70 ಮಂದಿಗೆ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Nov 01, 2025, 01:15 AM IST
ಕೂಡ್ಲಿ | Kannada Prabha

ಸಾರಾಂಶ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 70 ಮಂದಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.

ಕನ್ನಡಪ್ರಭ ವಾರ್ತೆ ತುಮಕೂರುವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 70 ಮಂದಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.ರಂಗಭೂಮಿ ಕ್ಷೇತ್ರದಲ್ಲಿ ಮಮತ, ವೆಂಕಟೇಶ್, ಚಾಂದ್ ಪಾಷ, ಕೆ.ಎಚ್. ಹನುಮಂತರಾಯಪ್ಪ, ಆರ್. ಜಯಾನಂದ್, ಟಿ.ಎಚ್. ಬಸವರಾಜು, ವೆಂಕಟೇಶ್ ಮೆಳೆಕೋಟೆ, ಜಿ.ಕೆ. ಕೃಷ್ಣಮೂರ್ತಿ, ಬಸವರಾಜು, ಮಲ್ಲಿಕಾರ್ಜುನ ಮತಿಘಟ್ಟ ಆಯ್ಕೆಯಾಗಿದ್ದಾರೆ. ಜಾನಪದ ಹಾಗೂ ಯಕ್ಷಗಾನ ವಿಭಾಗದಿಂದ ಮರಿಲಿಂಗಯ್ಯ, ನರಸಿಂಹಯ್ಯ, ಕರಿಯಣ್ಣ, ಸಣ್ಣ ಚಿಕ್ಕಣ್ಣ, ಮುದ್ದಪ್ಪ, ನಾಗರಾಜು ಡಿ. ವೀರ್ಲಗೊಂದಿ ಆಯ್ಕೆಯಾಗಿದ್ದಾರೆ.ಸಾಹಿತ್ಯ ವಿಭಾಗದಿಂದ ಡಾ. ಗಂಗಾಧರ ಕೊಡ್ಲಿಯವರ, ಸಿ.ಎನ್. ದುರ್ಗ ಮೆಹಬೂಬ್ ಖಾನ್, ಬಿ.ಆರ್. ಸುಮ, ಡಾ. ಬಿ.ಎಸ್. ಮಂಜುಳಾ, ಕಮಲಾ ರಾಜೇಶ್ ಆಯ್ಕೆಯಾಗಿದ್ದಾರೆ. ಸಮಾಜ ಸೇವೆಯಿಂದ ಎಲ್. ಲಿಂಗಣ್ಣ, ರಾಜೇಶ್ವರಿ ಹೆಚ್.ಎಲ್. ರಂಗಮ್ಮ, ಕದರಪ್ಪ, ಸಿ.ವಿ. ಕುಮಾರ್, ಕಿರಣಕುಮಾರ್ ಆಯ್ಕೆಯಾಗಿದ್ದಾರೆ.ಸಂಗೀತ ನೃತ್ಯ ವಿಭಾಗದಿಂದ ಕೃಷ್ಣಮೂರ್ತಿ ಎಚ್, ಗೋವಿಂದಯ್ಯ ಎಚ್.ಟಿ, ಜಿ. ಸೋಮಶೇಖರ ದಾಸ್, ಹರೀಶ್ ರಾಮನ್, ಟಿ.ಕೆ. ಕರುಣಾಚಾರ್, ಆಯ್ಕೆಯಾಗಿದ್ದಾರೆ. ಶಿಕ್ಷಣ ವಿಭಾಗದಿಂದ ಡಿ.ಎಸ್. ಮುನೀಂದ್ರ ಕುಮಾರ್, ಡಾ. ದಾಕ್ಷಾಯಿಣಿ ಜಿ, ಎಂ. ಶಿವಕುಮಾರ್ ಆಯ್ಕೆಯಾಗಿದ್ದಾರೆ.ಚಿತ್ರಕಲಾ, ಶಿಲ್ಪಕಲೆ, ಕರಕುಶಲ ವಿಭಾಗದಿಂದ ಶ್ರೀನಿವಾಸ್ ಟಿ, ಕಮಲಾ ಬಿ, ನರಸಿಂಹಯ್ಯ ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮದಿಂದ ಕರಣಂ ರಮೇಶ್, ಟಿ.ಆರ್. ನಾಗರಾಜು, ಸಿಟಿಎಸ್ ಗೋವಿಂದಪ್ಪ, ನರಸಿಂಹಯ್ಯ, ಆರ್. ಲಕ್ಷ್ಮೀನಾರಾಯಣಶೆಟ್ಟಿ, ಜಯಣ್ಣ ಎಚ್., ಗುರುಮೂರ್ತಿ ಆಯ್ಕೆಯಾಗಿದ್ದಾರೆ. ಕ್ರೀಡೆ ವಿಭಾಗದಿಂದ ಜಿ.ವಿ. ಉಮೇಶ್ ಕುಮಾರ್, ಟಿ.ಆರ್. ಬಸವರಾಜುಆಯ್ಕೆಯಾಗಿದ್ದಾರೆ.ಸಂಕೀರ್ಣದಲ್ಲಿ ನಿಡುಸಾಲೆ ಪುಟ್ಟಸ್ವಾಮಯ್ಯ, ರೀಡ್ ಬುಕ್ ಫೌಂಡೇಶನ್ ಆಯ್ಕೆಯಾಗಿದ್ದಾರೆ. ವೈದ್ಯಕೀಯ ಪಾರಂಪರೀಕ ವೈದ್ಯ ವಿಭಾಗದಿಂದ ಸೂಲಗಿತ್ತಿ ಬೇಗಜ್ಜಿ ಆಯ್ಕೆಯಾಗಿದ್ದಾರೆ. ಕನ್ನಡ ಪರ ಹೋರಾಟಗಾರ ವಿಭಾಗದಿಂದ ಅನಿಲ್ ಕುಮಾರ್, ಅರುಣ ಕುಮಾರ್, ಅಂಬರೀಶ್, ಗಿರೀಶ್ ಡಿ.ಎಸ್, ಜೆ. ವಿಠಲ್, ಜಯರಾಮೇಗೌಡ, ಸಂತೋಷ್ ಕೆ.ಎಸ್. ಆಯ್ಕೆಯಾಗಿದ್ದಾರೆ.ಗಡಿನಾಡು ಸೇವೆ ವಿಭಾಗದಿಂದ ರಂಗಧಾಮಯ್ಯ, ರೇಣುಕಮ್ಮ, ಮೂಡ್ಲಿಗಿರೀಶ್ ಆಯ್ಕೆಯಾಗಿದ್ದಾರೆ. ಹಾಗೆಯೇ ಕೆಂಪಹೊನ್ನಯ್ಯ, ಗಂಗಮ್ಮ, ಬಿ.ಡಿ. ಉಮೇಶ್, ಪ್ರಸನ್ನ ಕುಮಾರ್, ಚಿಕ್ಕಹನುಮಂತಯ್ಯ, ಪಿ.ಆರ್. ಶ್ರೀಕಂಠಯ್ಯ, ಮೂಡಲಗಿರಿಯಪ್ಪ, ಆಂಜಿನಪ್ಪ, ಮೇಘರಾಜ್ ಅವರು ಆಯ್ಕೆಯಾಗಿದ್ದಾರೆ.ಈ ಎಲ್ಲಾ ಸಾಧಕರಿಗೆ ನವೆಂಬರ್ 1 ರಂದು ತುಮಕೂರಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ