೪೦೦ ಕ್ಯೂಸೆಕ್‌ ಬದಲಾಗಿ ೭೦೦ ಕ್ಯೂಸೆಕ್‌ ನೀರು ಬಿಡುಗಡೆ

KannadaprabhaNewsNetwork |  
Published : Aug 17, 2026, 03:15 AM IST
ಫೋಟೋ ಶೀರ್ಷಿಕೆ ೧೬ಎಸ್‌ಡಿಟಿ೧ ಸವದತ್ತಿಯ ಮಲಪ್ರಭಾ ಬಲದಂಡೆ ಕಾಲುವೆಯ ಜಾಕ್‌ವೆಲ್ಲ್ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ಕಾಲುವೆಯ ಮುಖಾಂತರ ೭೦೦ ಕ್ಯೂಸೆಕ್ಸ್ ನೀರನ್ನು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಏತ ನೀರಾವರಿ ಕಾಲುವೆಯ ವ್ಯಾಪ್ತಿಯಲ್ಲಿ ಬರುವಂತ ಗ್ರಾಮಗಳಲ್ಲಿನ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಕಾಲುವೆಗಳ ಮೂಲಕ ಕುಡಿಯು ನೀರನ್ನು ಹರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಏತ ನೀರಾವರಿ ಕಾಲುವೆಯ ವ್ಯಾಪ್ತಿಯಲ್ಲಿ ಬರುವಂತ ಗ್ರಾಮಗಳಲ್ಲಿನ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲ ಕಾಲುವೆಗಳ ಮೂಲಕ ಕುಡಿಯು ನೀರನ್ನು ಹರಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸವದತ್ತಿಯ ಮಲಪ್ರಭಾ ಬಲದಂಡೆ ಕಾಲುವೆಯ ಜಾಕ್‌ವೆಲ್‌ದಿಂದ ಈಗಾಗಲೇ ಬಿಡುತ್ತಿರುವ ನೀರಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿ ಮಾತನಾಡಿದ ಅವರು, ಸದ್ಯದ ಸ್ಥಿತಿಯಲ್ಲಿ ಬಲದಂಡೆ ಕಾಲುವೆಯಿಂದ ೪೦೦ ಕ್ಯೂಸೆಕ್‌ ನೀರನ್ನು ಬಿಡಲಾಗುತ್ತಿದ್ದು, ಅದನ್ನು ೭೦೦ ಕ್ಯೂಸೆಕ್‌ ಏರಿಸಲಾಗಿದೆ ಎಂದರು. ನರಗುಂದ ಶಾಖಾ ಕಾಲುವೆಗೆ ಬಿಡುತ್ತಿರುವ ೩೦೦ ಕ್ಯೂಸೆಕ್‌ ನೀರನ್ನು ೫೦೦ ಕ್ಯೂಸೆಕ್‌ ಹೆಚ್ಚಿಸಲಾಗಿದ್ದು, ಮಲಪ್ರಭಾ ಎಡದಂಡೆ ಕಾಲುವೆಗೆ ಮಂಗಳವಾರದಿಂದ ೮೦೦ ಕ್ಯೂಸೆಕ್‌ ನೀರನ್ನು ಮುಂದಿನ ಹತ್ತು ದಿನಗಳವರೆಗೆ ಬಿಡಲಾಗುತ್ತಿದೆ ಎಂದರು.ಶಾಸಕ ವಿಶ್ವಾಸ ವೈದ್ಯ ಮಾತನಾಡಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಭಾಗದಲ್ಲಿ ಬರುವ ಕೆರೆ ಕಟ್ಟೆಗಳನ್ನು ತುಂಬಿಸಿಕೊಂಡು ಅನುಕೂಲ ಮಾಡಿಕೊಳ್ಳಬೇಕು. ಎಲ್ಲ ಏತ ನೀರಾವರಿ ಯೋಜನೆಗಳ ಮೂಲಕ ಸುಮಾರು ೨ಸಾವಿರ ಕ್ಯೂಸೆಕ್‌ ನೀರನ್ನು ಹತ್ತು ದಿನಗಳ ಕಾಲದವರೆಗೆ ಬಿಡಲಾಗುತ್ತಿದ್ದು, ರೈತರು ಅನಾವಶ್ಯಕವಾಗಿ ನೀರನ್ನು ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಚೀಪ್ ಇಂಜನೀಯರ್‌ ಲಕ್ಷ್ಮಣ ನಾಯಕ, ಸುಪರಿಟೆಂಡೆಂಟ್ ಇಂಜನೀಯರ್‌ ಸುಭಾಸ ನಾಯಕ, ವಿವೇಕ ಮುದಿಗೌಡರ, ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ, ಬಿ.ವಿ.ಅಯ್ಯನಗೌಡರ, ಮಲ್ಲು ಜಕಾತಿ, ಶಿವಕುಮಾರ ರಾಠೋಡ, ಶ್ರೀಕಾಂತ ನೇಗಿನಾಳ, ಡಿ.ಡಿ.ಟೋಪೋಜಿ, ಸಿಪಿಐ ಸುರೇಶ ಬೆಂಡೆಗುಂಬಳ, ಪ್ರಕಾಶ ಲಮಾಣಿ ಹಾಗೂ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ, ಜನಜಾನುವಾರುಗಳಿಗೆ ಮಾತ್ರ ನೀರು ಬಿಡುಗಡೆ
ಅಭಿವೃದ್ಧಿ ಫಲ ಕಡೆಯ ವ್ಯಕ್ತಿಗೂ ಸಿಗಲಿ: ಪ್ರೊ.ವಿಜಯಾ