ಕನ್ನಡಪ್ರಭ ವಾರ್ತೆ ಕವಿತಾಳ
ಇಲ್ಲಿನ ಪಪಂಯಲ್ಲಿ ಕಂದಾಯ ನಿರೀಕ್ಷಕ ಫಯಾಜ್ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕಿರಲಿಂಗಪ್ಪ, ಪಪಂ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ಅರಕೇರಿ, ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಎಂಸಿ ಅಧ್ಯಕ್ಷ ಮೌನೇಶ ಕೊಡ್ಲಿ, ಕನ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಲವಂತ ಯಾದವ ಮತ್ತು ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಈರಮ್ಮ ಯಾಕೂಬ ಕಡತಲ್ ಧ್ವಜಾರೋಹಣ ಮಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾದ ಶಕುಂತಲಾ ಧ್ವಜಾರೋಹಣ ಮಾಡಿದರು.ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ವೆಂಕಟೇಶ ನಾಯಕ ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಉತ್ತಮ ಸೇವೆಗಾಗಿ ಪಪಂ ಪೌರ ಕಾರ್ಮಿಕ ಮಹಿಳೆ ಸುಶೀಲಮ್ಮ ಮತ್ತು ಪರಸಾಪುರ ಸರ್ಕಾರಿ ಶಾಲೆಯಲ್ಲಿ ಸತತ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸತ್ಯಪ್ಪ ಹೆಳವರ್ ಅವರನ್ನು ಪಿಎಸ್‌ಐ ವೆಂಕಟೇಶ ನಾಯಕ ಸನ್ಮಾನಿಸಿದರು.
ಮಲ್ಲದಗುಡ್ಡದಲ್ಲಿ ಗಣರಾಜ್ಯೋತ್ಸವ
ಕವಿತಾಳ ಪಟ್ಟಣದ ಸುರೇಶ್ ಪತ್ತಾರ್ ಅವರು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ನೀಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಂಕ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಆರೂಢ ಅಯ್ಯಪ್ಪ ತಾತನವರು. ಸೇರಿ ಅನೇಕರು ಇದ್ದರು.