಂಕಿ ಅಂಶಗಳ ಪ್ರಕಾರ ನೀಟ್ ಕೋಚಿಂಗ್ ಕ್ಯಾಪಿಟಲ್ ಎಂದು ಕರೆಯುವ ಕೋಟಾದಲ್ಲಿ 2023 ರಲ್ಲಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು. 2024ರಲ್ಲಿ 17 ಮಕ್ಕಳು, 2025 ರಲ್ಲಿ 16 ಮಕ್ಕಳು ಆತ್ಮಹತ್ಯೆ ಹಾದಿ ತುಳಿಯಲು ಮುಖ್ಯ ಕಾರಣ ಹೆಚ್ಚಾಗಿ ವೈದ್ಕಕೀಯ ಕ್ಷೇತ್ರದತ್ತ ಮಕ್ಕಳನ್ನು ಆಕರ್ಷಣೆ. ಒಂದು ಕ್ಷೇತ್ರಕ್ಕೆ ಅತ್ಯಂತ ಬೇಡಿಕೆ ಇದ್ದಾಗ ಅನಗತ್ಯ ಗೊಂದಲ ಸೃಷ್ಟಿ ಜೊತೆಗೆ ಆತ್ಮಹತ್ಯೆಯಂತಹ ಘಟನೆ ನೋಡುತ್ತಿದ್ದೇವೆ ಎಂದರು.
ಮಕ್ಕಳ ಜೀವ ಅತಿ ಮುಖ್ಯ. ವೈದ್ಯಕೀಯ ಕ್ಷೇತ್ರ ಒಂದೇ ಅಲ್ಲ. ಕಾನೂನು, ತಂತ್ರ ಜ್ಞಾನ, ಉದ್ಯಮ, ಆಡಳಿತಾತ್ಮಕ ಪರೀಕ್ಷಾ ಕ್ಷೇತ್ರಗಳಿದ್ದರೂ ಕೂಡ ಪೋಷಕರು ವೈದ್ಯಕೀಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದಾರೆ.ನಮ್ಮ ದೇಶದಲ್ಲಿ 1.39 ಲಕ್ಷ ಮೆಡಿಕಲ್ ಸೀಟುಗಳಿಗೆ 23 ಲಕ್ಷ ಮಕ್ಕಳು ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 60 ಸಾವಿರ ಸೀಟುಗಳು ಇವೆ. ಉಳಿದವು ಮೇನೇಜ್ ಮೆಂಟ್ ಕೋಟಾದಲ್ಲಿ ಹಂಚಿಕೆ ಆಗಲಿವೆ. ಇಂತಹ ಸೀಟು ಪಡೆದ ಮಕ್ಕಳಿಂದ ವ್ಯಾಪಾರವಾಗುತ್ತದೇ ವಿನಃ ಅವರಿಂದ ಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ. ಔಷಧ ಸೇವೆಯಿಂದ ಕೌಶಲ್ಯ ವ್ಯವಹಾರಕ್ಕೆ ಸಹಜವಾಗಿ ಬದಲಾಗುವ ಮೂಲಕ ಯುವ ಪ್ರತಿಭೆ ಅಂತರ ಕಾಯ್ದುಕೊಳ್ಳು ವಂತಾಗುವ ಜೊತೆ ಇತರೆ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲದ ಕೊರತೆಯಿಂದ ದೇಶದ ಆರ್ಥಿಕತೆಯಲ್ಲಿ ಅಸಮತೋಲನ ಉಂಟಾಗುತ್ತದೆ ಎಂದರು.
ಇದಕ್ಕೆ ಫಿನ್ ಲ್ಯಾಂಡ್ ಮಾದರಿಯಂತೆ ಅಲ್ಲಿ ವೈದ್ಯಕೀಯ ಸೇರಿ ಇತರೆ ಕ್ಷೇತ್ರವನ್ನು ಸಮಾನವಾಗಿ ಕಾಣುವ ಕಾರಣ ಗೌರವ ಮತ್ತು ಸೇವೆ ಸಿಗುತ್ತಿದೆ. ಹಾಗಾಗಿ ಯಾವುದೇ ಒಂದು ಕ್ಷೇತ್ರಕ್ಕೆ ಪ್ರಾಮುಖ್ಯತೆ ಸಿಗಬೇಕಿದೆ. ಈ ನಿಟ್ಟಲ್ಲಿ ನಮ್ಮ ದೇಶದಲ್ಲೂ ಎಲ್ಲ ಕ್ಷೇತ್ರಗಳನ್ನು ಸಮಾನ ಗೌರವದಿಂದ ಕಾಪಾಡಿದಲ್ಲಿ ಯುವ ಸಮೂಹದ ಸಂಪತ್ತಿನ ಸದ್ಭಳಕೆ ಆದರೆ ದೇಶದ ಮಾನವ ಸಂಪನ್ಮೂಲ ಬಳಕೆ ಆಗಲು ಸಾಧ್ಯವಿದೆ ಎಂದರು.24ಕೆಕೆಡಿಯು1. ಎನ್ ಪಿ ಮಂಜುನಾಥ ಪ್ರಸನ್ನ.