ಕನ್ನಡಪ್ರಭ ವಾರ್ತೆ ಅಫಜಲ್ಪುರ
ಲೋಕಸಭೆಯ ಸಾರ್ವತ್ರಿಕ ಚುನಾವಣೆ ಅಂಗವಾಗಿ ನಡೆದ 2ನೇ ಹಂತದ ಚುನಾವಣೆ ಹಿನ್ನೆಲೆ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಅಫಜಲ್ಪುರ ಮತಕ್ಷೇತ್ರದ ಹಲವೆಡೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.251 ಮತಗಟ್ಟೆಗಳಲ್ಲಿ ಒಟ್ಟು 2 ಲಕ್ಷ 37 ಸಾವಿರ 292 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 1 ಲಕ್ಷ 21 ಸಾವಿರ 355 ಹಾಗೂ 11 ಲಕ್ಷ 5 ಸಾವಿರ 917 ಆಗಿದ್ದು ಇತರೆ 20 ಮಹಿಳಾ ಮತದಾರರಿದ್ದು. ಇವರಲ್ಲಿ 80 ಸಾವಿರ 832 ಪುರುಷ ಮತದಾರರು ಮತ ಚಲಾವಣೆ ಮಾಡಿದ್ದರೆ, 74 ಸಾವಿರ 198 ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ಇತರೆ 4 ಜನ ಮತ ಚಲಾಯಿಸಿದ್ದು ಒಟ್ಟು 1 ಲಕ್ಷ 55 ಸಾವಿರದ 34 ಮತಗಳು ಚಲಾವಣೆಯಾಗಿ ಶೇ. 65.33% ರಷ್ಟು ಮತದಾನ ನಡೆದಿದೆ.
44 ಡಿಗ್ರಿ ಸೆಲ್ಸಿಯಸ್ ನಷ್ಟು ಬಿರು ಬಿಸಿಲನ್ನು ಲೆಕ್ಕಿಸದ ಮತದಾರರು ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು.ಚುನಾವಣೆ ಸುಸೂತ್ರವಾಗಿ ನಡೆಯಲು ಸಹಾಯಕ ಚುನಾವಣಾ ಅಧಿಕಾರಿ ಜಾವೀದ್ ಕರಂಗಿ, ನೋಡಲ್ ಅಧಿಕಾರಿ ರಾಮಚಂದ್ರ ಗಡದೆ, ತಹಸಿಲ್ದಾರ ಸಂಜೀವಕುಮಾರ ದಾಸರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ನೋಡಿಕೊಂಡರು. ಸಿಪಿಐ ಚನ್ನಯ್ಯ ಹಿರೇಮಠ ನೇತೃತ್ವದ ಖಾಕಿ ಪಡೆಯು ಮತದಾನ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ ಒದಗಿಸಿದ್ದರು.