ಕನ್ನಡಪ್ರಭ ವಾರ್ತೆ ಮೈಸೂರುಸಾಂಸ್ಕೃತಿಕ ನಗರಿ ಮೈಸೂರು ಈಗ ಬೆಂಗಳೂರಿನ ನಂತರ ಕರ್ನಾಟಕದ ಅತ್ಯಂತ ಪ್ರಮುಖ ಟಿಯರ್- 2 ತಂತ್ರಜ್ಞಾನ ಮತ್ತು ಪ್ರತಿಭಾ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ ಎಂದು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಹೇಳಿದರು.
ಮೈಸೂರಿನ ಇನ್ ಫೋಸಿಸ್ ಕ್ಯಾಂಪಸ್ ನಲ್ಲಿ ಗುರುವಾರ ನಡೆದ ಮೈಸೂರು: ಬಿಯಾಂಡ್ ಹೆರಿಟೇಜ್ – ಸ್ಕಿಲ್ಸ್ ಮತ್ತು ಟ್ಯಾಲೆಂಟ್ ಲ್ಯಾಂಡ್ ಸ್ಕೇಪ್ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತು ''''''''''''''''ಎಕ್ಸ್ಫೀನೋ'''''''''''''''' ಜಂಟಿಯಾಗಿ ಬಿಡುಗಡೆ ಮಾಡಿರುವ ಮೈಸೂರು: ಬಿಯಾಂಡ್ ಹೆರಿಟೇಜ್ – ಸ್ಕಿಲ್ಸ್ ಮತ್ತು ಟ್ಯಾಲೆಂಟ್ ಲ್ಯಾಂಡ್ ಸ್ಕೇಪ್ ವರದಿಯಲ್ಲಿ ಈ ಕುರಿತು ಪ್ರಮುಖ ಅಂಕಿ-ಅಂಶ ನೀಡಲಾಗಿದೆ.ಬೃಹತ್ ಪ್ರತಿಭಾ ಸಂಪನ್ಮೂಲವಾಗಿದ್ದು, ನಗರದಲ್ಲಿ 1 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ 90,000ಕ್ಕೂ ಅಧಿಕ ವೈಟ್-ಕಾಲರ್ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ.ವೈಟ್-ಕಾಲರ್ ಉದ್ಯೋಗಿಗಳಲ್ಲಿ ಶೇ. 37ರಷ್ಟು ಮಹಿಳೆಯರಿದ್ದು, ಲಿಂಗ ಸಮಾನತೆಗೆ ಉತ್ತಮ ಉದಾಹರಣೆಯಾಗಿದೆ. ಐಟಿ/ ಐಟಿಇಎಸ್ ಕ್ಷೇತ್ರದಲ್ಲಿ 20,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರೋಗ್ರಾಮಿಂಗ್ ವಿಭಾಗದಲ್ಲೇ 25,000ಕ್ಕೂ ಹೆಚ್ಚು ವೃತ್ತಿಪರರಿದ್ದಾರೆ.ಡೇಟಾಬೇಸ್, ಫೈನಾನ್ಸ್ ಹಾಗೂ ಕ್ಯೂಎ/ಕ್ಯೂಸಿ ಕ್ಷೇತ್ರಗಳಲ್ಲಿ ವಾರ್ಷಿಕ ಶೇ. 11 ರಿಂದ 19ರಷ್ಟು ಬೆಳವಣಿಗೆ ದಾಖಲಾಗಿದೆ. ದೇಶಾದ್ಯಂತ ಸುಮಾರು 44,000ಕ್ಕೂ ಹೆಚ್ಚು ವೃತ್ತಿಪರರು ಮೈಸೂರಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ.ಗೃಹ, ಐಟಿ, ಬಿಟಿ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮೈಸೂರು ಕರ್ನಾಟಕದ ತಂತ್ರಜ್ಞಾನ ಬೆಳವಣಿಗೆಯ ಮುಂದಿನ ಪ್ರಮುಖ ಕೇಂದ್ರವಾಗಿದೆ. ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸುವ ನವೋದ್ಯಮ ಕೇಂದ್ರವಾಗಿ ಮೈಸೂರನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ ಎಂದರು.ಕೌಶಲ್ಯಯುತ ವೃತ್ತಿಪರರು ಮತ್ತು ಬಲಿಷ್ಠ ಶೈಕ್ಷಣಿಕ ಪರಂಪರೆಯಿಂದ ಮೈಸೂರು ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಇಂದು ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ಸಾಮರ್ಥ್ಯವು ಮುಂದಿನ ಹಲವು ದಶಕಗಳ ಕರ್ನಾಟಕದ ಬೆಳವಣಿಗೆಗೆ ಭದ್ರ ಅಡಿಪಾಯವಾಗಲಿದೆ ಎಂದು ಹೇಳಿದರು.ಎಕ್ಸ್ಫಿನೋದ ಸಹ ಸಂಸ್ಥಾಪಕ ಕಮಲ್ ಕಾರಂತ್ ಮಾತನಾಡಿ, ಬೆಂಗಳೂರಿನ ನಂತರ ಕರ್ನಾಟಕದ ಅತ್ಯಂತ ಬಲಿಷ್ಠವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿ ಮೈಸೂರು ಗುರುತಿಸಿಕೊಂಡಿದೆ. ಅನುಭವಿ ವೃತ್ತಿಪರರು, ಉತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳ ಹೆಚ್ಚುತ್ತಿರುವ ಆಸಕ್ತಿಯಿಂದ ನಗರದ ಬೆಳವಣಿಗೆಗೆ ಭದ್ರ ಅಡಿಪಾಯ ನಿರ್ಮಾಣವಾಗಿದೆ. ಪ್ರತಿಭೆಗಳ ಹೊರಹರಿವು ಇನ್ನೂ ಇದ್ದರೂ, ಅದರ ಅಂತರ ಕ್ರಮೇಣ ಕಡಿಮೆಯಾಗುತ್ತಿದೆ. ''''''''''''''''ಬಿಯಾಂಡ್ ಬೆಂಗಳೂರು'''''''''''''''' ಯೋಜನೆ ಮತ್ತು ದೇಶೀಯ ಹಾಗೂ ಜಾಗತಿಕ ಕಂಪನಿಗಳ ಹೂಡಿಕೆಯಿಂದ ಮುಂದಿನ ವರ್ಷಗಳಲ್ಲಿ ಮೈಸೂರು ಇನ್ನಷ್ಟು ಪ್ರತಿಭೆಗಳನ್ನು ಆಕರ್ಷಿಸುವ ನಗರವಾಗಲಿದೆ ಎಂದು ಹೇಳಿದರು.ಸರ್ಕಾರದ ''''''''''''''''ಬಿಯಾಂಡ್ ಬೆಂಗಳೂರು'''''''''''''''' ಯೋಜನೆ, ನಗರದಲ್ಲಿರುವ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳು (ವಿಟಿ ಯು, ಮೈಸೂರು ವಿವಿ, ಜೆಎಸ್ಎಸ್, ಎನ್ಐಇ, ವಿವಿಇಸಿ) ಹಾಗೂ ಉತ್ತಮ ಜೀವನಶೈಲಿಯ ವಾತಾವರಣದಿಂದಾಗಿ ಮೈಸೂರು ಜಾಗತಿಕ ಕಂಪನಿಗಳ ನೆಚ್ಚಿನ ಹೂಡಿಕೆ ತಾಣವಾಗುತ್ತಿದೆ ಎಂದರು.ರಾಜ್ಯದ ನಂ.2 ತಂತ್ರಜ್ಞಾನ ಹಬ್ ಆಗಿ ಮೈಸೂರು
ಬೃಹತ್ ಪ್ರತಿಭಾ ಸಂಪನ್ಮೂಲವಾಗಿದ್ದು, ನಗರದಲ್ಲಿ 1 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ 90,000ಕ್ಕೂ ಅಧಿಕ ವೈಟ್-ಕಾಲರ್ ವೃತ್ತಿಪರರು ಕಾರ್ಯನಿರ್ವಹಿಸುತ್ತಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.