ಮಾರ್ಚ್‌ನಲ್ಲಿ 74 ಕೆರೆ ತುಂಬಿಸುವ ಯೋಜನೆಗೆ ಚಾಲನೆ: ಡಾ. ಎನ್.ಟಿ. ಶ್ರೀನಿವಾಸ್

KannadaprabhaNewsNetwork |  
Published : Mar 08, 2024, 01:48 AM IST
ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಿನಾದ್ಯಂತ ೫೫೦ ಕೋಟಿ ರೂ. ಅನುದಾನದ ನಾನಾ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಮಾರ್ಚ್ ತಿಂಗಳ ಕೊನೆಯಲ್ಲಿ ಸಾಕಾರಗೊಳ್ಳಲಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತಿರುವ ನನಗೆ ಸಹಕಾರ ಇರಲಿ

ಕೂಡ್ಲಿಗಿ: ನಾನು ಇನ್ನು ಮುಂದೆ ಜನತೆಯ ಜತೆ ಮತ್ತಷ್ಟು ಗಟ್ಟಿ ಸಂಬಂಧ ಇಟ್ಟುಕೊಳ್ಳಲು ಬಯಸುತ್ತೇನೆ. ಸ್ವಲ್ಪ ಕಾಲಾವಕಾಶ ಕೊಡಿ. ನಿಮ್ಮ ಆಶಾಭಾವನೆಗಳನ್ನು ಅರಿತು ರಾಜಕಾರಣ ಮಾಡುತ್ತೇನೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಗುರುವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ₹550 ಕೋಟಿ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಿಗೆ ₹೫೫೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಎಲ್ಲ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಮೂಲಕ ಮಾದರಿ ಕ್ಷೇತ್ರದ ಗುರಿ ಹೊಂದಲಾಗಿದೆ ಎಂದರು.

ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಮಾರ್ಚ್ ತಿಂಗಳ ಕೊನೆಯಲ್ಲಿ ಸಾಕಾರಗೊಳ್ಳಲಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತಿರುವ ನನಗೆ ಸಹಕಾರ ಇರಲಿ. ಸ್ವಚ್ಛ ಕೂಡ್ಲಿಗಿ, ಸುಂದರ ಕೂಡ್ಲಿಗಿ ಅಭಿಯಾನದ ಮೂಲಕ ಪಟ್ಟಣದ ಅಭಿವೃದ್ಧಿ ಹಾಗೂ ಪ್ರತಿಯೊಂದು ಗ್ರಾಮದ ರಸ್ತೆ, ಚರಂಡಿ, ಚೆಕ್‌ಡ್ಯಾಂ ಸೇರಿ ನಾನಾ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಮಾತನಾಡಿ, ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು ಎಂದು ಬಿಜೆಪಿಯವರು ಕೆಲ ದಿನಗಳ ಹಿಂದೆ ಕೇಳಿದ್ದರು. ಆ ಪ್ರಶ್ನೆ ಕೇಳಿದವರಿಗೆ ಕೇವಲ ೧೦ ತಿಂಗಳಲ್ಲಿ ₹೫೫೦ ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡುತ್ತಿರುವುದೇ ಉತ್ತರವಾಗಿದೆ ಎಂದರು. ಪ್ರಥಮದರ್ಜೆ ಗುತ್ತಿಗೆದಾರ ಹಾಗೂ ರಾಜ್ಯ ಬೀಜ ನಿಗಮದ ಸದಸ್ಯ ನಾಗರಕಟ್ಟೆ ಸಾವಜ್ಜಿ ರಾಜೇಂದ್ರಪ್ರಸಾದ್ ಮಾತನಾಡಿ, ಕ್ಷೇತ್ರಕ್ಕೆ ಬಿಡುಗಡೆಯಾದ ₹೫೫೩ ಕೋಟಿ ವೆಚ್ಚದ ಕಾಮಗಾರಿಗಳ ವಿವರಗಳನ್ನು ಹೇಳಿದರು. ಮುಖಂಡರಾದ ಉದಯ ಜನ್ನು ಪಟ್ಟಣ ಪಂಚಾಯಿತಿ ಸದಸ್ಯ ಕಾವಲಿ ಶಿವಪ್ಪನಾಯಕ, ತಾಪಂ ಮಾಜಿ ಸದಸ್ಯೆ ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ, ತೂಲಹಳ್ಳಿ ಶಾಂತನಗೌಡ, ಕೂಡ್ಲಿಗಿ ತಾಲೂಕು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹುರುಳಿಹಾಳ್ ಬಸವೇಶ್ವರ, ಉಪಾಧ್ಯಕ್ಷ ದಿಬ್ಬದಹಳ್ಳಿ ಸಿದ್ದೇಶ, ಕಾಂಗ್ರೆಸ್ ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನ ಗೌಡ, ನಾಗಮಣಿ ಜಿಂಕಲ್, ಹಿರೇಕುಂಬಳಗುಂಟೆ ಟಿ. ಉಮೇಶ್, ಎನ್.ಟಿ. ತಮ್ಮಣ್ಣ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಗುರುಸಿದ್ಧನಗೌಡ, ಕಾನಹೊಸಹಳ್ಳಿ ಕೆ.ಜಿ. ಕುಮಾರಗೌಡ, ಎನ್.ವಿ. ತಮ್ಮಣ್ಣ, ಬಣವಿಕಲ್ಲು ಎರಿಸ್ವಾಮಿ, ಪೇಪರ್ ಸೂರಯ್ಯ, ಜಿಲಾನ್, ಎಂ.ಬಿ. ಅಯ್ಯನಹಳ್ಳಿ ಅಜ್ಜನಗೌಡ, ಐಗಳ ಮಲ್ಲಾಪುರ ಬೋರಣ್ಣ, ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ, ದಿನ್ನೆ ಮಲ್ಲಿಕಾರ್ಜುನ, ಕುರಿಹಟ್ಟಿ ಬೋಸಣ್ಣ, ಜಿ. ಓಬಣ್ಣ, ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಸೂಲದಹಳ್ಳಿ ಸಿದ್ದಪ್ಪ, ಬುಡ್ಡಾರೆಡ್ಡಿ, ಶಿವಪುರ ರಾಜಣ್ಣ, ಸಿ.ಎಸ್. ಪುರ ಬಸವರಾಜ, ಕಲ್ಲಹಳ್ಳಿ ಉಪ್ಪಾರ ಸಿದ್ದಪ್ಪ, ಬಡೇಲಡುಕು ಸತೀಶ್, ತುಪ್ಪಾಕನಹಳ್ಳಿ ರಮೇಶ್, ಡಾಣಿ ರಾಘವೇಂದ್ರ, ತಾಯಕನಹಳ್ಳಿ ಮಹಂತೇಶ್, ಉಪ್ಪಾರ ರಾಘವೇಂದ್ರ ಇತರರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ