6ನೇ ವೇತನ ಆಯೋಗ ನಿವೃತ್ತಿ ಸೌಲಭ್ಯಕ್ಕೆ ಖಂಡನೆ

KannadaprabhaNewsNetwork |  
Published : Oct 02, 2024, 01:05 AM IST
6ನೇ ವೇತನ ಆಯೋಗ ನಿವೃತ್ತಿ ಸೌಲಭ್ಯಕ್ಕೆ ಖಂಡನೆ | Kannada Prabha

ಸಾರಾಂಶ

ತುಮಕೂರು: 7ನೇ ವೇತನ ಆಯೋಗದ ಅವಧಿಯಲ್ಲಿ ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ 6 ನೇ ವೇತನ ಆಯೋಗದ ನಿವೃತ್ತಿ ಸೌಲಭ್ಯ ನೀಡಿರುವುದನ್ನು ಖಂಡಿಸಿ ನಿವೃತ್ತ ನೌಕರರ ವೇದಿಕೆ ವತಿಯಿಂದ ನಗರದ ಬಾಲಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ತುಮಕೂರು: 7ನೇ ವೇತನ ಆಯೋಗದ ಅವಧಿಯಲ್ಲಿ ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ 6 ನೇ ವೇತನ ಆಯೋಗದ ನಿವೃತ್ತಿ ಸೌಲಭ್ಯ ನೀಡಿರುವುದನ್ನು ಖಂಡಿಸಿ ನಿವೃತ್ತ ನೌಕರರ ವೇದಿಕೆ ವತಿಯಿಂದ ನಗರದ ಬಾಲಭವನದ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಎಂ.ಜಿ. ರಸ್ತೆಯಲ್ಲಿರುವ ಬಾಲಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮಕ್ಕೂ ಮುನ್ನ ನಿವೃತ್ತ ನೌಕರರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ ಸರ್ಕಾರ ೭ನೇ ವೇತನ ಆಯೋಗದ ವರದಿಯಂತೆ ಸರ್ಕಾರಿ ನೌಕರರಿಗೆ 1-8-2024 ರಿಂದ ಅನ್ವಯವಾಗುವಂತೆ ಆರ್ಥಿಕ ಸೌಲಭ್ಯವನ್ನು ಅನುಷ್ಠಾನಗೊಳಿಸಲು ಕ್ರಮವಹಿಸಿದೆ. ಆದರೆ 1-7-2022 ರಿಂದ ಕಾಲ್ವನಿಕ ವೇತನ ನಿಗದಿಪಡಿಸಿ 1-8-2024 ರಿಂದ ಆರ್ಥಿಕ ಸೌಲಭ್ಯ ನೀಡುವುದರಿಂದ 1-7-2022 ರಿಂದ 32-07-2024 ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ 6ನೇ ವೇತನದ ಮೂಲ ವೇತನಕ್ಕೆ ಡಿ.ಸಿ.ಆರ್.ಜಿ. ಕಮ್ಯುಟೇಷನ್ ಆಫ್ ಪೆನ್ಷನ್ ಮತ್ತು ಲೀವ್ ಎನ್‌ಕ್ಯಾಷ್‌ಮೆಂಟ್ ಲೆಕ್ಕಾಚಾರ ಮಾಡುವುದರಿಂದ ಸುಮಾರು 8 ರಿಂದ 20 ಲಕ್ಷದವರೆಗೆ ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.7ನೇ ವೇತನ ಆಯೋಗದ ವರದಿಯನ್ನು 25 ತಿಂಗಳ ನಂತರ ಅನುಷ್ಠಾನ ಮಾಡಿರುವುದರಿಂದ ಹಾಗೂ ಆರ್ಥಿಕ ಸೌಲಭ್ಯವನ್ನು 7ನೇ ವೇತನಕ್ಕೆ ಒಳಪಡುವ ನೌಕರರಿಗೆ ಆರ್ಥಿಕ ಸೌಲಭ್ಯ ನೀಡದೇ ಇರುವುದರಿಂದ ಸಂಧ್ಯಾ ಕಾಲದಲ್ಲಿರುವ ವಯೋ ನಿವೃತ್ತ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ನಿವೃತ್ತ ನೌಕರರು ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ನೌಕರರ ವೇದಿಕೆಯ ಚಂದ್ರಶೇಖರ್, ಎಂ.ಆರ್. ಶಿವಣ್ಣ, ರಾಜಣ್ಣ, ವೆಂಕಟ ನಂಜಪ್ಪ, ಮುದ್ದಪ್ಪ, ಸಿದ್ದಯ್ಯ, ದಯಾನಂದ್, ಜಗದಾಂಬ, ನಾಗರಾಜು, ರಾಮಚಂದ್ರಪ್ಪ, ಶೇಖ್‌ಮಹಿದಿನ್, ಗಂಗಾಧರ್, ಸುಬ್ಬರಾಯಪ್ಪ ಸೇರಿದಂತೆ ಎಲ್ಲ ತಾಲೂಕುಗಳ ನಿವೃತ್ತ ನೌಕರರು ಪಾಲ್ಗೊಂಡಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ