ತೀರ್ಥಹಳ್ಳಿ ಪಪಂಗೆ 75 ಕೋಟಿ ರು ಅನುದಾನ

KannadaprabhaNewsNetwork |  
Published : Aug 28, 2026, 02:00 AM IST
26ಎಚ್ಎಸ್ಎನ್12: ಕಲ್ಲೇಸೋಮನಹಳ್ಳಿ ಗ್ರಾಮದಲ್ಲಿ ಮಾಜಿ ಚೇರ್ಮನ್ ನಿಂಗೇಗೌಡ ಅವರನ್ನು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ. ಶಿವಾನಂದ್ ತಗಡೂರು  ಸನ್ಮಾನಿಸಿದರು. ಬಸವರಾಜ್, ಭಾರತೀಶ್, ಕಾಂತರಾಜ್, ರವಿ, ಯಶೋಧ, ನಾಗಮ್ಮ, ಶಾಂತಮ್ಮ, ಶೋಭಾ, ಇತರರು ಹಾಜರಿದ್ದರು. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿಗಳು ಹಾದುಹೋಗುವ ಸ್ಥಳೀಯ ಪ್ರಾಧಿಕಾರಗಳಿಗೆ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅಡಿಯಲ್ಲಿ ಬೃಹತ್ ಮೊತ್ತದ ಅನುದಾನಗಳು ಬಿಡುಗಡೆಯಾಗುತ್ತಿದೆ.

ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿಗಳು ಹಾದುಹೋಗುವ ಸ್ಥಳೀಯ ಪ್ರಾಧಿಕಾರಗಳಿಗೆ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅಡಿಯಲ್ಲಿ ಬೃಹತ್ ಮೊತ್ತದ ಅನುದಾನಗಳು ಬಿಡುಗಡೆಯಾಗುತ್ತಿದೆ. ಪಟ್ಟಣ ಪಂಚಾಯಿತಿಗಳಿಗೆ 75 ಕೋಟಿ ರು. ಪುರಸಭೆಗಳಿಗೆ 150 ಕೋಟಿ ರು. ನಗರಸಭೆಗಳಿಗೆ 200 ಕೋಟಿ ರು. ಅನುದಾನ ಸಿಗಲಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ರಾಷ್ಟ್ರೀಯ ಹೆದ್ದಾರಿ ರಾಜ್ಯ ಹೆದ್ದಾರಿಗಳು ಸಾಗಿರುವುದರಿಂದ ಇಲ್ಲಿಗೂ 75 ಕೋಟಿ ರು. ಅನುದಾನ ಲಭಿಸಲಿದೆ. ಪಟ್ಟಣದ ವಿವಿಧ ವಾರ್ಡ್ ಗಳಿಂದ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಚರಂಡಿ ನಿರ್ಮಿಸಲು, ರಸ್ತೆ ಅಗಲಗೊಳಿಸಲು, ತಡೆಗೋಡೆಗಳನ್ನು ನಿರ್ಮಿಸಲು ಈ ಅನುದಾನ ಬಳಕೆಯಾಗಲಿದೆ. ಶಾಸಕ ಆರಗ ಜ್ಞಾನೇಂದ್ರ ಅವರು ಈ ಅನುದಾನ ಬಳಕೆಗೆ ಯೋಜನೆಗಳನ್ನು ಸಿದ್ಧಪಡಿಸಿದ್ದು. ಪಟ್ಟಣದ ವಿವಿಧ ವಾರ್ಡುಗಳ 30 ರಸ್ತೆಗಳ ಅಭಿವೃದ್ಧಿಗೆ ಪಟ್ಟಿ ಸಿದ್ಧವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಲ್ಲಿ ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡಿವೆ; ಹುಷಾರು!
ಬೆಳಗಾವಿಯಲ್ಲೂ ಶಾಸಕರ ಭವನ: ಸ್ಪೀಕರ್‌ ಜಿ.ಎಸ್. ಪಾಟೀಲ