ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಈ ಹಿಂದೆ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 403 ಪ್ರಕರಣಗಳು, ಪ್ರಸ್ತುತ ಇದ್ದ 7017 ವ್ಯಾಜ್ಯ ಪೂರ್ವದ ಪ್ರಕರಣಗಳಲ್ಲಿ ಒಟ್ಟು 7420 ಪ್ರಕರಣಗಳನ್ನು ಇತ್ಯರ್ಥ ಪಡಿಸಿಪಡಿಸಲಾಗಿದೆ.
ವಿವಿಧ ಗ್ರಾಮಗಳಲ್ಲಿ ಹಲವು ಕಾರಣಗಳಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡು ಕಡೆಯ ಕಕ್ಷಿದಾರರುಗಳಿಗೆ ಲೋಕಾ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ತಿಳಿವಳಿಕೆ ನೀಡಿ ಎರಡು ಕಡೆಯವರಿಂದ ಮುಚ್ಚಳಿಕೆ ಬರೆಸಿ ಈ ಪ್ರಕರಣಗಳ ಎರಡು ಬದಿಯ ಕಕ್ಷಿದಾರರ ವಕೀಲರ ಸಮ್ಮುಖದಲ್ಲಿ ನ್ಯಾಯಾಧೀಶರು ಇತ್ಯರ್ಥ ಪಡಿಸಿದ್ದಾರೆ.ಕ್ಷುಲ್ಲಕ ಕಾರಣಗಳ ಸಣ್ಣ ಸಣ್ಣ ಪ್ರಕರಣಗಳಾಗಿವೆ. ವಿವಿಧ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದ ಫಲಾನುಭವಿಗಳು, ಅಘಾತ ಪ್ರಕರಣ, ಸಿವಿಲ್ ವ್ಯಾಜ್ಯಗಳು, ಚಕ್ ಬೌನ್ಸ್ ಪ್ರಕರಣ ಸೇರಿದಂತೆ ಇತರ ಪ್ರಕರಣಗಳನ್ನು ಬ್ಯಾಂಕಿಗೆ ಕಟ್ಟಬೇಕಿದ್ದ ಸಾಲದ ಹಣವನ್ನು ಕಡಿಮೆ ದರದಲ್ಲಿ ಫಲಾನುಭವಿಗಳಿಗೆ ಹೊರೆಯಾಗದಂತೆ ನ್ಯಾಯಾಧೀಶರ ಮೂಲಕ ಬ್ಯಾಂಕ್‌ಗಳಿಗೆ ಮರು ಪಾವತಿ ಮಾಡಿಸಿ ಪ್ರಕರಣಗಳನ್ನು ನ್ಯಾಯಾಧಿಶರು ಇತ್ಯರ್ಥ ಪಡಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪವನ್‌ಗೌಡ, ಉಪಾಧ್ಯಕ್ಷ ಮಂಜುನಾಥ್ ಸೇರಿದಂತೆ ಹಿರಿಯ ವಕೀಲರುಗಳು ಭಾಗವಹಿಸಿದ್ದರು.