ಕನ್ನಡಪ್ರಭ ವಾರ್ತೆ ಕಡೂರು
ಅವರು ಕಡೂರು ವಿಧಾನಸಭಾ ಕ್ಷೇತ್ರದ ಚೌಳಹಿರಿಯೂರು ಗ್ರಾಮದಲ್ಲಿ ₹22 ಕೋಟಿ ವೆಚ್ಚದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಬಾಡಿಗೆ ಕಟ್ಟಡದಲ್ಲಿ ಈ ವಸತಿ ಶಾಲೆ ನಡೆಯುತ್ತಿರುವುದನ್ನು ಮನಗಂಡು, ಸರ್ಕಾರದ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮಾಡಿ, ನಮ್ಮ ಸಚಿವರಾದ ಮಹದೇವಪ್ಪನವರನ್ನು ಭೇಟಿ ಮಾಡಿ, ಅಧಿಕಾರಿ ಮಣಿವಣ್ಣನ್ ಬಳಿ ಮನವಿ ಇಟ್ಟಾಗ ಬೇರೆಡೆಗೆ ಮಂಜೂರಾಗಿದ್ದ ಕಟ್ಟಡವನ್ನು ಚೌಳಹಿರಿಯೂರಿಗೆ ಮಾಡಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹10 ಕೋಟಿ ಬಿಡುಗಡೆ ಆಗಿದ್ದು, ಎರಡನೇ ಹಂತದಲ್ಲಿ ₹12 ಕೋಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.ನಾನು ಶಾಸಕನಾಗಿ ಒಂದೇ ವರ್ಷದಲ್ಲಿ ಕ್ಷೇತ್ರದ ಚೌಳ ಹಿರಿಯೂರು ಅಂಬೇಡ್ಕರ್ ವಸತಿ ಶಾಲೆಗೆ ₹22 ಕೋಟಿ, ಯಗಟಿ ಹೋಬಳಿಯ ಸಣ್ಣೇನಹಳ್ಳಿ ಮತ್ತು ಗಡಿ ಗ್ರಾಮ ಪಂಚನಹಳ್ಳಿಯಲ್ಲಿ ₹22 ಕೋಟಿ, ಮುರಾರ್ಜಿವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ₹66 ಕೋಟಿ ಮಂಜೂರು ಮಾಡಿಸಿ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ಮಾಲತಿ ಮಾತನಾಡಿ, ರಾಜ್ಯ ಸರಕಾರವು ಶಿಕ್ಷಣಕ್ಕೆ ಆದ್ಯತೆ ನೀಡಿ ವಸತಿ ಶಾಲೆಗಳನ್ನು ತೆರೆಯುತ್ತಿದೆ. ವಿದ್ಯಾರ್ಥಿಗಳು ಕೂಡ ಪೈಪೋಟಿ ಮೂಲಕ ಕಠಿಣ ಅಭ್ಯಾಸ ಮಾಡಿ ಭವಿಷ್ಯ ರೂಪಿಸಿ ಕೊಳ್ಳುತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ನಾವು ಚಿಂತನೆ ಮಾಡಬೇಕು. ಈ ಶಾಲೆಯ ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.
ಈ ವರ್ಷ ಬೀರೂರು, ಮುಂದಿನ ವರ್ಷ ಪಂಚನಹಳ್ಳಿಯಲ್ಲೂ ಮುರಾರ್ಜಿ ವಸತಿ ಶಾಲೆ ನಿರ್ಮಾಣವಾಗಲಿದೆ. ಸಿಂಗಟಗೆರೆ ಹೋಬಳಿಯ ಬಿ. ಮಲ್ಲೇನಹಳ್ಳಿ ವಸತಿ ಶಾಲೆಯ ಕಾಮಗಾರಿ ಮುಗಿದಿದ್ದು, ಶೀಘ್ರ ಉದ್ಘಾಟನೆ ಆಗಲಿದೆ. ಚೌಳಹಿರಿಯೂರಿಗೆ ಎಂವಿಎಸ್ಎಸ್ ವಿದ್ಯುತ್ ರಿಸೀವಿಂಗ್ ಸ್ಟೇಷನ್ ಶೀಘ್ರದಲ್ಲೇ ಮಂಜೂರಾಗಲಿದೆ. ₹2.40 ಕೋಟಿ ವೆಚ್ಚದ ಕೆರೆ ಸುತ್ತ ಚರಂಡಿ ನಿರ್ಮಾಣ, ಗ್ರಾಮದ ದೇವಾಲಯಗಳ ಅಭಿವೃದ್ಧಿಗೆ ₹30 ಲಕ್ಷ , ಸುಮಾರು 50 ಲಕ್ಷ ವೆಚ್ಚದ ರಸ್ತೆಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ.
ಕೆ.ಎಸ್ ಆನಂದ್, ಶಾಸಕ