ಹಣ ಡಬ್ಲಿಂಗ್‌ ಗ್ಯಾಂಗ್‌ನ 7 ಜನರ ಬಂಧನ

KannadaprabhaNewsNetwork |  
Published : Mar 17, 2026, 03:00 AM IST
ಗೋಕಾಕ ನಗರ ಪೊಲೀಸರು ಬಂಧಿಸಿರುವ ಆರೋಪಿಗಳು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಹಣವನ್ನು ಡಬ್ಲಿಂಗ್ ಮಾಡಿ ಕೊಡುತ್ತೇವೆ ಎಂದು ನಂಬಿಸಿ ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಏಳು ಜನರ ಗ್ಯಾಂಗ್‌ ಅನ್ನು ಗೋಕಾಕ ನಗರ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಣವನ್ನು ಡಬ್ಲಿಂಗ್ ಮಾಡಿ ಕೊಡುತ್ತೇವೆ ಎಂದು ನಂಬಿಸಿ ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಏಳು ಜನರ ಗ್ಯಾಂಗ್‌ ಅನ್ನು ಗೋಕಾಕ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗೋಕಾಕ ಮೆಹಂದಿ ನಗರದ ನಿವಾಸಿಗಳಾದ ಪರಶುರಾಮ ಭೀಮಶಿ ಬಡಕರಿ(36), ಇಮ್ರಾನ್ ಬಾಬಾಜಾನ್ ಜುನೇದಿ (27), ಮಹಾರಾಷ್ಟ್ರದ ಪಶ್ಚಿಮ ಮುಂಬೈನ ಶಿವಾಜಿ ನಗರದ ಜಯಶ್ರೀ ಬಾಬು ಕಾಂಬಳೆ (40), ಅಹ್ಮದನಗರ ಜಿಲ್ಲೆಯ ಮನೀಷಾ ರಾಜು ಗಾಯಕ್ವಾಡ್ (41), ಜಲಗಾಂವ ಜಿಲ್ಲೆಯ ವಾಕಟೂಕಿ ನಿವಾಸಿ ಉಜ್ವಲ ತುಳಸಿರಾಮ ಬಿಲಾನೆ (55), ಥಾಣೆ ಪೊಲೀಸ್‌ ಠಾಣೆ ಹೆಡ್‌ ಕಾನ್‌ಸ್ಟೇಬಲ್‌ ಅನಂತ ಪ್ರಕಾಶ ನರವಾದೆ (40) ಹಾಗೂ ಕ್ರೈಂ ಬ್ರ್ಯಾಂಚ್‌ ಯುನಿಟ್‌ ಹೆಡ್‌ ಕಾನ್‌ಸ್ಟೇಬಲ್‌ ದಿಲ್ದಾರ್ ರಬ್ಬಾನಿ ಶೇಖ್ (35) ಎಂದು ಗುರುತಿಸಲಾಗಿದೆ.

ಗೋಕಾಕದ ಶ್ರೀನಗರ ಪ್ರದೇಶದಲ್ಲಿರುವ ಮನೆಯಲ್ಲಿ ಆರೋಪಿಗಳು ಜನರಿಗೆ 1ಕ್ಕೆ 4 ಪಟ್ಟು ಹಣ ಮಾಡಿಕೊಡುತ್ತೇವೆ ಎಂದು ಹೇಳಿ ಮೋಸ ಮಾಡುತ್ತಿದ್ದರು. ₹500 ನೋಟು ಹಾಗೂ ಖಾಲಿ ಕಾಗದಗಳಿಗೆ ಕಪ್ಪು ಬಣ್ಣ ಹಚ್ಚಿ, ರಾಸಾಯನಿಕ ವಿಧಾನದಿಂದ ಹಣ ತಯಾರಿಸಲಾಗುತ್ತದೆ ಎಂದು ನಂಬಿಸಿ ಜನರಿಂದ ಹಣ ಪಡೆಯುತ್ತಿದ್ದರೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಗೋಕಾಕ ನಗರ ಠಾಣೆ ಪೊಲೀಸರು ದಾಳಿ ನಡೆಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಶದಿಂದ ಹಣ ತಯಾರಿಸಲು ಬಳಸುತ್ತಿದ್ದ ಯಂತ್ರ, ಕಪ್ಪು ಬಣ್ಣದ ಬಾಟಲಿಗಳು, ಖಾಲಿ ಕಾಗದಗಳಿರುವ ಬ್ಯಾಗ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 8 ಮೊಬೈಲ್ ಪೋನ್‌ಗಳು ಹಾಗೂ ₹2,520 ನಗದು ಹಣ ಜಪ್ತಿ ಮಾಡಲಾಗಿದೆ.

ಈ ಕುರಿತು ಗೋಕಾಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾಗಿ ಎಸ್ಪಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರ್ಸಿಯನ್‌ ಹೇರಿ ಕನ್ನಡ ಕೊಲೆ ಮಾಡಿದ ಟಿಪ್ಪು: ಸಿ.ಟಿ. ರವಿ
ಲೇಡಿಗೋಶನ್‌ : ಗುತ್ತಿಗೆದಾರರ ಬಾಕಿ ಮೊತ್ತ ಲೋಕ ಅದಾಲತ್‌ನಲ್ಲಿ ಇತ್ಯರ್ಥ