ರಾಜ್ಯದ ರೈಲ್ವೆ ಯೋಜನೆಗೆ 7524 ಕೋಟಿ ರು.

KannadaprabhaNewsNetwork |  
Published : Feb 02, 2024, 01:04 AM IST

ಸಾರಾಂಶ

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ₹2.52 ಲಕ್ಷ ಕೋಟಿ ಅನುದಾನ ನೀಡಲಾಗಿದ್ದು, ಇದರಲ್ಲಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಕರ್ನಾಟಕ ರಾಜ್ಯದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ₹7,524 ಕೋಟಿ ನೀಡಲಾಗಿದೆ. ಹೊಸ ಲೈನ್‌, ವಿದ್ಯುದ್ದೀಕರಣ ಸೇರಿ ವಿವಿಧ ಕಾಮಗಾರಿಗಳಿಗೆ ಈ ಅನುದಾನ ಹಂಚಿಕೆ ಮಾಡಲಾಗಿದೆ.

- ಯುಪಿಎ ಅವಧಿಗೆ ಹೋಲಿಸಿದ್ರೆ 9 ಪಟ್ಟು ಹೆಚ್ಚು ಅನುದಾನ-ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌

- ಕಳೆದ ಬಾರಿ ₹7,561 ಕೋಟಿ ಅನುದಾನ ಹಂಚಿಕೆಯಾವುದಕ್ಕೆ ಎಷ್ಟು ಹಣ?- ಹೊಸ ರೈಲು ಮಾರ್ಗಗಳಿಗೆ ₹2286 ಕೋಟಿ- ಜೋಡು ರೈಲು ಮಾರ್ಗಗಳಿಗೆ ₹1,531 ಕೋಟಿ - ಪ್ರಯಾಣಿಕರ ಮೂಲಸೌಕರ್ಯಕ್ಕೆ ₹987 ಕೋಟಿ

- ತುಮಕೂರು-ದಾವಣಗೆರೆ ಮಾರ್ಗಕ್ಕೆ ₹300 ಕೋಟಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ₹2.52 ಲಕ್ಷ ಕೋಟಿ ಅನುದಾನ ನೀಡಲಾಗಿದ್ದು, ಇದರಲ್ಲಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಕರ್ನಾಟಕ ರಾಜ್ಯದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ₹7,524 ಕೋಟಿ ನೀಡಲಾಗಿದೆ. ಹೊಸ ಲೈನ್‌, ವಿದ್ಯುದ್ದೀಕರಣ ಸೇರಿ ವಿವಿಧ ಕಾಮಗಾರಿಗಳಿಗೆ ಈ ಅನುದಾನ ಹಂಚಿಕೆ ಮಾಡಲಾಗಿದೆ.

ಯುಪಿಎ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಮೀಸಲಿರಿಸಿದ್ದ ಅನುದಾನಕ್ಕೆ ಹೋಲಿಸಿದರೆ ಇದು ಶೇ.9ಪಟ್ಟು ಹೆಚ್ಚು. 2009-14ರ ಅವಧಿಯಲ್ಲಿ ₹835 ಕೋಟಿ ಇದ್ದ ಅನುದಾನ ಹಂಚಿಕೆ 2024-25ರ ಅವಧಿಗೆ ₹7524 ಕೋಟಿಗೆ ಏರಿದ್ದು, ಅನುದಾನ ಹಂಚಿಕೆಯಲ್ಲಿ ಶೇ.801ರಷ್ಟು ಹೆಚ್ಚಳವಾಗಿದೆ. ಅಂದರೆ ಶೇ.9 ಪಟ್ಟು ಹೆಚ್ಚಿನ ಅನುದಾನ ರಾಜ್ಯಕ್ಕೆ ಲಭಿಸಿದೆ. ಇದರಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗಕ್ಕೆ ₹480 ಕೋಟಿ ಸೇರಿ ಹೊಸ ರೈಲು ಮಾರ್ಗಗಳಿಗೆ ₹2286 ಕೋಟಿ, ಜೋಡಿ ರೈಲು ಮಾರ್ಗಗಳಿಗೆ ₹1,531 ಕೋಟಿ ನಿಗದಿಯಾಗಿದೆ. ಪ್ರಯಾಣಿಕರ ಮೂಲಸೌಕರ್ಯ ವೃದ್ಧಿಗೆ ₹987 ಕೋಟಿ ಹಂಚಿಕೆ ಮಾಡಲಾಗಿದೆ.

ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಘೋಷಿಸಿರುವ ಅಮೃತ್‌ ಭಾರತ್‌ ಸ್ಟೇಷನ್‌ ಸ್ಕೀಮ್‌ ಅಡಿ ದೇಶದ 40 ರೈಲು ನಿಲ್ದಾಣಗಳನ್ನು ₹30,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಲ್ಲಿ ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಶವಂತಪುರ ರೈಲು ನಿಲ್ದಾಣಗಳು ಆಯ್ಕೆಯಾಗಿದ್ದು, ಅವುಗಳ ಪುನರ್‌ ನಿರ್ಮಾಣ ಆಗಲಿವೆ.ವಿದ್ಯುದ್ದೀಕರಣ: ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್‌ ಕುರಿತು ಮಾಹಿತಿ ನೀಡಿದ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌, ಯುಪಿಎ ಸರ್ಕಾರದ 2009-14ರವರೆಗಿನ 5 ವರ್ಷದ ಅವಧಿಯಲ್ಲಿ ಕರ್ನಾಟಕಕ್ಕೆ ಬರೀ ₹ 835 ಕೋಟಿ ಮಾತ್ರ ದೊರೆತಿತ್ತು. ಆದರೆ ನಮ್ಮ ಎನ್‌ಡಿಎ ಸರ್ಕಾರ ಕರ್ನಾಟಕಕ್ಕೆ ಬರೋಬ್ಬರಿ ₹7524 ಕೋಟಿ ಅನುದಾನ ಮೀಸಲಿರಿಸಿದೆ. ಆಗಿನ ಸರ್ಕಾರದ 5 ವರ್ಷದ ಅನುದಾನಕ್ಕೆ ಹೋಲಿಸಿದರೆ 9ಪಟ್ಟು ಹೆಚ್ಚು ಅನುದಾನ ಹಂಚಿಕೆ ಮಾಡಿದೆ ಎಂದರು.ಕರ್ನಾಟಕದಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳನ್ನೂ ಹೆಚ್ಚಿಸಲಾಗಿದೆ. ಅಮೃತ್‌ ರೈಲು ನಿಲ್ದಾಣ, ಜೋಡಿಮಾರ್ಗ, ವಿದ್ಯುದ್ದೀಕರಣ ಸೇರಿ ಪ್ರತಿ ಕೆಲಸಗಳಿಗೂ ವೇಗ ದೊರೆತಿದೆ ಎಂದರು.ರಾಜ್ಯದಲ್ಲಿ ರೈಲ್ವೆ ವಿದ್ಯುದ್ದೀಕರಣ ಕಾರ್ಯ ಶೇ.97ರಷ್ಟು ಪೂರ್ಣಗೊಂಡಿದೆ. ಇನ್ನು ಕಳೆದ ಒಂದು ವರ್ಷದಲ್ಲಿ 595 ರೈಲ್ವೆ ಕೆಳ ಸೇತುವೆ, ಮೇಲ್ಸೇತುವೆಗಳನ್ನು ನಿರ್ಮಿಸಿದ್ದು, ಇದು ಹೆಮ್ಮೆಯ ವಿಷಯ ಎಂದರು.ಇದರ ಜತೆಗೆ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಉತ್ತೇಜನ ನೀಡುವ ಕೆಲಸಗಳನ್ನೂ ರೈಲ್ವೆ ಇಲಾಖೆ ಮಾಡಿದೆ. ಇದಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ 81 ಮಳಿಗೆ ನಿರ್ಮಿಸಲಾಗಿದೆ. "ಒನ್‌ ಸ್ಟೇಷನ್‌, ಒನ್‌ ಪ್ರೊಡಕ್ಟ್‌ " ಎಂಬ ಹೆಸರಲ್ಲಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಚನ್ನಪಟ್ಟಣದ ಬೊಂಬೆಗಳು ಹೆಚ್ಚು ಖ್ಯಾತಿ ಗಳಿಸಿವೆ. ಹಿಂದೊಮ್ಮೆ ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ಚನ್ನಪಟ್ಟಣದ ಬೊಂಬೆಗಳನ್ನು ನೀಡಲಾಗಿತ್ತು ಎಂದು ಇದೇ ವೇಳೆ ಸ್ಮರಿಸಿದರು.ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳ್ಳಲಿ: ಪ್ರತಿಯೊಂದು ರೈಲ್ವೆ ಯೋಜನೆಗಳು ಆಯಾ ರಾಜ್ಯದ ಸರ್ಕಾರದ ಸಹಕಾರದಿಂದಲೇ ನಡೆಯುತ್ತವೆ. ಹೊಸ ಯೋಜನೆಗಳ ಅನುಷ್ಠಾನಕ್ಕೆ ಪ್ರಮುಖವಾಗಿ ಭೂ ಸ್ವಾಧೀನ ಆಗಬೇಕು. ರಾಜ್ಯ ಸರ್ಕಾರಗಳು ಎಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುತ್ತವೆಯೋ ಅಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಬಹುದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಹೆಚ್ಚು ಮುತುವರ್ಜಿ ವಹಿಸಿ ಭೂಸ್ವಾಧೀನ ಪ್ರಕ್ರಿಯೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಕಳೆದ ಬಜೆಟ್‌ನಲ್ಲಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಕರ್ನಾಟಕ ರಾಜ್ಯದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ₹7,561 ಕೋಟಿ ಹಂಚಿಕೆ ಮಾಡಲಾಗಿತ್ತು. ಅಂದರೆ ಸುಮಾರು ₹37 ಕೋಟಿಯಷ್ಟು ಕಡಿಮೆ ಅನುದಾನವನ್ನು ಈ ಬಾರಿ ನೀಡಲಾಗಿದೆ.---------ಹೊಸ ರೈಲು ಮಾರ್ಗಗಳಿಗೆ ಹಂಚಿಕೆಯಾದ ಹಣಯೋಜನೆಗಳು-ಅನುದಾನಬಾಗಲಕೋಟೆ-ಕುಡಚಿ-₹410 ಕೋಟಿಗದಗ(ತಳಕಲ್)-ವಾಡಿ-₹380 ಕೋಟಿಗಿಣಗೇರಾ-ರಾಯಚೂರು-₹300 ಕೋಟಿತುಮಕೂರು-ದಾವಣಗೆರೆ(ವಯಾ ಚಿತ್ರದುರ್ಗ)-₹300 ಕೋಟಿತುಮಕೂರು-ರಾಯದುರ್ಗ(ವಯಾ ಕಲ್ಯಾಣದುರ್ಗ)-₹250 ಕೋಟಿ

ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು-₹200 ಕೋಟಿ

ಮರಿಕುಪ್ಪಂ-ಕುಪ್ಪಂ-₹170 ಕೋಟಿ

ಕಡೂರು-ಚಿಕ್ಕಮಗಳೂರು-ಹಾಸನ-₹160 ಕೋಟಿಬೆಳಗಾವಿ-ಧಾರವಾಡ(ವಯಾ ಕಿತ್ತೂರು)-₹50 ಕೋಟಿಮಾಲಗೂರ-ಬೇಲೂರು-₹05 ಕೋಟಿ-ಬಾಕ್ಸ್‌-2-ಜೋಡಿ ರೈಲು ಮಾರ್ಗಕ್ಕೆ ಹಂಚಿಕೆಯಾದ ಹಣಯೋಜನೆ-ಅನುದಾನಹೊಸಪೇಟೆ-ತಿನೈಗೇಟ್‌-ವಾಸ್ಕೋ ಡ ಗಾಮಾ-₹400 ಕೋಟಿ

ಬೆಂಗಳೂರು ಕಂಟೋನ್ಮೆಂಟ್‌-ವೈಟ್‌ಫೀಲ್ಡ್‌-₹260 ಕೋಟಿ

ಲೋಂಡಾ-ಮೀರಜ್‌-₹200 ಕೊಟಿ

ಗದಗ-ಹುಟಗಿ-₹197 ಕೋಟಿ

ಪೆನುಕೊಂಡ-ಧರ್ಮಾವರಂ-₹180.4 ಕೋಟಿ

ಬೈಯಪ್ಪನಹಳ್ಳಿ-ಹೊಸೂರು-₹150 ಕೋಟಿ

ಯಶವಂತಪುರ-ಚನ್ನಸಂದ್ರ-₹150 ಕೋಟಿ

ಹೊಸೂರು-ಮಾಲೂರು-₹100.1 ಕೋಟಿ

ಹುಬ್ಬಳ್ಳಿ-ಚಿಕ್ಕಜಾಜೂರು-₹94 ಕೋಟಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ